ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019: ರಾಜಸ್ಥಾನ್ vs ಬೆಂಗಳೂರು ಪಂದ್ಯದ ಫಲಿತಾಂಶವಿಲ್ಲ!

Bangalore vs Rajasthan, 49th Match - Live Cricket Score

ಬೆಂಗಳೂರು, ಏಪ್ರಿಲ್ 30: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 30) ನಡೆದ ಐಪಿಎಲ್ 49ನೇ ಪಂದ್ಯ ಫಲಿತಾಂಶವಿಲ್ಲವೆಂದು ಘೋಷಿಸಲ್ಪಟ್ಟಿತು. ಮಳೆ ಸುರಿದ ಕಾರಣ ಪಂದ್ಯವನ್ನು 5 ಓವರ್‌ಗೆ ಕಡಿತಗೊಳಿಸಲಾಯಿತಾದರೂ ಆಟ ಪೂರ್ಣಗೊಳ್ಳಲಿಲ್ಲ. ಅಂತೂ ಎರಡೂ ತಂಡಗಳ ಪಾಲಿಗೂ ಪ್ಲೇ ಆಫ್ ಆಸೆ ಅಸ್ಥಿರಗೊಂಡಂತಾಗಿದೆ.

ಪಂದ್ಯದ Live Score, ಸ್ಕೋರ್‌ಕಾರ್ಡ್ ಕೆಳಗಿದೆ

1
45925

ಏಪ್ರಿಲ್ 30ರ 8 pmಗೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣ ತಡರಾತ್ರಿ ಆರಂಭಗೊಂಡಿತು. ಟಾಸ್ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ಬೆಂಗಳೂರು ಪರ ನಾಯಕ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. 10 ಎಸೆತಗಳಿಗೆ ಕೊಹ್ಲಿ 27 ರನ್ ರನ್ ಸೇರಿಸಿದರು. ಇನ್ನು ಎಬಿ ಡಿ ವಿಲಿಯರ್ಸ್ 10, ಗುರ್‌ಕೀರತ್ ಸಿಂಗ್ 6, ಪಾರ್ಥಿವ್ ಪಟೇಲ್ 8 ರನ್‌ ಕೊಡುಗೆ ತಂಡಕ್ಕೆ ಲಭಿಸಿತು.

ಎಂಎಸ್ ಧೋನಿಯ ಆರೋಗ್ಯ ಸ್ಥಿತಿಯ ಮಾಹಿತಿ ನೀಡಿದ ಸ್ಟೀಫನ್ ಫ್ಲೆಮಿಂಗ್ಎಂಎಸ್ ಧೋನಿಯ ಆರೋಗ್ಯ ಸ್ಥಿತಿಯ ಮಾಹಿತಿ ನೀಡಿದ ಸ್ಟೀಫನ್ ಫ್ಲೆಮಿಂಗ್

ಆರ್‌ಸಿಬಿ 5 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 62 ರನ್ ಬಾರಿಸಿತು. ಬೆಂಗಳೂರು ಇನ್ನಿಂಗ್ಸ್ ವೇಳೆ ರಾಜಸ್ಥಾನ್‌ನ ಶ್ರೇಯಸ್ ಗೋಪಾಲ್ 12 ರನ್‌ಗೆ 3, ಒಶಾನೆ ಥೋಮಸ್ 2, ರಿಯಾನ್ ಪರಾಗ್ ಮತ್ತು ಜಯದೇವ್ ಉನಾದ್ಕತ್ ತಲಾ 1 ವಿಕೆಟ್‌ನೊಂದಿಗೆ ಮಿಂಚಿದರು.

ಕ್ರಿಕೆಟ್‌: ಜುಲೈ 25ರಂದು 2ನೇ ಗ್ಲೋಬಲ್‌ ಟಿ20 ಕ್ರಿಕೆಟ್‌ ಲೀಗ್‌ ಆರಂಭಕ್ರಿಕೆಟ್‌: ಜುಲೈ 25ರಂದು 2ನೇ ಗ್ಲೋಬಲ್‌ ಟಿ20 ಕ್ರಿಕೆಟ್‌ ಲೀಗ್‌ ಆರಂಭ

ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡ, ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ 28 (13 ಎಸೆತ), ಲಿಯಾಮ್ ಅಜೇಯ 11 ರನ್ ಕೊಡುಗೆಯೊಂದಿಗೆ 3.2 ಓವರ್‌ಗೆ 1 ವಿಕೆಟ್ ನಷ್ಟದಲ್ಲಿ 41 ರನ್ ಬಾರಿಸಿತು. ಆದರೆ ಮತ್ತೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು ನಿಲ್ಲಿಸಲಾಯ್ತು.

ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್ಭಾರತ ಬಿಟ್ಟು ಹೊರಡೋ ಮುನ್ನ ಭಾವನಾತ್ಮಕ ಸಂದೇಶ ಬರೆದ ವಾರ್ನರ್

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ, ಲಿಯಾಮ್ ಲಿವಿಂಗ್ಸ್ಟೋನ್, ಸಂಜು ಸ್ಯಾಮ್ಸನ್ (W), ಸ್ಟೀವನ್ ಸ್ಮಿತ್ (ಸಿ), ರಿಯಾನ್ ಪರಾಗ್, ಸ್ಟುವರ್ಟ್ ಬಿನ್ನಿ, ಮಹೀಪಾಲ್ ಲೋಮರರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ವರುಣ್ ಆ್ಯರನ್, ಒಶೇನ್ ಥಾಮಸ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಹೆನ್ರಿಚ್ ಕ್ಲಾಸೆನ್, ಗುರ್‌ಕೀರತ್ ಸಿಂಗ್ ಮನ್, ಮಾರ್ಕಸ್ ಸ್ಟೋಯ್ನಿಸ್, ಪವನ್ ನೇಗಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲ್ವಂತ್ ಖೇಜೋಲಿಯ, ಯುಜುವೇಂದ್ರ ಚಾಹಲ್.

Story first published: Wednesday, May 1, 2019, 0:49 [IST]
Other articles published on May 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X