ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಆಯ್ಕೆ

Bangladesh announced 19-man squad for the T20I series against New Zealand

ಬೆಂಗಳೂರು, ಆಗಸ್ಟ್ 19: ನ್ಯೂಜಿಲೆಂಡ್ ತಂಡದ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಬಾಂಗ್ಲಾದೇಶ ತಂಡವನ್ನು ಇಂದು ಹೆಸರಿಸಲಾಗಿದೆ. 19 ಸದಸ್ಯರ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್‌ನ ಆಯ್ಕೆ ಸಮಿತಿ ಇಂದು ಅಂತಿಮಗೊಳಿಸಿದೆ. ಈ ಸರಣಿ ಸೆಪ್ಟೆಂಬರ್ 1 ರಿಂದ ಆರಂಭವಾಗಲಿದೆ. ಈ ಸರಣಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಮರಳಿದ್ದಾರೆ. ಕೊರೊನಾವೈರಸ್ ನಿಯಮಗಳ ಕಾರಣದಿಂದಾಗಿ ಕಳೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಮುಷ್ಫಿಕರ್ ರಹೀಮ್ ತಂಡದಿಂದ ಹೊಗುಳಿದಿದ್ದರು. ಜಿಂಬಾಬ್ವೆ ವಿರುದ್ಧದ ಸರಣಿಯಿಂದಲೂ ಮೊದಲೇ ತವರಿಗೆ ಮರಳಿದ್ದ ರಹೀಮ್ ಈಗ ಟಿ20 ವಿಶ್ವಕಪ್‌ಗೆ ತಯಾರಾಗಲು ನ್ಯೂಜಿಲೆಂಡ್ ತಂಡದ ವಿರುದ್ಧದ ಸರಣಿಯ ಮೂಲಕ ಸಿದ್ಧತೆಯನ್ನು ನಡೆಸಲಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಲು ಮೊದಲಿಗೆ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿದ ನಂತರ ಸೂಪರ್ 12 ಹಂತಕ್ಕೆ ಸ್ಥಾನವನ್ನು ಸಂಪಾದಿಸಿಕೊಳ್ಳಬೇಕಿದೆ. ಒಟ್ಟು 8 ತಂಡಗಳ ಮಧ್ಯೆ ಈ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿದೆ. ಇದರಲ್ಲಿ ಬಾಂಗ್ಲಾದೇಶ ಒಮಾನ್, ಪಪುವಾ ನ್ಯೂಗಿನಿ ಹಾಗೂ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ. ಇದರಲ್ಲಿ ಗೆದ್ದು ಸೂಪರ್ 12 ಹಂತಕ್ಕೆ ಬಾಂಗ್ಲಾದೇಶ ತಂಡ ಅರ್ಹತೆಯನ್ನು ಪಡೆಯಬೇಕಾಗಿದೆ.

ಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರಟಿಟ್ವೆಂಟಿ ವಿಶ್ವಕಪ್‌: 15 ಆಟಗಾರರ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ; ಸ್ಥಾನ ಪಡೆದ ಬಲಿಷ್ಠ ಆಟಗಾರ

ಇನ್ನು ಈ ಬಾರಿಯ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡ ಅತ್ಯುತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಅಲ್ಲಿನ ಕ್ರಿಕೆಟ್ ಮಂಡಳಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಕೂಡ ನಡೆಸುತ್ತಿದ್ದು ಸಾಕಷ್ಟು ಪ್ರಮುಖ ಸರಣಿಗಳನ್ನು ಪೂರ್ವಸಿದ್ಧತಾ ರೂಪದಲ್ಲಿ ಆಯೋಜಿಸಿದೆ. ಇನ್ನು ಮುಖ್ಯ ಸಂಗತಿಯೆಂದರೆ ಬಾಂಗ್ಲಾದೇಶ ತಂಡ ಕೂಡ ಇದಕ್ಕೆ ಪೂರಕವಾಗಿ ಕೆಲ ಅದ್ಭುತ ಪ್ರದರ್ಶನ ನೀಡುವ ಮೂಲಕ ಉತ್ತಮ ಫಲಿತಾಂಶವನ್ನು ಪಡೆಯುತ್ತಿದೆ. ಇದಕ್ಕೆ ಸಾಕ್ಷಿ ಇತ್ತೀಚೆಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ. ಈ ಸರಣಿಯಲ್ಲಿ ಬಾಂಗ್ಲಾದೇಶ ಆಸ್ಟ್ರೇಲಿಯಾ ತಂಡವನ್ನು 4-1 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದು ಬಾಂಗ್ಲಾದೇಶ ಇತಿಹಾಸ ನಿರ್ಮಿಸಿದೆ.

ಮೊದಲಿಗೆ ಬಾಂಗ್ಲಾದೇಶ ಜಿಂಬಾಬ್ವೆ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗವಹಿಸಿ ಅಲ್ಲಿ ಗೆದ್ದು ಬೀಗಿತ್ತು. ನಂತರ ಆಸ್ಟ್ರೇಲಿಯಾ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಂಡಿತ್ತು. ಈ ಸರಣಿಯನ್ನು ಬಾಂಗ್ಲಾದೇಶ ಐತಿಹಾಸಿಕ ರೀತಿಯಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಈಗ ನ್ಯೂಜಿಲೆಂಡ್ ತಂಡದ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸುವ ವಿಶ್ವಾಸವನ್ನು ಹೊಂದಿದೆ.

ಬಾಂಗ್ಲಾದೇಶ ಟಿ20 ತಂಡ ಹೆಚ್ಚು ಸ್ಥಿರವಾಗಿರುವಂತೆ ಕಾಣಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಸುಲಭವಾಗಿ ಗೆದ್ದುಕೊಂಡಿದ್ದ ಕಾರಣ ಈ ತಂಡದಲ್ಲಿ ಪ್ರಮುಖ ಬದಲಾವಣೆಯನ್ನು ಮಾಡದಿರಲು ನಿರ್ಧರಿಸಲಾಗಿದೆ. ಆದರೆ ರಹೀಮ್ ಹಾಗೂ ಲಿಟನ್ ದಾಸ್ ತಂಡಕ್ಕೆ ಮರಳಿದ್ದಾರೆ. ಇನ್ನು ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ನೂರುಲ್ ಹಸನ್ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ. ಉಳಿದಂತೆ ಅಮಿನ್ಯೂಲ್ ಇಸ್ಲಾಮ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದ್ದಾರೆ.

ಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರುಟಿ ಟ್ವೆಂಟಿ ವಿಶ್ವಕಪ್‌ಗೆ ಹಾರ್ದಿಕ್ ಪಾಂಡ್ಯ ಬದಲು ಆಯ್ಕೆಯಾಗಬಲ್ಲ 3 ಆಟಗಾರರು

Mohammed Siraj ಗೆ ಅಂದು troll ಮಾಡಿದವರು ಇಂದು ಹಾರ ಹಾಕಿ ಸನ್ಮಾನಿಸುತ್ತಿದ್ದಾರೆ | Oneindia Kannada

ಇನ್ನು ಬಾಂಗ್ಲಾದೇಶದ ವಿರುದ್ಧಧ ಈ ಸರಣಿಗೆ ಪ್ರವಾಸಿ ನ್ಯೂಜಿಲೆಂಡ್ ತಂಡದಲ್ಲಿ ಪ್ರಮುಖ ಆರು ಆಟಗಾರರು ಪಾಲ್ಗೊಳ್ಳುತ್ತಿಲ್ಲ. ಐಪಿಎಲ್‌ನಲ್ಲಿ ಭಾಗವಹಿಸುವ ಕಾರಣದಿಂದಾಗಿ ಈ ನಾಯಕ ಕೇನ್ ವಿಲಿಯಮ್ಸನ್ ಸಹಿತ ಕೆಲ ಆಟಗಾರರು ಈ ಪ್ರವಾಸದಿಂದ ಹಿಂದಕ್ಕೆ ಸರಿದಿದ್ದಾರೆ. ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಟಾಮ್ ಲಾಥಮ್ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್ ವಿರುದ್ಧಧ ಸರಣಿಗೆ ಆಯ್ಕೆಯಾದ ಬಾಂಗ್ಲಾದೇಶ ಟಿ20 ತಂಡ: ಮಹ್ಮದುಲ್ಲಾ (ನಾಯಕ), ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ಮೊಸದ್ದೆಕ್ ಹುಸೈನ್, ಅಫೀಫ್ ಹುಸೈನ್, ಮೊಹಮ್ಮದ್ ನೈಮ್, ನೂರುಲ್ ಹಸನ್, ಶಮೀಮ್ ಹುಸೇನ್, ರುಬೆಲ್ ಹುಸೇನ್, ಮುಸ್ತಫಿಜುರ್ ರಹಮಾನ್, ತಸ್ಕಿನ್ ಅಹ್ಮದ್
ಮೊಹಮ್ಮದ್ ಸೈಫುದ್ದೀನ್, ಶೊರಿಫುಲ್ ಇಸ್ಲಾಂ, ತೈಜುಲ್ ಇಸ್ಲಾಂ, ಮಹೇದಿ ಹಸನ್, ಅಮೀನುಲ್ ಇಸ್ಲಾಂ, ನಸುಮ್ ಅಹ್ಮದ್

Story first published: Friday, August 20, 2021, 10:07 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X