ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶಕ್ಕೆ ಕ್ರೇಗ್ ಮೆಕ್‌ಮಿಲನ್ ನೂತನ ಬ್ಯಾಟಿಂಗ್ ಕೋಚ್

Bangladesh appoint Craig McMillan as batting coach

ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಕ್ರೇಗ್ ಮೆಕ್‌ಮಿಲನ್ ಅವರು ಬ್ಯಾಟಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮುಂಬರಲಿರುವ ಶ್ರೀಲಂಕಾ ಪ್ರವಾಸಕ್ಕೆ ಮೆಕ್‌ಮಿಲನ್ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಪುರುಷರ ಕ್ರಿಕೆಟ್ ವರ್ಲ್ಡ್‌ಕಪ್ ಚಾಲೆಂಜ್ ಲೀಗ್ ಎ ಮುಂದೂಡಿದ ಐಸಿಸಿಪುರುಷರ ಕ್ರಿಕೆಟ್ ವರ್ಲ್ಡ್‌ಕಪ್ ಚಾಲೆಂಜ್ ಲೀಗ್ ಎ ಮುಂದೂಡಿದ ಐಸಿಸಿ

ಹಿಂದೆ ಕೋಚ್ ಆಗಿದ್ದ ನೀಲ್ ಮೆಕೆಂಜಿ ಅವರು ವೈಯಕ್ತಿಕ ಕಾರಣದಿಂದಾಗಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೊರೊನಾ ಭೀತಿಯ ಸಂದರ್ಭ ತನ್ನ ತವರಾದ ದಕ್ಷಿಣ ಆಫ್ರಿಕಾದಲ್ಲಿ ಕುಟುಂಬಸ್ಥರ ಜೊತೆಗಿರಬೇಕಾಗಿದೆ ಎಂದು ರಾಜೀನಾಮೆ ವೇಳೆ ಮೆಕೆಂಜಿ ಹೇಳಿದ್ದರು.

ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಕನಸಿನ್ನೂ ಜೀವಂತ: ರಾಬಿನ್ ಉತ್ತಪ್ಪಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್ ಕನಸಿನ್ನೂ ಜೀವಂತ: ರಾಬಿನ್ ಉತ್ತಪ್ಪ

ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಾಂಗ್ಲಾದೇಶ ತಂಡ ಅಕ್ಟೋಬರ್-ನವೆಂಬರ್‌ನಲ್ಲಿ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲಿದೆ. ಸರಣಿಗೂ ಮುನ್ನ ನಡೆಯುವ ಟೂರ್ ಕ್ಯಾಂಪ್‌ನಿಂದಲೇ ಮೆಕ್‌ಮಿಲನ್ ಕೋಚ್‌ ಜವಾಬ್ದಾರಿ ಹೊರಲಿದ್ದಾರೆ. ಈ ಮೊದಲು ಕ್ಯಾಂಟರ್ಬರಿ, ಮಿಡ್ಲ್‌ಸೆಕ್ಸ್ ಮತ್ತು ಐಪಿಎಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್‌ಗೆ ಕೋಚಿಂಗ್ ನೀಡಿದ ಅನುಭವ ಮೆಕ್‌ಮಿಲನ್ ಹೊಂದಿದ್ದಾರೆ.

ಐಪಿಎಲ್‌ಗೆ ಮತ್ತೊಂದು ಹೊಡೆತ: ಪ್ರಾಯೋಜಕತ್ವಕ್ಕೆ ಕಂಪನಿಯೊಂದು ನಕಾರ!ಐಪಿಎಲ್‌ಗೆ ಮತ್ತೊಂದು ಹೊಡೆತ: ಪ್ರಾಯೋಜಕತ್ವಕ್ಕೆ ಕಂಪನಿಯೊಂದು ನಕಾರ!

ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗರಾಗಿರುವ ಕ್ರೇಗ್ ಮೆಕ್‌ಮಿಲನ್, ದಶಕದ ಕಾಲ ಎಲ್ಲಾ ಮಾದರಿಯ ಕ್ರಿಕೆಟ್‌ಗಳಲ್ಲಿ ಸುಮಾರು 8000 ಅಂತಾರಾಷ್ಟ್ರೀಯ ರನ್ ದಾಖಲೆ ಹೊಂದಿದ್ದಾರೆ. ಕ್ರಿಕೆಟ್ ನಿವೃತ್ತಿ ಬಳಿಕ ಮೆಕ್‌ಮಿಲನ್ ನ್ಯೂಜಿಲೆಂಡ್ ಬ್ಯಾಟಿಂಗ್ ಕಮ್ ಫೀಲ್ಡಿಂಗ್ ಕೋಚ್ ಆಗಿ 2014ರಿಂದ 2019ರ ವರೆಗೆ ಕಾರ್ಯ ನಿರ್ವಹಿಸಿದ್ದರು.

Story first published: Wednesday, August 26, 2020, 10:21 [IST]
Other articles published on Aug 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X