ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ನಾಯಕ ತಮೀಮ್ ಇಕ್ಬಾಲ್‌ಗೆ ಐಸಿಸಿಯಿಂದ ದಂಡ

Bangladesh captain Tamim Iqbal fined for breaching ICC Code of Conduct

ಧಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ತಮೀಮ್ ಇಕ್ಬಾಲ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಪಂದ್ಯದ ಸಂಭಾವನೆಯ ಶೇ 15ರಷ್ಟು ದಂಡ ವಿಧಿಸಿದೆ. ಧಾಕಾದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪುರುಷರ ಕ್ರಿಕೆಟ್ ವರ್ಲ್ಡ್‌ಕಪ್‌ ಸೂಪರ್ ಲೀಗ್ ಸೀರೀಸ್ ಪಂದ್ಯದಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದರಿಂದ ಇಕ್ಬಾಲ್‌ಗೆ ದಂಡ ವಿಧಿಸಲಾಗಿದೆ.

ಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆಐಪಿಎಲ್ 2021 ಯುಎಇಗೆ ಸ್ಥಳಾಂತರ, ಬಿಸಿಸಿಐ ಅಧಿಕೃತ ಘೋಷಣೆ

ಅಂತಾರಾಷ್ಟ್ರೀಯ ಪಂದ್ಯದ ವೇಳೆ ಆಟಗಾರ ಅಥವಾ ಬೆಂಬಲ ಸಿಬ್ಬಂದಿಗೆ ಮಾತಿನ ಮೂಲಕ ಅಶ್ಲೀಲ ನಡೆ ತೋರಿಸಿದ್ದಕ್ಕಾಗಿ ಆರ್ಟಿಕಲ್ 2.3ರಂತೆ ತಮೀಮ್ ಇಕ್ಬಾಲ್‌ಗೆ ದಂಡ ವಿಧಿಸಲಾಗಿದೆ. ಅಲ್ಲದೆ ತಮೀಮ್‌ಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ. ಕಳೆದ 24 ತಿಂಗಳಲ್ಲಿ ತಮೀಮ್ ಮೈದಾನದಲ್ಲಿ ತಪ್ಪೆಸಗಿದ್ದು ಇದೇ ಮೊದಲು.

ತಮೀಮ್ ತಪ್ಪಾಗಿ ನಡೆದುಕೊಂಡ ಈ ಘಟನೆ ನಡೆದಿದ್ದು ಶುಕ್ರವಾರ ನಡೆದಿದ್ದ ಲಂಕಾ-ಬಾಂಗ್ಲಾ ಮೂರನೇ ಏಕದಿನ ಪಂದ್ಯದಲ್ಲಿ ಬಾಂಗ್ಲಾ ಇನ್ನಿಂಗ್ಸ್‌ನ 10ನೇ ಓವರ್‌ ವೇಳೆ ದುಶ್ಮಂತ ಚಮೀರ ಎಸೆತಕ್ಕೆ ಇಕ್ಬಾಲ್ ಬ್ಯಾಟ್ ತಾಗಿದ ಚೆಂಡು ಕೀಪರ್ ನಿರೋಶನ್ ಡಿಕ್ವೆಲ್ಲ ಕೈ ಸೇರಿತು. ಇಕ್ಬಾಲ್ ರಿವ್ಯೂ ತೆಗೆದುಕೊಂಡರು. ರಿವ್ಯೂ ಕೂಡ ವಿಫಲವಾದಾಗ ಕೆಟ್ಟದಾಗಿ ಏನೋ ಹೇಳುತ್ತ ಪೆವಿಲಿಯನ್ ಕಡೆಗೆ ಬಂದಿದ್ದರು.

ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್ತೆಂಡೂಲ್ಕರ್ ಪುತ್ರಿ ಸಾರಾ ಜೊತೆಗಿನ 'ಗುಸುಗುಸು' ಬಗ್ಗೆ ಬಾಯ್ತೆರೆದ ಗಿಲ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಶ್ರೀಲಂಕಾ, ಕುಸಾಲ್ ಪೆರೆರಾ 120 ರನ್‌ನೊಂದಿಗೆ 50 ಓವರ್‌ಗೆ 6 ವಿಕೆಟ್ ಕಳೆದು 286 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 42.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 189 ರನ್ ಗಳಿಸಿ 97 ರನ್‌ನಿಂದ ಸೋತಿತು. ಲಂಕಾ ಬೌಲರ್ ಚಮೀರ 5 ವಿಕೆಟ್‌ನೊಂದಿಗೆ ಮಿಂಚಿದರು.

Story first published: Saturday, May 29, 2021, 17:10 [IST]
Other articles published on May 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X