ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದ ಭರ್ಜರಿ ಗೆಲುವಿನ ಬಳಿಕ ಶಾಕಿಬ್‌ ಅಲ್‌ ಹಸನ್‌ ಹೇಳಿದ್ದಿದು!

Bangladesh cricket has come a long way: Shakib al Hasan

ಲಂಡನ್‌, ಜೂನ್‌ 03: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡಕ್ಕೆ ತನ್ನ ಮೊದಲ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ , ಬಾಂಗ್ಲಾ ತಂಡದ ಕ್ರಿಕೆಟ್‌ ಕಳೆದ 10 ವರ್ಷಗಳಲ್ಲಿ ಗಣನೀಯ ಪ್ರಗತಿ ಕಂಡಿದೆ ಎಂದು ಹೇಳಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು

ಕೆನ್ನಿಂಗ್ಟನ್‌ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶಾಕಿಬ್‌ (75) ಮತ್ತು ಮುಷ್ಫಿಕರ್‌ ರಹೀಮ್‌ (78) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ಬಾಂಗ್ಲಾ ತಂಡ ಏಕದಿನ ಕ್ರಿಕೆಟ್‌ನಲ್ಲಿ ತನ್ನ ದಾಖಲೆಯ ಗರಿಷ್ಠ ಮೊತ್ತ (330/6) ದಾಖಲಿಸಿತು. ಬಳಿಕ ಬೌಲಿಂಗ್‌ನಲ್ಲೂ ದಿಟ್ಟ ತನ ಪ್ರದರ್ಶಿಸಿ ಹರಿಣ ಪಡೆಯನ್ನು 309/8ಕ್ಕೆ ಕಟ್ಟಿಹಾಕಿ 21 ರನ್‌ಗಳ ಜಯ ದಾಖಲಿಸಿತು.

ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!ವಿಶ್ವಕಪ್‌: ಅತಿ ಅಪರೂಪದ ದಾಖಲೆ ಬರೆದ ಬಾಂಗ್ಲಾ ಆಲ್‌ರೌಂಡರ್‌!

ಬಾಂಗ್ಲಾದೇಶ ತಂಡ 2007ರಲ್ಲಿ ಕೊನೆಯ ಬಾರಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಜಯ ದಾಖಲಿಸಿತ್ತು. ಅಂದಿನಿಂದ ಇಂದಿನವರೆಗೆ ತಂಡದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಒಂದು ತಂಡದಂತೆ ಅಲ್ಲ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೊಂದಿರುವ ತಂಡವಾಗಿದೆ ಎಂದು ಶಾಕಿಬ್‌ ಹೇಳಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾ ತಂಡದ ಗರಿಷ್ಠ ಮೊತ್ತಗಳ ದಾಖಲೆ!

"12 ವರ್ಷಗಳಲ್ಲಿ ನಮ್ಮ ತಂಡದ ಕ್ರಿಕೆಟ್‌ ಸಾಕಷ್ಟು ಮುಂದುವರಿದಿದೆ. ಅಂದೆಲ್ಲಾ ನಾನು ಚೆನ್ನಾಗಿ ಆಡಿದರೆ ಪ್ರೇಕ್ಷಕರಿಗೆ ಸಂತಸವಾಗುತ್ತಿತ್ತು. ಆದರೆ, ಅದೇ ಪ್ರೇಕ್ಷಕರಿಗೆ ಇಷ್ಟು ಸಾಲದು. ಯಾವುದೇ ತಂಡದ ವಿರುದ್ಧ ಸೋಲುವುದನ್ನು ಅವರು ಸ್ವಾಗತಿಸುವುದಿಲ್ಲ. ಇದು ಕಳೆದ 12 ವರ್ಷಗಳಲ್ಲಿ ನಮ್ಮ ತಂಡ ಸಂಪಾದಿಸಿರುವ ನಿರೀಕ್ಷೆಯ ಮಟ್ಟವಾಗಿದೆ. ಇದು ಸಂತಸ ನೀಡಿದೆ. ಇದು ಆರಂಭವಷ್ಟೇ," ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ ಆಂಡ್ರೆ ರಸೆಲ್‌ ಮಧ್ಯಮ ವೇಗಿ ಅಲ್ಲವಂತೆ!

ಕಳೆದ ಹತ್ತು ವರ್ಷಗಳಲ್ಲಿ ಬಾಂಗ್ಲಾದೇಶ ತಂಡ 50 ಓವರ್‌ಗಳ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಬಹು ರಾಷ್ಟ್ರೀಯ ಟೂರ್ನಿಗಳಲ್ಲಿ ಉತ್ತಮ ಹೋರಾಟ ನಡೆಸುತ್ತಿದೆ. ಹೀಗಾಗಿ ಕ್ರಿಕೆಟ್‌ನ ಕೂಸು ಎಂದು ಕರೆಸಿಕೊಳ್ಳುತ್ತಿದ್ದ ತಂಡ ಇದೀಗ ಬಲಿಷ್ಠ ತಂಡವಾಗಿ ರೂಪುಗೊಳ್ಳತ್ತಿದೆ. 2015ರ ವಿಶ್ವಕಪ್‌ನಲ್ಲಿ ಚೊಚ್ಚಲ ಬಾರಿ ಕ್ವಾರ್ಟರ್‌ಫೈನಲ್ಸ್‌ ತಲುಪಿದ ಸಾಧನೆ ಮಾಡಿತ್ತು. ಇದೀಗ ಈ ಬಾರಿಯ ವಿಶ್ವಕಪ್‌ಗೂ ಮುನ್ನ ನಡೆದ ತ್ರಿಕೋನ ಸರಣಿಯಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ಬಾಂಗ್ಲಾದೇಶ ವಿರುದ್ಧ ಜಯ ದಾಖಲಿಸಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದೆ.

ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!ವಿಶ್ವಕಪ್‌ನಲ್ಲಿ ಪಾಕಿಸ್ತಾನ ದಾಖಲಿಸಿರುವ ಕಡಿಮೆ ಮೊತ್ತದ ದಾಖಲೆಗಳಿವು!

"ಈ ವಿಶ್ವಕಪ್‌ನಲ್ಲಿ ಯಾವ ರೀತಿಯ ಸವಾಲುಗಳು ಎದುರಾಗುತ್ತದೆ ಎಂಬುದನ್ನು ಅರಿತು ಅದಕ್ಕೆ ತಕ್ಕ ರೀತಿಯಲ್ಲಿ ಸಿದ್ದತೆ ನಡೆಸಿದ್ದೇವೆ. ಐರ್ಲೆಂಡ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಉತ್ತಮವಾಗಿ ಆಡಿದ್ದೇವೆ. ಇದು ನಮ್ಮ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಟೂರ್ನಿಯಲ್ಲಿ ನಮ್ಮ ತಂಡ ಸಾಬೀತು ಮಾಡಬೇಕಿರುವುದು ಸಾಕಷ್ಟಿದೆ. ಸವಾಲಿಗೆ ನಾವು ಸಿದ್ದರಿದ್ದೇವೆ,'' ಎಂದು ಶಾಕಿಬ್‌ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.

ವಿಶ್ವಕಪ್‌: ಟೀಮ್‌ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿ ಆಮ್ಲಾವಿಶ್ವಕಪ್‌: ಟೀಮ್‌ ಇಂಡಿಯಾ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿ ಆಮ್ಲಾ

ಬಾಂಗ್ಲಾದೇಶ ತಂಡ ಮುಂದಿನ ಪಂದ್ಯದಲ್ಲಿ ಜೂನ್‌ 5ರಂದು ಕಳೆದ ಬಾರಿಯ ರನ್ನರ್ಸ್‌ಅಪ್‌ ನ್ಯೂಜಿಲೆಂಡ್‌ ವಿರುದ್ಧ ಕೆನ್ನಿಂಗ್ಟನ್‌ ಓವಲ್‌ ಕ್ರೀಡಾಂಗಣದಲ್ಲೇ ಪೈಪೋಟಿ ನಡೆಸಲಿದೆ.

Story first published: Tuesday, June 4, 2019, 15:17 [IST]
Other articles published on Jun 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X