ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್: ಅರ್ಧ ಸಂಬಳವನ್ನು ಸರ್ಕಾರಕ್ಕೆ ನೀಡಿದ ಬಾಂಗ್ಲಾದೇಶ ಕ್ರಿಕೆಟಿಗರು

Bangladesh Cricket Players Donates Half Of Salary

ವಿಶ್ವಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದೆ. ಎಲ್ಲಾ ದೇಶಗಳು ಕೊರೊನಾ ವಿರುದ್ಧ ಹೋರಾಡಲು ನಾನಾ ರೀತಿಯಾಗಿ ಹೋರಾಟಗಳನ್ನು ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಆಯಾ ದೇಶಗಳ ಜನರು ಸ್ಪಂದಿಸುತ್ತಿದ್ದಾರೆ. ಆದರೆ ಬಾಂಗ್ಲಾದೇಶದ ಕ್ರಿಕೆಟಿಗರು ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.

ಬಾಂಗ್ಲಾದೇಶದ ಕ್ರಿಕೆಟ್ ತಂಡದ ಆಟಗಾರರು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಸರ್ಕಾರದ ಜೊತೆಗೆ ನಿಲ್ಲಲು ಮುಂದಾಗಿದ್ದಾರೆ. ತಮ್ಮ ಅರ್ಧ ಸಂಬಳವನ್ನು ಬಾಂಗ್ಲಾದೇಶದ ಕ್ರಿಕೆಟಿಗರು ಸರ್ಕಾರಕ್ಕೆ ನೀಡಲು ಮುಂದಾಗಿದ್ದಾರೆ.

ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!ಕೊಹ್ಲಿಯ ನಂತರ ನಾಯಕತ್ವ ರೋಹಿತ್‌ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!

ವರದಿಯ ಪ್ರಕಾರ ಬಾಂಗ್ಲಾದೇಶದ 27 ಕ್ರಿಕೆಟಿಗರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ 17 ಆಟಗಾರರು ಮತ್ತು ಬಾಂಗ್ಲಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರು 10 ಆಟಗಾರರು ಈ ನಿರ್ಧಾರಕ್ಕೆ ಬಂದಿದ್ದಾರೆಂದು ತಿಳಿದುಬಂದಿದೆ.

ಈ ಬಗ್ಗೆ ಜಂಟಿ ಹೇಳಿಕೆಯನ್ನು ನೀಡಿರುವ ಬಾಂಗ್ಲಾದೇಶ ಕ್ರಿಕೆಟಿಗರು 'ಕೊರೊನಾ ವೈರಸ್ ವಿಶ್ವಾದ್ಯಂತ ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಎಲ್ಲಾ ಸಾರ್ವಜನಿಕರು ಒಟ್ಟಾಗಿ ಕೈ ಜೋಡಿಸಬೇಕಿದೆ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಸಾರ್ವಜನಿಕರು ಅನುಸರಿಸಬೇಕು' ಎಂದಿದ್ದಾರೆ.

ರಿಷಬ್ ಪಂತ್ ಯಶಸ್ಸಿಗೆ ಮಹತ್ವದ ಸಲಹೆ ನೀಡಿದ ಆಸಿಸ್ ದಿಗ್ಗಜರಿಷಬ್ ಪಂತ್ ಯಶಸ್ಸಿಗೆ ಮಹತ್ವದ ಸಲಹೆ ನೀಡಿದ ಆಸಿಸ್ ದಿಗ್ಗಜ

ಕೊರೊನಾ ವಿರುದ್ಧದ ಈ ಹೋರಾಟಕ್ಕೆ ನಾವು ನೀಡುತ್ತಿರವ ಹಣ ತುಂಬಾ ಸಣ್ಣ ಮಟ್ಟದ್ದು. ಆದರೆ ದೇಶದ ಎಲ್ಲರೂ ಇದಕ್ಕೆ ಕೈ ಜೋಡಿಸಿದರೆ ಇದು ಬಹುದೊಡ್ಡ ಮೊತ್ತವಾಗಲಿದೆ ಎಂದು ಈ ಹೇಳಿಕೆಯಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರು ಹೇಳಿದ್ದಾರೆ.

Story first published: Wednesday, March 25, 2020, 21:36 [IST]
Other articles published on Mar 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X