ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೇಸ್‌ಬುಕ್‌ನಲ್ಲಿ ಜೀವಬೆದರಿಕೆಗೆ ಒಳಗಾದ ಶಕೀಬ್ ಅಲ್ ಹಸನ್ ಕ್ಷಮೆಯಾಚನೆ

Bangladesh cricketer Shakib Al Hasan apologises after being threatened in FB live

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ಗೆ ಫೇಸ್‌ಬುಕ್ ಲೈವ್ ಸಂದರ್ಭದಲ್ಲಿ ಜೀವ ಬೆದರಿಕೆಯನ್ನು ಒಡ್ಡಿದ ಘಟನೆ ನಡೆದಿದೆ. ಈ ಬೆದರಿಕೆಯ ಬಳಿಕ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕ್ಷಮೆಯಾಚನೆಯನ್ನು ಮಾಡಿದ್ದಾರೆ.

ಹಿಂದೂ ಧರ್ಮದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು ಎಂಬ ಕಾರಣಕ್ಕೆ ಶಕೀಬ್ ಅಲ್ ಹಸನ್‌ಗೆ ಜೀವ ಬೆದರಿಕೆಯನ್ನು ಒಡ್ಡಲಾಗಿದೆ. ಕೊಲ್ಕತಾದಲ್ಲಿ ನಡೆದಿದ್ದ ಕಾಳಿ ಪೂಜೆ ಕಾರ್ಯಕ್ರಮದಲ್ಲಿ ಶಕೀಬ್ ಅಲ್ ಹಸನ್ ಭಾಗಿಯಾಗಿದ್ದರು. ಇದೇ ಕಾರಣಕ್ಕೆ ಶಕೀಬ್‌ಗೆ ಬೆದರಿಕೆ ಒಡ್ಡಲಾಗಿತ್ತು.

2021ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಸರಣಿಯ ಸಂಪೂರ್ಣ ಪಟ್ಟಿ2021ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಸರಣಿಯ ಸಂಪೂರ್ಣ ಪಟ್ಟಿ

ಬೇರೆ ಧರ್ಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹಸನ್ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ದಾರೆ ಎಂದು ವಿರೋಧ ವ್ಯಕ್ತವಾಗಿತ್ತು. ಭಾನುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಲೈವ್‌ನಲ್ಲಿ ಪಾಲ್ಗೊಂಡಿದ್ದ ಶಕೀಬ್ ಅಲ್ ಹಸನ್‌ಗೆ ಮೊಹ್ಸೀನ್ ತಾಲೂಕ್ದಾರ್ ಎಂಬಾತ ಈ ಬೆದರಿಕೆಯನ್ನು ಒಡ್ಡಿದ್ದ. ಶಕೀಬ್‌ರನ್ನು ತುಂಡುತುಂಡಾಗಿ ಕತ್ತರಿಸುವುದಾಗಿ ಈ ಬೆದರಿಕೆಯಲ್ಲಿ ಆತ ಎಚ್ಚರಿಕೆ ನೀಡಿದ್ದ.

ಈ ಬೆದರಿಕೆ ಬಳಿಕ ಶಕೀಬ್ ಅಲ್ ಹಸನ್ ಕ್ಷಮೆಯಾಚನೆಯನ್ನು ಮಾಡಿದ್ದಾರೆ. ನಾನು ಆ ವೇದಿಕೆಯಲ್ಲಿ ಕೇವಲ 2 ನಿಮಿಷಗಳ ಕಾಲ ಮಾತ್ರವೇ ಇದ್ದೆ. ಆದರೆ ಜನರು ನಾನು ಆ ಕಾರ್ಯಕ್ರಮವನ್ನು ಉದ್ಭಾಟನೆ ಮಾಡಿದ್ದೇನೆ ಎಂದು ಭಾವಿಸಿದ್ದಾರೆ ಎಂದಿದ್ದಾರೆ ಶಕೀಬ್ ಅಲ್ ಹಸನ್.

ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್ಟಿ20 ವಿಶ್ವಕಪ್ ಮುಂದೂಡಿಕೆ: ಫುಡ್ ಡೆಲಿವರಿ ಬಾಯ್ ಆಗಿದ್ದಾರೆ ಮೀಕೆರೆನ್

"ನಾನು ಅದನ್ನು ಮಾಡಿಲ್ಲ. ಪ್ರಜ್ಞಾಪೂರ್ವ ಮುಸ್ಲಿಂ ಆಗಿರುವ ನಾನು ಅದನ್ನು ಮಾಡುವುದಿಲ್ಲ. ಆದರೆ ಬಹುಶಃ ನಾನು ಅಲ್ಲಿಗೆ ಹೊಗಬಾರದಾಗಿತ್ತು. ಅದಕ್ಕಾಗಿ ನಾನು ವಿಷಾದಿಸುತ್ತೇನೆ ಹಾಗೂ ಕ್ಷಮೆಯಾಚಿಸುತ್ತೇನೆ. ಮುಸ್ಮಿಂ ಧಾರ್ಮಿಕ ಅನುಯಾಯಿಯಾಗಿ ನಾನು ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸುತ್ತೇನೆ. ನಾನು ಏನಾದರೂ ತಪ್ಪಿ ಮಾಡಿದ್ದರೆ ದಯವಿಟ್ಟು ನನ್ನನ್ನು ಮನ್ನಿಸಿ" ಎಂದು ಶಕೀಬ್ ಅಲ್ ಹಸನ್ ಕ್ಷಮೆಯಾಚನೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Story first published: Wednesday, November 18, 2020, 9:55 [IST]
Other articles published on Nov 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X