ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಜವಾಯ್ತು ಗಂಗೂಲಿ ಮಾತು, ಬಾಂಗ್ಲಾದೇಶ ಕ್ರಿಕೆಟಿಗರ ಮುಷ್ಕರ ಅಂತ್ಯ

Bangladesh cricketers end strike after Board meets most of their demands

ಧಾಕಾ, ಅಕ್ಟೋಬರ್ 24: ಹಲವಾರು ಬೇಡಿಕೆಗಳನ್ನಿಟ್ಟು ಬಾಂಗ್ಲಾ ದೇಶ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದರಿಂದ ಬಾಂಗ್ಲಾದ ಭಾರತ ಪ್ರವಾಸ ಸರಣಿ ಅನುಮಾನವೆಂಬಂತಿತ್ತು. ಆದರೆ ಬಿಸಿಸಿಐ ನೂತನ ಅದ್ಯಕ್ಷರಾಗಿ ಆಯ್ಕೆಯಾಗಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಾಂಗ್ಲಾ ಪ್ರವಾಸದ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ್ದರು. ಅದರಂತೆ ಬಾಂಗ್ಲಾ ಕ್ರಿಕೆಟಿಗರ ಮುಷ್ಕರ ಕೊನೆಗೊಂಡಿದೆ.

ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!

ವೇತನ ಹೆಚ್ಚಳ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಬಾಂಗ್ಲಾ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದರು. ಪ್ರಥಮದರ್ಜೆ ಕ್ರಿಕೆಟ್‌ ಆಟಗಾರರ ವೇತನ ಹೆಚ್ಚಳದೊಂದಿಗೆ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) ಭರವಸೆ ನೀಡಿರುವುದರಿಂದ ಆಟಗಾರರು ಮುಷ್ಕರ ನಿಲ್ಲಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

'ಬೇಡಿಕೆ ಈಡೇರಿಸುವ ಬಗ್ಗೆ ನಡೆದ ಮಾತುಕತೆ ಯಶಸ್ವಿಯಾಗಿದೆ,' ಎಂದು ಬಾಂಗ್ಲಾದ ಟೆಸ್ಟ್‌ ಮತ್ತು ಟಿ20 ನಾಯಕ, ಆಲ್ ರೌಂಡರ್ ಶಕೀಬ್ ಅಲ್ ಹಸನ್ ಪ್ರತಿಕ್ರಿಯಿಸಿದ್ದಾರೆ. ಸೋಮವಾರ (ಅಕ್ಟೋಬರ್ 21) ಶುರುವಾಗಿದ್ದ ಕ್ರಿಕೆಟಿಗರ ಮುಷ್ಕರದಲ್ಲಿ ಶಕೀಬ್ ಪ್ರಮುಖ ಪಾತ್ರಧಾರಿಯಾಗಿದ್ದರು.

ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!

'ಬಿಸಿಬಿ ಅಧ್ಯಕ್ಷರು ಮತ್ತು ನಿರ್ದೇಶಕರು ನಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ,' ಎಂದು ಹಸನ್ ಹೇಳಿದ್ದಾರೆ. ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡ ನವೆಂಬರ್ 3ರಿಂದ 3 ಟಿ20ಐ, 2 ಟೆಸ್ಟ್ ಪಂದ್ಯಗಳನ್ನಾಡುವುದರಲ್ಲಿದೆ.

ಗಂಗೂಲಿಗೂ ಮುನ್ನ ಬಿಸಿಸಿಐ ಅಧ್ಯಕ್ಷರಾಗಿದ್ದವರು ಯಾರು ಯಾರು?ಗಂಗೂಲಿಗೂ ಮುನ್ನ ಬಿಸಿಸಿಐ ಅಧ್ಯಕ್ಷರಾಗಿದ್ದವರು ಯಾರು ಯಾರು?

ಬಾಂಗ್ಲಾದಲ್ಲಿ ಕ್ರಿಕೆಟಿಗರು ಮುಷ್ಕರ ನಡೆಸುತ್ತಿದ್ದ ಸಂದರ್ಭ ಭಾರತದ ಸುದ್ದಿಗಾರರೊಂದಿಗೆ ಮಾತನಾಡಿದ್ದ ದಾದಾ, ಬಾಂಗ್ಲಾ ಆಟಗಾರರು ಅಲ್ಲಿನ ಸಮಸ್ಯೆಯನ್ನು ಬೇಗನೆ ಪರಿಹರಿಸಿಕೊಳ್ಳುತ್ತಾರೆ. ಪ್ರವಾಸ ಸರಣಿಗಾಗಿ ಭಾರತಕ್ಕೆ ಬಂದೇ ಬರುತ್ತಾರೆ ಎಂದು ನಗುವಿನೊಂದಿಗೆ ಹೇಳಿದ್ದರು. ಗಂಗೂಲಿ ಎಣಿಕೆಯಂತೆಯೇ ಬಾಂಗ್ಲಾ ಕ್ರಿಕೆಟಿಗರು ಮುಷ್ಕರ ನಿಲ್ಲಿಸಿದ್ದಾರೆ.

Story first published: Thursday, October 24, 2019, 11:44 [IST]
Other articles published on Oct 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X