ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ತಂಡದ ಜರ್ಸಿ ಪಾಕಿಸ್ತಾನದಂತಿದೆ ಎಂದ ಬಾಂಗ್ಲಾ ಅಭಿಮಾನಿಗಳು

Bangladesh forced to change World Cup jersey after uproar

ವಿಶ್ವಕಪ್‌: ಅಭಿಮಾನಿಗಳ ಒತ್ತಡಕ್ಕೆ ಮಣಿದು ಜರ್ಸಿ ಬದಲಾಯಿಸಿದ ಬಾಂಗ್ಲಾದೇಶ ತಂಡ

ಢಾಕಾ, ಮೇ 03: ಬಾಂಗ್ಲಾದೇಶ ಕ್ರಿಕೆಟ್‌ ತಂಡ ಮುಂಬರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ತನ್ನ ನೂತನ ಜರ್ಸಿಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು, ಆದರೀಗ ತಾಯ್ನಾಡಿನ ಕ್ರಿಕೆಟ್‌ ಅಭಿಮಾನಿಗಳ ಆಕ್ರೋಶ ಮತ್ತು ಒತ್ತಾಯದ ಮೇರೆಗೆ ತನ್ನ ಜರ್ಸಿ ಬದಲಾವಣೆ ಮಾಡಲು ಮುಂದಾಗಿದೆ.

 ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ಗೆ ಬ್ಯಾಟಿಂಗ್‌ ಫ್ರೆಂಡ್ಲೀ ಪಿಚ್‌ಗಳು: ಸಚಿನ್‌ ತೆಂಡೂಲ್ಕರ್‌ ಇಂಗ್ಲೆಂಡ್‌ನಲ್ಲಿ ವಿಶ್ವಕಪ್‌ಗೆ ಬ್ಯಾಟಿಂಗ್‌ ಫ್ರೆಂಡ್ಲೀ ಪಿಚ್‌ಗಳು: ಸಚಿನ್‌ ತೆಂಡೂಲ್ಕರ್‌

ಬಾಂಗ್ಲಾದೇಶದ ರಾಷ್ಟ್ರ ಧ್ವಜದಲ್ಲಿನ ಹಸಿರು ಮತ್ತು ಕೆಂಪು ಬಣ್ಣಗಳನ್ನೇ ಬಳಕೆ ಮಾಡಿ ಈವರೆಗೆ ಬಾಂಗ್ಲಾ ಕ್ರಿಕೆಟ್‌ ತಂಡದ ಜರ್ಸಿ ನಿರ್ಮಿಸಲಾಗುತ್ತಿತ್ತು. ಆದರೆ, ಕಳೆದ ಸೋಮವಾರ ಬಿಡುಗಡೆ ಮಾಡಲಾದ ಜರ್ಸಿ ಹಸಿರು ಮತ್ತು ಬಿಳಿ ಬಣ್ಣವನ್ನು ಹೊಂದಿತ್ತು.

ಇದು ಬಾಂಗ್ಲಾ ಕ್ರಿಕೆಟ್‌ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗೂ ಗುರಿಯಾಯಿತು. ಹೆಚ್ಚಿನವರು ಇದು ಬಾಂಗ್ಲಾ ಜರ್ಸಿಯಲ್ಲ ಪಾಕಿಸ್ತಾನದ ಜರ್ಸಿಯಂತಿದೆ ಎಂದೆಲ್ಲಾ ಕಟುವಾಗಿ ಟೀಕಿಸಿದ್ದರು.

 ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಭಾರತ ತಂಡದ ವಿಶೇಷ ದಾಖಲೆ

ಈ ಕುರಿತಾಗಿ ಮಾತನಾಡಿರುವ ಬಾಂಗ್ಲಾ ಕ್ರಿಕೆಟ್‌ ಮಂಡಳಿಯ ವಕ್ತಾರ ಜಲಾಲ್‌ ಯೂನಸ್‌, ವಿಶ್ವಕಪ್‌ ಆಯೋಜಕರು ಜಾಹೀರಾತು ಸಲುವಾಗಿ ಬಾಂಗ್ಲಾ ಜರ್ಸಿಯಿಂದ ಕೆಂಪುಬಣ್ಣವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಆದ್ದರಿಂದಲೇ ಹಸಿರು ಮತ್ತು ಬಿಳಿ ಬಣ್ಣದ ಜರ್ಸಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದರು.

"ಹಸಿರು ಮತ್ತು ಬಿಳಿ ಬಣ್ಣದ ಜರ್ಸಿ ಸಿದ್ದಪಡಿಸಲಾಗಿದೆ. ಆದರೆ, ಕ್ರಿಕೆಟ್‌ ಪ್ರಿಯರಿಗೆ ಕೆಂಪು ಬಣ್ಣ ಬೇಕಿದೆ. ಹೀಗಾಗಿ ಐಸಿಸಿಗೆ ನಮ್ಮ ಜರ್ಸಿಯಲ್ಲಿ ಕೆಂಪು ಬಣ್ಣವನ್ನು ಸೇರಿಸಲು ಮನವಿ ಮಾಡಲಾಗಿದೆ,'' ಎಂದು ಯೂನಸ್‌ ಹೇಳಿದ್ದಾರೆ.

 ಐಪಿಎಲ್: ಮಿಂಚಿನ ವೇಗದ ಸ್ಟಂಪಿಂಗ್‌ ಸೀಕ್ರೆಟ್ ಬಿಚ್ಚಿಟ್ಟ ಎಂಎಸ್ ಧೋನಿ ಐಪಿಎಲ್: ಮಿಂಚಿನ ವೇಗದ ಸ್ಟಂಪಿಂಗ್‌ ಸೀಕ್ರೆಟ್ ಬಿಚ್ಚಿಟ್ಟ ಎಂಎಸ್ ಧೋನಿ

ಆರಂಭದಲ್ಲಿ ಹಸಿರು ಮತ್ತು ಕೆಂಪು ಬಣ್ಣಗಳನ್ನೇ ಬಳಕೆ ಮಾಡಲಾಗಿತ್ತು ಆದರೆ ಐಸಿಸಿ ಅಧಿಕಾರಿಗಳ ಮನವಿ ಮೇರೆಗೆ ಕೆಂಪು ಬಣ್ಣದ ಬದಲಾಗಿ ಬಿಳಿಯ ಬಣ್ಣದ ಬಳಕೆ ಮಾಡಲಾಯಿತು ಎಂದು ವಿವರಿಸಿದ್ದಾರೆ.

ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ತಂಡದ ದಕ್ಷಿಣ ಆಫ್ರಿಕಾ ಎದುರು ಓವಲ್‌ ಕ್ರೀಡಾಂಗಣದಲ್ಲಿ ಜೂನ್‌ 2ರಂದು ತನ್ನ ಅಭಿಯಾನ ಆರಂಭಿಸಲಿದೆ. ಇದಕ್ಕೂ ಮೊದಲು ಆತಿಥೇಯ ಐರ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ಎದುರು ತ್ರಿಕೋನ ಸರಣಿಯಲ್ಲಿ ಸ್ಪರ್ಧಿಸಲಿದೆ.

Story first published: Friday, May 3, 2019, 12:03 [IST]
Other articles published on May 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X