ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2019ರ ಕೆಲ ಪಂದ್ಯಗಳನ್ನು ಬಾಂಗ್ಲಾದಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ!

Bangladesh to host few matches of IPL 2019 due to elections

ನವದೆಹಲಿ, ಫೆಬ್ರವರಿ 6: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 12ನೇ ಆವೃತ್ತಿಯ ವೇಳಾಪಟ್ಟಿಗೆ ಚುನಾವಣೆ ಅಡ್ಡಿಯಾಗಿದೆ. ಅದ್ದೂರಿ ಕ್ರಿಕೆಟ್ ಟೂರ್ನಿ ಮತ್ತು ಲೋಕಸಭಾ ವೇಳಾಪಟ್ಟಿಗಳು ಮುಖಾಮುಖಿಯಾಗುವುದರಿಂದ ಐಪಿಎಲ್ ಕೆಲ ಪಂದ್ಯಗಳನ್ನು ಬಾಂಗ್ಲಾದೇಶದಲ್ಲಿ ನಡೆಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ: ಪಾಕ್ ಕೋಚ್ ಮಿಕಿಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ: ಪಾಕ್ ಕೋಚ್ ಮಿಕಿ

ಐಪಿಎಲ್ ಅಂತಿಮ ವೇಳಾಪಟ್ಟಿಯನ್ನು ಬಿಸಿಸಿಐಯು ಫೆಬ್ರವರಿ 4ರಂದು ಘೋಷಿಸುವುದರಲ್ಲಿತ್ತು. ಆದರೆ ಚುನಾವಣೆಯ ಕಾರಣ ಟೂರ್ನಿಯ ವೇಳಾಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಎಲೆಕ್ಷನ್ ಕಮಿಟಿಯ ಹೊಡೆತದಿಂದ ತಪ್ಪಿಸಿಕೊಳ್ಳಲು ಐಪಿಎಲ್‌ನ ಒಟ್ಟು 14 ಪಂದ್ಯಗಳನ್ನು ಭಾರತದ ನೆರೆಯ ರಾಷ್ಟ್ರ ಬಾಂಗ್ಲಾಕ್ಕೆ ಬಿಸಿಸಿಐ ವರ್ಗಾಯಿಸಲಿದೆ ಎನ್ನಲಾಗಿದೆ.

'ಟೂರ್ನಿಯ ದಿನಾಂಕ ಸಮೀಪಿಸುತ್ತಿದೆ. ನಾವು ಚುನಾವಣಾಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಮಾಹಿತಿಯ ಪ್ರಕಾರ ನಾವು ಈ ಬಾರಿಯ ಐಪಿಎಲ್‌ನ ಕೆಲ ಪಂದ್ಯಗಳನ್ನು ಭಾರತದಲ್ಲಿ ನಡೆಸಲು ಸಾಧ್ಯವಿಲ್ಲ. ಬಾಂಗ್ಲಾದೇಶ ನಮಗೆ ನೆರೆಯ ರಾಷ್ಟ್ರವಾಗಿರುವುದರಿಂದ ಕೆಲ ಪಂದ್ಯಗಳನ್ನು ಅಲ್ಲಿ ನಡೆಸಲು ಯೋಚಿಸುತ್ತಿದ್ದೇವೆ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯಿಂದ ಬಾಂಗ್ಲಾ ವೇಗಿ ಟಸ್ಕಿನ್ ಅಹ್ಮದ್ ಔಟ್!ನ್ಯೂಜಿಲ್ಯಾಂಡ್ ಪ್ರವಾಸ ಸರಣಿಯಿಂದ ಬಾಂಗ್ಲಾ ವೇಗಿ ಟಸ್ಕಿನ್ ಅಹ್ಮದ್ ಔಟ್!

ಸದ್ಯ ಬಾಂಗ್ಲಾದಲ್ಲಿ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ಟೂರ್ನಿ ನಡೆಯುತ್ತಿದೆ. ಫೆಬ್ರವರಿ 8ರಂದು ಬಿಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದ ವೇಳೆ ಅಲ್ಲಿ ಉಪಸ್ಥಿತರಿದ್ದು, ಐಪಿಎಲ್ ಬಗ್ಗೆಯೂ ನಿರ್ಧಾರ ಕೈಗೊಳ್ಳುವ ನೆಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಸಿಕೆ ಖನ್ನಾ ಅವರು ಧಾಕಾಗೆ ತೆರಳುವುದರಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Story first published: Wednesday, February 6, 2019, 13:23 [IST]
Other articles published on Feb 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X