ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮೂಳೆ ಮುರಿದರೂ ಒಂದೇ ಕೈಯಲ್ಲಿ ಬ್ಯಾಟು ಹಿಡಿದು ಆಡಿದ ತಮೀಮ್ ಇಕ್ಬಾಲ್

 Bangladesh Opener Tamin Iqbal played in one hand against Sri Lanka

ದುಬೈ, ಸೆಪ್ಟೆಂಬರ್ 16: ಬಲಗೈನ ಬೆರಳ ಮೂಳೆ ಮುರಿದ್ದಿದ್ದರೂ ಸಹ ಒಂದು ಕೈಯಲ್ಲಿ ಬ್ಯಾಟು ಹಿಡಿದು ವೇಗದ ಬೌಲರ್‌ ಅನ್ನು ಎದುರಿಸಿದ ಬಾಂಗ್ಲಾದೇಶ ಆರಂಭಿಕ ಬ್ಯಾಟ್ಸ್‌ಮನ್ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದಾರೆ.

ನಿನ್ನೆ ನಡೆದ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಅವರಿಗೆ ಮೊದಲ ಓವರ್‌ನಲ್ಲೇ ಶ್ರೀಲಂಕಾದ ವೇಗಿ ಸುರಂಗಾ ಲಕ್ಮಲ್ ಅವರ ಚೆಂಡು ಕೈಗೆ ತಾಗಿ ಬೆರಳ ಮೂಳೆ ಮುರಿಯಿತು.

ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು

ಗಾಯಗೊಂಡ ಅವರು ಮೈದಾನದಿಂದ ಹೊರಗೆ ನಡೆದರು ಆಗ ಅವರು ಕೇವಲ ಒಂದು ರನ್ ಗಳಿಸಿದ್ದರು. ಕೈಬೆರಳು ಪರೀಕ್ಷಿಸಿದ ವೈದ್ಯರು ಏಷ್ಯಾಕಪ್ ಟೂರ್ನಿಯಿಂದ ತಮೀಮ್ ಹೊರಗುಳಿಯಬೇಕಾಗುತ್ತದೆ ಎಂದರು.

ಆದರೆ ಎಂಟು ವಿಕೆಟ್ ಬಿದ್ದ ನಂತರ ಮತ್ತೆ ಆಡಲು ಬಂದ ತಮೀಮ್ ಇಕ್ಬಾಲ್ ಒಂದು ಕೈಯಲ್ಲೇ ಬ್ಯಾಟಿಂಗ್ ಮಾಡಿದರು. ವೇಗದ ಬೌಲರ್‌ಗಳನ್ನು ಒಂದೇ ಕೈಯಲ್ಲಿ ಎದುರಿಸಿದರು. ತಮ್ಮ ತ೦ಡ 261 ಗಡಿ ದಾಟಲು ನೆರವಾದರು.

46.5 ಓವರ್ ಆಗಿದ್ದಾಗ ಮುಸ್ತಫಿಜೂರ್ ಔಟಾದರು, ಆಗ ತಂಡದ ಮೊತ್ತ 229 ರನ್ ಅಷ್ಟೆ. ಗಾಯಾಳುವಾಗಿದ್ದರೂ ತಂಡಕ್ಕಾಗಿ ಸ್ಕ್ರೀಜಿಗೆ ಬಂದ ತಮೀಮ್ ಇಕ್ಬಾಲ್ ಅವರು ಮತ್ತೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಮುಶ್ಫಿಕರ್ ರಹೀಮ್ ಅವರಿಗೆ ಉತ್ತಮ ಸಾಥ್ ನೀಡಿ ಕೊನೆಯ ವಿಕೆಟ್‌ಗೆ ಅಮೂಲ್ಯ 32 ರನ್‌ಗಳ ಜೊತೆಯಾಟ ನೀಡಿದರು.

ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ ಏಷ್ಯಾಕಪ್ 2018 ಕದನ ಮುನ್ನೋಟ, ಎಲ್ಲಾ ತಂಡಗಳ ವಿವರ

ತಮೀಮ್ ಇಕ್ಬಾಲ್ ಒಂದೇ ಕೈನಲ್ಲಿ ಬ್ಯಾಕ್‌ಫುಟ್ ಡಿಫೆನ್ಸ್‌ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮೀಮ್ ಇಕ್ಬಾಲ್ ಅವರ ಧೈರ್ಯಕ್ಕೆ ಕ್ರೀಡಾಪ್ರೀತಿಗೆ ವಿಶ್ವದ ಕ್ರಿಕೆಟ್ ಪ್ರೇಮಿಗಳು ಉಘೇ ಎನ್ನುತ್ತಿದ್ದಾರೆ.

Story first published: Sunday, September 16, 2018, 10:34 [IST]
Other articles published on Sep 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X