ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC ನೀತಿ ಸಂಹಿತೆ ಉಲ್ಲಂಘನೆ: ಬಾಂಗ್ಲಾದೇಶ ವೇಗಿಗೆ ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ

Khaled Ahmed

ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ ಬಾಂಗ್ಲಾದೇಶದ ವೇಗಿದ ಖಲೀದ್ ಅಹಮದ್‌ಗೆ ದಂಡ ವಿಧಿಸಲಾಗಿದೆ.

ಪೋರ್ಟ್‌ ಎಲಿಜಬೆತ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆ ಲೆವೆನ್ 1 ಉಲ್ಲಂಘನೆ ಹಿನ್ನಲೆಯಲ್ಲಿ ಪಂದ್ಯದ ಸಂಭಾವನೆಯ ಶೇಕಡಾ 15ರಷ್ಟು ದಂಡ ವಿಧಿಸಲಾಗಿದ್ದು, ವಾರ್ನಿಂಗ್ ನೀಡಲಾಗಿದೆ.

ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.9 ನಿಯಮಗಳನ್ನ ಖಲೀದ್‌ ಉಲ್ಲಂಘಿಸಿರುವುದು ಕಂಡು ಬಂದಿದೆ. ಇದು ಆಟಗಾರ, ಆಟಗಾರರ ಬೆಂಬಲ ಸಿಬ್ಬಂದಿ, ಅಂಪೈರ್, ಮ್ಯಾಚ್ ರೆಫರಿ ಅಥವಾ ಯಾವುದೇ ಮೂರನೇ ವ್ಯಕ್ತಿಗೆ ಅನುಚಿತವಾಗಿ ಚೆಂಡನ್ನು ಎಸೆಯಲು ಸಂಬಂಧಿಸಿದೆ ಅಥವಾ ಅಂತರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುವುದಾಗಿದೆ.

ಇದರಿಂದಾಗಿ ಬಾಂಗ್ಲಾ ವೇಗಿಗೆ ಡಿಮೆರಿಟ್ ಪಾಯಿಂಟ್‌ ಸೇರಿಸಲಾಗಿದ್ದು, ಶಿಸ್ತು ಉಲ್ಲಂಘನೆಯಡಿಯಲ್ಲಿ ಋಣಾತ್ಮಕ ಅಂಶ ದಾಖಲಾಗಿದೆ. ಈ ಘಟನೆಯು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಇನ್ನಿಂಗ್ಸ್‌ನ 95ನೇ ಓವರ್‌ನಲ್ಲಿ ನಡೆದಿದೆ. ಕೈಲ್ ವೆರ್ರೆನ್ ಅಹ್ಮದ್ ಕಡೆಗೆ ಚೆಂಡನ್ನು ಹೊಡೆದಾಗ ಈ ಘಟನೆ ಸಂಭವಿಸಿದೆ. ಬೌಲರ್ ಹಿಂತಿರುಗಿ ಅದನ್ನು ಅನುಚಿತ ಮತ್ತು ಅಪಾಯಕಾರಿ ರೀತಿಯಲ್ಲಿ ವೆರ್ರೆನ್ನೆ ಕಡೆಗೆ ಎಸೆದಿದ್ದು, ಆತನ ಬಲಗೈ ಗ್ಲೌಸ್‌ಗೆ ಬಡಿದಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲೂ ಅಬ್ಬರದ ಬೌಲಿಂಗ್ ದಾಳಿ ನಡೆಸಿದ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶವನ್ನ 2-0 ಅಂತರದಲ್ಲಿ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್ ಮಾಡಿತು. ದಕ್ಷಿಣ ಆಫ್ರಿಕಾದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ ಸ್ಪಿನ್ ದಾಳಿಗೆ ತತ್ತರಿಸಿ ಹೋದ ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 80 ರನ್‌ಗೆ ಆಲೌಟ್ ಆಗುವ ಮೂಲಕ ಹೀನಾಯ ಸೋಲು ಕಂಡಿದ್ದು, ಡೀನ್ ಎಲ್ಗರ್ ನೇತೃತ್ವದ ಹರಿಣಗಳು 332ರನ್‌ಗಳ ಅಮೋಘ ಗೆಲುವು ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ ಪರ ಕೇಶವ್ ಮಹಾರಾಜ್ 12 ಓವರ್ ಬೌಲಿಂಗ್‌ ಮಾಡಿ 3 ಮೇಡನ್ ಓವರ್ ಸಹಿತ 40ರನ್‌ಗೆ 7 ವಿಕೆಟ್ ಕಬಳಿಸಿದ್ದರು.

Mukesh Choudhary ಎರೆಡು ಕ್ಯಾಚ್ ಬಿಟ್ಟ ನಂತರ ನಡೆದಿದ್ದೇನು | Oneindia Kannada

ಮೊದಲ ಇನ್ನಿಂಗ್ಸ್‌ನಲ್ಲಿ 236ರನ್‌ಗಳ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ ಪಡೆಯು ದ್ವಿತೀಯ ಇನ್ನಿಂಗ್ಸ್‌ ನಲ್ಲಿ 6 ವಿಕೆಟ್ ಕಳೆದುಕೊಂಡು 176ರನ್‌ಗೆ ಡಿಕ್ಲೇರ್ ಮಾಡಿಕೊಂಡಿತು. 413ರನ್‌ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶ ಎದುರಾಳಿಯ ಇಬ್ಬರು ಸ್ಪಿನ್ನರ್‌ಗಳ ದಾಳಿಗೆ ನೆಲಕಚ್ಚಿ ಹೋಯಿತು. ಕೇಶವ್ ಮಹಾರಾಜ್ 12 ಓವರ್‌ಗೆ 7 ವಿಕೆಟ್ ಕಬಳಿಸಿದ್ರೆ, ಸಿಮೊನ್ ಹಾರ್ಮರ್ 3 ವಿಕೆಟ್ ತಮ್ಮದಾಗಿಸಿಕೊಂಡು ಬಾಂಗ್ಲಾದೇಶ ಇನ್ನಿಂಗ್ಸ್‌ಗೆ ಮುಕ್ತಾಯ ಹಾಡಿದ್ರು.

Story first published: Wednesday, April 13, 2022, 10:14 [IST]
Other articles published on Apr 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X