ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಮುಷ್ಫಿಕರ್ ರಹೀಮ್ ಅಜೇಯ ದ್ವಿಶತಕದಾಟ

Bangladesh’s Mushfiqur Rahim hits double ton to corner Zimbabwe

ಧಾಕಾ, ಫೆಬ್ರವರಿ 25: ಬಾಂಗ್ಲಾದೇಶ ಬ್ಯಾಟ್ಸ್‌ಮನ್, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ದ್ವಿಶತಕ ಬಾರಿಸಿದ್ದಾರೆ. ಧಾಕಾದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಏಕಮಾತ್ರ ಟೆಸ್ಟ್ ಪಂದ್ಯದಲ್ಲಿ ರಹೀಮ್ 203 ರನ್ ಬಾರಿಸಿದ್ದಾರೆ. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುಷ್ಫಿಕರ್ ಬಾರಿಸಿದ 3ನೇ ದ್ವಿಶತಕ.

ರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟರಣಜಿ: ಬೆಂಗಾಲ್ ವಿರುದ್ಧದ ಸೆ.ಫೈನಲ್‌ಗೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

ಬಾಂಗ್ಲಾ ಪ್ರವಾಸದಲ್ಲಿರುವ ಜಿಂಬಾಬ್ವೆ, ಧಾಕಾದ ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ, ಪ್ರಿನ್ಸ್ ಮಾಸ್ವೌರೆ 64, ನಾಯಕ ಕ್ರೇಗ್ ಎರ್ವಿನ್ 107, ರೆಗಿಸ್ ಚಕಬ್ವ 30 ರನ್‌ನೊಂದಿಗೆ 106.3 ಓವರ್‌ಗೆ 265 ರನ್ ಗಳಿಸಿತು.

ಬಾಂಗ್ಲಾ vs ಜಿಂಬಾಬ್ವೆ, ಏಕಮಾತ್ರ ಟೆಸ್ಟ್, Live ಸ್ಕೋರ್‌ಕಾರ್ಡ್

1
47857

ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾ ತಂಡ, ತಮೀಮ್ ಇಕ್ಬಾಲ್ 41, ನಜ್ಮುಲ್ ಹೊಸೇನ್ ಶಾಂತೊ 71, ನಾಯಕ ಮೊಮಿನುಲ್ ಹಕ್ 132, ಮುಷ್ಫಿಕರ್ ರಹೀಮ್ ಅಜೇಯ 203, ಲಿಟನ್ ದಾಸ್ 53 ರನ್‌ನೊಂದಿಗೆ 154 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 560 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ. ಜಿಂಬಾಬ್ವೆ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದೆ.

ಪಾದಾರ್ಪಣೆ ವೇಳೆ ಧೋನಿಯಾಡಿದ ಮಾತು ನೆನೆದ ಜಸ್‌ಪ್ರೀತ್ ಬೂಮ್ರಾಪಾದಾರ್ಪಣೆ ವೇಳೆ ಧೋನಿಯಾಡಿದ ಮಾತು ನೆನೆದ ಜಸ್‌ಪ್ರೀತ್ ಬೂಮ್ರಾ

ಜಿಂಬಾಬ್ವೆ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಅಬು ಜಾಯೆದ್ 4, ನಯೀಮ್ ಹಸನ್ 4, ತೂಜುಲ್ ಇಸ್ಲಾಮ್ 2 ವಿಕೆಟ್‌ ಪಡೆದು ಪಾರಮ್ಯ ಮೆರೆದರು. ಅಂದ್ಹಾಗೆ, 70 ಟೆಸ್ಟ್ ಪಂದ್ಯಳಲ್ಲಿ ಮುಷ್ಫಿಕರ್ ರಹೀಮ್ 7 ಶತಕ, 3 ದ್ವಿಶತಕ, 21 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ.

Story first published: Tuesday, February 25, 2020, 10:17 [IST]
Other articles published on Feb 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X