ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2007ರ ವಿಶ್ವಕಪ್ ಪಂದ್ಯ ಸ್ಮರಿಸಿ ಭಾರತಕ್ಕೆ ಕುಟುಕಿದ ಮುಷ್ಫಿಕರ್ ರಹೀಮ್

Bangladesh’s Mushfiqur Rahim recalls 2007 World Cup match

ಧಾಕಾ, ಮೇ 27: ಭಾರತ ವಿರುದ್ಧ 2007ರ ವಿಶ್ವಕಪ್‌ನಲ್ಲಿನ ಅಜೇಯ ಬ್ಯಾಟಿಂಗ್‌ ತನ್ನನ್ನು ಬಾಂಗ್ಲಾದೇಶ ರಾಷ್ಟ್ರೀಯ ತಂಡದಲ್ಲಿ ನೆಲೆಯೂರುವಂತೆ ಮಾಡಿತು ಎಂದು ಬಾಂಗ್ಲಾ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಹೇಳಿದ್ದಾರೆ. ಆವತ್ತು ತನ್ನ ವೃತ್ತಿ ಜೀವನದ 12ನೇ ಪಂದ್ಯವನ್ನಾಡಿದ್ದ ಮುಷ್ಫಿಕರ್ ಅಜೇಯ 56 ರನ್ ಬಾರಿಸಿದ್ದರು. ಪೋರ್ಟ್ ಆಫ್‌ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ನಡೆದಿದ್ದ ವಿಶ್ವಕಪ್ 8ನೇ ಪಂದ್ಯಕ್ಕಾಗಿ ಗ್ರೂಪ್‌ 'ಬಿ'ಯಲ್ಲಿದ್ದ ಬಾಂಗ್ಲಾ-ಭಾರತ ತಂಡಗಳು ಅಂದು ಮುಖಾಮುಖಿಯಾಗಿದ್ದವು.

ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!ಅಖ್ತರ್ ಬೌನ್ಸರ್‌ಗೆ ಸಚಿನ್ ಕಣ್ಣುಮುಚ್ಚಿದ್ದರು: ಭಾರತ-ಪಾಕ್ ಪಂದ್ಯ ನೆನೆದ ಆಸಿಫ್!

ತಂಡಕ್ಕೆ ಗಮನಾರ್ಹ ರನ್ ಸೇರಿಸುವಲ್ಲಿ ತನಗೆ ಮೊಹಮ್ಮದ್ ಅಶ್ರಫುಲ್ ನೆರವು ನೀಡಿದ್ದರು ಎಂದಿರುವ ಟೀಮ್ ಇಂಡಿಯಾಕ್ಕೆ ಸಣ್ಣದಾಗಿ ಕುಟುಕಿದ್ದಾರೆ. ಕಾರಣವಿಷ್ಟೇ ಆವತ್ತಿನ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಸೋತಿತ್ತು.

ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!ಗಂಭೀರ ಗಾಯ, WWE ಸ್ಟಾರ್ ರೇ ಮಿಸ್ಟೀರಿಯೋ ಮುಂದಿನ ವಾರ ನಿವೃತ್ತಿ!

ಇಎಸ್‌ಪಿಎನ್‌ ಕ್ರಿಕ್ ಇನ್ಫೋ ಜೊತೆ ತನ್ನ ವೃತ್ತಿ ಬದುಕಿನ ಅತ್ಯುತ್ತಮ ಪ್ರದರ್ಶನದ ಕ್ಷಣಗಳನ್ನು ಸ್ಮರಿಸಿಕೊಂಡಿರುವ ಮುಷ್ಫಿಕರ್, 2007ರ ವಿಶ್ವಕಪ್‌ನಲ್ಲಿ ಭಾರತ-ಬಾಂಗ್ಲಾ ಕದನದ ಬಗ್ಗೆ ಮಾತನಾಡಿದ್ದಾರೆ.

ಭಾರತ ತಪ್ಪಾಗಿ ಭಾವಿಸಿತ್ತು

ಭಾರತ ತಪ್ಪಾಗಿ ಭಾವಿಸಿತ್ತು

'ಭಾರತ ವಿರುದ್ಧ ಇನ್ನಿಂಗ್ಸ್‌ ಆಡುತ್ತಿದ್ದಾಗ, ಡ್ರಿಂಕ್ಸ್ ಬ್ರೇಕ್ ವೇಳೆ ನಾನು 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಹೋಗಬಹುದು ಎಂದು ಯೋಚಿಸಿದೆ. ನನಗೆ ಆ ಬಳಿಕ ಯೋಚಿಸಲು ಹೆಚ್ಚು ಸಮಯ ಸಿಗಲಿಲ್ಲ. ಆದರೆ ಟೂರ್ನಿಯ ಮೊದಲ ಪಂದ್ಯವನ್ನಾಡುತ್ತಿದ್ದ ಭಾರತ, ನಮ್ಮೆದುರು ಒಳ್ಳೆಯ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಪಡೆದುಕೊಳ್ಳಬಹುದು ಎಂದುಕೊಂಡಿತ್ತು. ಯಾಕೆಂದರೆ ಅವರಿಗೆ ಮುಂದೆ ಬಲಿಷ್ಠ ತಂಡಗಳೆದುರು ಪಂದ್ಯವಿದ್ದರಿಂದ ನಮ್ಮೆದುರು ಅಭ್ಯಾಸ ಪಂದ್ಯದಲ್ಲಿ ಆಡಿದಷ್ಟು ಸುಲಭವಾಗಿ ಆಡಿ ಗೆಲ್ಲಬಹುದು ಎಂದುಕೊಂಡಿದ್ದರು,' ಎಂದು ರಹೀಮ್ ಹೇಳಿದ್ದಾರೆ.

ಹಸನ್ ಜೊತೆಗೆ ಒಳ್ಳೆ ಪಾರ್ಟ್ನರ್‌ಶಿಪ್

ಹಸನ್ ಜೊತೆಗೆ ಒಳ್ಳೆ ಪಾರ್ಟ್ನರ್‌ಶಿಪ್

ಮಾತು ಮುಂದುವರೆಸಿದ ಮುಷ್ಫಿಕರ್, 'ಬ್ಯಾಟಿಂಗ್‌ ವೇಳೆ ನಮಗೆ ತಮೀಮ್ (ಇಕ್ಬಾಲ್) ಉತ್ತಮ ಆರಂಭ ನೀಡಿದ್ದರು. ನಾನು ಸೆಟ್ಟಾಗುತ್ತಿದ್ದೆ. ಮತ್ತೆ ನನಗೆ ಶಕೀಬ್ ಅಲ್ ಹಸನ್ ಜೊತೆಗೆ ಉತ್ತಮ ಪಾರ್ಟ್ನರ್‌ಶಿಪ್ ಲಭಿಸಿತು. ದೊಡ್ಡ ವೇದಿಕೆಯಾದರೂ ನಾವಿಬ್ಬರೂ ಅಂಡರ್ 19 ತಂಡದಲ್ಲಿ ಜೊತೆಯಾಗಿ ಆಡಿದ್ದರಿಂದ ಇದು ನನಗೆ ಕೊಂಚ ಸಮಾಧಾನ ತಂದಿತು,' ಎಂದರು.

ನನ್ನಿಂದಲೇ ನಂಬಲಾಗುತ್ತಿರಲಿಲ್ಲ

ನನ್ನಿಂದಲೇ ನಂಬಲಾಗುತ್ತಿರಲಿಲ್ಲ

'ನಾನವತ್ತು ವಿಜಯದ ಹೊಡೆತಗಳನ್ನು ಕೊಡುತ್ತಿದ್ದಾಗ ನನ್ನಿಂದಲೇ ನಂಬಲಾಗುತ್ತಿರಲಿಲ್ಲ. ವಿಜಯದ ರನ್ ಬಾರಿಸುವ ಅವಕಾಶ ನೀಡಿದ್ದಕ್ಕಾಗಿ ನಾನು ಮೊಹಮ್ಮದ್ ಅಶ್ರಫುಲ್‌ಗೆ ಧನ್ಯವಾದ ಹೇಳಬೇಕು,' ಎಂದರು. ಆವತ್ತಿನ ಪಂದ್ಯದಲ್ಲಿ ತಮೀಮ್ ಇಕ್ಬಾಲ್ 51, ಮುಷ್ಫಿಕರ್ ರಹೀಮ್ ಅಜೇಯ 56 (107 ಎಸೆತ) ರನ್, ಶಕೀಬ್ ಅಲ್ ಹಸನ್ 53 ರನ್ ಬಾರಿಸಿದ್ದರು.

ಆಡಿದ್ದು ಯುವಿ, ದಾದ ಮಾತ್ರ

ಆಡಿದ್ದು ಯುವಿ, ದಾದ ಮಾತ್ರ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ ಪರ ಆವತ್ತು ಗಮನಾರ್ಹ ರನ್ ಕೊಡುಗೆ ನೀಡಿದ್ದು ಸೌರವ್ ಗಂಗೂಲಿ ಮತ್ತು ಯುವರಾಜ್ ಸಿಂಗ್ ಮಾತ್ರ. ಗಂಗೂಲಿ 66, ಯುವಿ 47 ರನ್ ಬಾರಿಸಿದ್ದರು. ಭಾರತ 49.3 ಓವರ್‌ನಲ್ಲಿ ಎಲ್ಲಾ ವಿಕೆಟ್‌ ಕಳೆದು 191 ರನ್ ಬಾರಿಸಿತ್ತು. 48.3 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 192 ರನ್ ಪೇರಿಸಿದ ಬಾಂಗ್ಲಾ 5 ವಿಕೆಟ್‌ ಗೆಲುವನ್ನಾಚರಿಸಿತ್ತು.

Story first published: Wednesday, May 27, 2020, 21:37 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X