ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಕ್ರಿಕೆಟರ್ ಶಹಾದತ್ ಹೊಸೈನ್‌ಗೆ 5 ವರ್ಷಗಳ ನಿಷೇಧ ಶಿಕ್ಷೆ!

Bangladeshs Shahadat Hossain Gets Five-year Ban for Assaulting Teammate

ಧಾಕಾ, ನವೆಂಬರ್ 19: ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ವೇಗಿ ಶಹಾದತ್ ಹೊಸೈನ್ ಅವರಿಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ (ಬಿಸಿಬಿ) 2 ವರ್ಷಗಳ ಅಮಾನತಿನೊಂದಿಗೆ 5 ವರ್ಷಗಳ ನಿಷೇಧ ಶಿಕ್ಷೆ ವಿಧಿಸಿದೆ. ಸಹ ಆಟಗಾರನಿಗೆ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಹೊಸೈನ್ ಶಿಕ್ಷೆಗೊಳಗಾಗಿದ್ದಾರೆ.

ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?ಅಜಿಂಕ್ಯಾ ರಹಾನೆ ಕನಸಿನಲ್ಲಿ ಕಾಡುತ್ತಿರೋದು ಯಾರು?

ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಲೀಗ್‌ನಲ್ಲಿ ಧಾಕಾ ಡಿವಿಷನ್ ಮತ್ತು ಖುಲ್ನಾ ಡಿವಿಷನ್ ನಡುವಿನ ಪಂದ್ಯದಲ್ಲಿ ಶಹಾದತ್ ಹೊಸೈನ್ ತನ್ನ ತಂಡದ ಸಹ ಆಟಗಾರ ಸನ್ನಿ ಅರಾಫತ್‌ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಇದಕ್ಕಾಗಿ ಬಿಸಿಬಿ ಹೊಸೈನ್‌ಗೆ ಐದು ವರ್ಷಗಳ ನಿಷೇಧ ಹೊರಿಸಿರುವುದಲ್ಲದೆ 3 ಲಕ್ಷ ಟಕಾಸ್ (ಸುಮಾರು 2,53,860 ರೂ.) ದಂಡ ಕೂಡ ವಿಧಿಸಿದೆ.

ಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋಶ್ರೀಲಂಕಾ ಸ್ಪಿನ್ನರ್‌ನ ವಿಚಿತ್ರ ಬೌಲಿಂಗ್ ಶೈಲಿ ನೋಡಿ: ವೈರಲ್ ವಿಡಿಯೋ

ಶಹಾದತ್ ಬೌಲಿಂಗ್‌ನಲ್ಲಿ ಏನೂ ಮಿಂಚಲಾರರು ಎಂದು ಅರಾಫತ್ ಹೇಳಿದಾಗ ಕುಪಿತಗೊಂಡ ಶಹಾದತ್, ಅರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಹೊಡೆದಾಟಕ್ಕಿಳಿದಾಗ ತಂಡದ ಇತರ ಆಟಗಾರು ಇಬ್ಬರನ್ನೂ ಬೇರ್ಪಡಿಸಬೇಕಾಗಿ ಬಂತು. ಅಂತೂ ಇಬ್ಬರು ಜಗಳ ಶಹಾದತ್‌ ಶಿಕ್ಷೆಗೆ ಗುರಿಯಾಗುವಂತೆ ಮಾಡಿದೆ.

ಪಾಕ್‌ ವಿರುದ್ಧ 10 ವಿಕೆಟ್ ಪಡೆದಾಗಿನ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಅನಿಲ್ ಕುಂಬ್ಳೆ!ಪಾಕ್‌ ವಿರುದ್ಧ 10 ವಿಕೆಟ್ ಪಡೆದಾಗಿನ ಅಚ್ಚರಿಯ ಸಂಗತಿ ಬಿಚ್ಚಿಟ್ಟ ಅನಿಲ್ ಕುಂಬ್ಳೆ!

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಶಹಾದತ್ ತಾನು ತಾಳ್ಮೆ ಕಳೆದುಕೊಂಡಿದ್ದಾಗಿ, ಘಟನೆಯಲ್ಲಿ ಅರಾಫತ್‌ ಕೂಡ ಅನುಚಿತವಾಗಿ ವರ್ತಸಿದ್ದಾಗಿ ದೂರಿದ್ದಾರೆ. 'ಅಮಾನತಾಗಿರುವುದರಿಂದ ಸದ್ಯ ಸಡೆಯುತ್ತಿರುವ ನ್ಯಾಷನಲ್ ಕ್ರಿಕೆಟ್ ಲೀಗ್‌ನಲ್ಲಿ ತಾನು ಆಡುತ್ತಿಲ್ಲ. ಭವಿಷ್ಯದಲ್ಲಿ ಏನಾಗಲಿದೆಯೋ ಗೊತ್ತಿಲ್ಲ,' ಎಂದು ಶಹಾದತ್ ಪ್ರತಿಕ್ರಿಯಿಸಿದ್ದಾರೆ.

Story first published: Tuesday, November 19, 2019, 17:18 [IST]
Other articles published on Nov 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X