ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟರ್ ಶಕೀಬ್ ಅಲ್ ಹಸನ್ ಸ್ವಾಗತಿಸಲು ಬಾಂಗ್ಲಾದೇಶ ಸಜ್ಜು

Bangladesh team gets ready to welcome Shakib Al Hasan as his ban ends on october 29

ಧಾಕಾ: ಅಕ್ಟೋಬರ್ 29ರ ಗುರುವಾರಕ್ಕೆ ಬಾಂಗ್ಲಾದೇಶ ಕ್ರಿಕೆಟರ್ ಶಕೀಬ್ ಅಲ್ ಹಸನ್ ಮೇಲಿನ ನಿಷೇಧ ಅಂತ್ಯಗೊಳ್ಳಲಿರುವುದರಿಂದ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಶಕೀಬ್ ಅವರನ್ನು ಸ್ವಾಗತಿಸಲು ಸಿದ್ಧವಾಗಿದೆ. ಭ್ರಷ್ಟಾಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹಸನ್‌ಗೆ ಒಂದು ವರ್ಷದ ನಿಷೇಧ ಹೇರಲಾಗಿತ್ತು.

ಸಾಹ ಆಟ ಟೂರ್ನಿಯ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು: ರಶೀದ್ ಖಾನ್ಸಾಹ ಆಟ ಟೂರ್ನಿಯ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದು: ರಶೀದ್ ಖಾನ್

ಬುಕ್ಕಿಗಳು ಹಲವಾರ ಬಾರಿ ಸಂಪರ್ಕಿಸಿದ್ದನ್ನು ಕ್ರಿಕೆಟ್ ಬೋರ್ಡ್‌ನ ಗಮನಕ್ಕೆ ತಾರದಿದ್ದ ತಪ್ಪಿಗಾಗಿ ಕಳೆದ ವರ್ಷ ಅಕ್ಟೋಬರ್ 29ರಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಭ್ರಷ್ಟಾಚಾರ ವಿರೋಧಿ ಸಮಿತಿ ಶಕೀಬ್ ಅವರ ಮೇಲೆ ವರ್ಷದ ನಿಷೇಧ ಹೇರಿತ್ತು.

ಬುಕ್ಕಿಗಳು ಸಂಪರ್ಕಿಸಿದ್ದನ್ನು ಅಧಿಕಾರಿಗಳ ಗಮನಕ್ಕೆ ತಾರದಿದ್ದುದು ತನ್ನ ತಪ್ಪೆಂದು ನಿಷೇಧ ಹೇರಿದ ಬಳಿಕ ಹಸನ್ ಹೇಳಿದ್ದರು. ಶಕೀಬ್ ಅವರನ್ನು ಬರಮಾಡಿಕೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ಕಾತರದಿಂದ ಕಾಯುತ್ತಿದೆ ಎಂದು ಕ್ರಿಕೆಟರ್ ಮೊಹಮದುಲ್ಲ ಹೇಳಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

'ನಮ್ಮ ಹುಡುಗ ಮತ್ತೆ ಮನೆಗೆ (ಬೋರ್ಡ್‌ಗೆ) ಬರುತ್ತಿದ್ದಾನೆ,' ಎಂದು ಎಂದು ಬಾಂಗ್ಲಾದೇಶ ಟಿ20 ನಾಯಕ ಮೊಹಮದುಲ್ಲ ಖುಷಿ ತೋರಿಕೊಂಡಿದ್ದಾರೆ. ಆಲ್ ರೌಂಡರ್ ಶಕೀಬ್ 56 ಟೆಸ್ಟ್ ಪಂದ್ಯಗಳಲ್ಲಿ 3862 ರನ್, 210 ವಿಕೆಟ್, 206 ಏಕದಿನ ಪಂದ್ಯಗಳಲ್ಲಿ 6323 ರನ್, 260 ವಿಕೆಟ್‌, 76 ಟಿ20ಐ ಪಂದ್ಯಗಳಲ್ಲಿ 1567 ರನ್, 92 ವಿಕೆಟ್ ದಾಖಲೆ ಹೊಂದಿದ್ದಾರೆ.

Story first published: Thursday, October 29, 2020, 9:45 [IST]
Other articles published on Oct 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X