ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ vs ಬಾಂಗ್ಲಾದೇಶ: 3ನೇ ದಿನದ ಗೌರವ ಸಂಪಾದಿಸಿದ ಬಾಂಗ್ಲಾ; ಭರ್ಜರಿ ಬ್ಯಾಟಿಂಗ್

Bangladesh vs Sri Lanka: 1st test day 3, highlights

ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರೆ. ಮೂರನೇ ದಿನ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶಕ್ಕೆ ಅದ್ಭುತ ಆರಂಭ ದೊರೆಯಿತು. ಆರಂಭಿಕ ಆಟಗಾರರಾದ ಮಹ್ಮದುಲ್ಲಾ ಹಸನ್ ಜಾಯ್ ಹಾಗೂ ತಮಿಮ್ ಇಕ್ಬಾಲ್ ಮೊದಲ ವಿಕೆಟ್‌ಗೆ 162 ರನ್‌ಗಳ ಜೊತೆಯಾಟವನ್ನು ನೀಡಿದರು. ನಂತರ 58 ರನ್‌ಗಳಿಸಿದ್ದ ಮಹ್ಮದುಲ್ಲಾ ಹಸನ್ ಜಾಯ್ ಅಸಿತ್ ಫೆರ್ನಾಂಡೋಗೆ ವಿಕೆಟ್ ಒಪ್ಪಿಸುವ ಮೂಲಕ ಈ ಜೋಡಿ ಬೇರ್ಪಟ್ಟಿತು.

ಇದಾದ ಬಳಿಕ ನಜ್ಮುಲ್ ಹುಸೈನ್ ಹಾಗೂ ನಾಯಕ ಮಾಮಿನುಲ್ ಹಾಕ್ಯೂ ಒಂದಂಕಿಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್‌ಗೆ ತೆರಳಿದರು. ಈ ಸಂದರ್ಭದಲ್ಲಿ ಲಂಕಾ ಬೌಲರ್‌ಗಳು ಮೇಲುಗೈ ಸಾಧಿಸುವ ವಿಶ್ವಾಸ ಮೂಡಿಸಿದರು. ಆದರೆ ನಂತರ ತಮಿಮ್ ಇಕ್ಬಾಲ್ ಕೂಡ ಗಾಯಗೊಂಡು ನಿವೃತ್ತರಾದರು. ಇದಾದ ಬಳಿಕ ಮುಷ್ಫಿಕರ್ ರಹೀಮ್ ಹಾಗೂ ಲಿಟನ್ ದಾಸ್ ಜೋಡಿ ಬಾಂಗ್ಲಾ ಪರವಾಗಿ ಮತ್ತೊಂದು ಅದ್ಭುತ ಜೊತೆಯಾಟವನ್ನು ನೀಡಿದ್ದಾರೆ. ಈ ಇಬ್ಬರು ಆಟಗಾರರು ಕೂಡ ತಲಾ ಅರ್ಧ ಶತಕ ದಾಖಲಿಸಿ ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಮೂರನೇ ದಿನದಂತ್ಯಕ್ಕೆ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 318 ರನ್‌ಗಳಿಸಿದ್ದು 79 ರನ್‌ಗಳ ಹಿನ್ನಡೆಯಲ್ಲಿದೆ.

MI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿMI vs SRH: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ತಂಡವನ್ನು ಹೀಗೆ ರಚಿಸಿ, ಈತನಿಗೆ ನಾಯಕತ್ವ ನೀಡಿ

ಇನ್ನು ಇದಕ್ಕೂ ಮುನ್ನ ಮೊದಲ ದಿನದಾಟದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀಲಂಕಾ ಎರಡನೇ ದಿನವೂ ಉತ್ತಮ ಪ್ರದರ್ಶನವನ್ನು ನೀಡಿತು. ಎರಡನೇ ದಿನದಾಟದಲ್ಲಿ ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್ ಅವರಿಂದ ಅದ್ಭುತ ಜೊತೆಯಾಟ ಬಂದಿತು. ಐದನೇ ವಿಕೆಟ್‌ಗೆ ಈ ಜೋಡಿ 136 ರನ್‌ಗಳ ಜೊತೆಯಾಟವನ್ನು ನೀಡುವಲ್ಲಿ ಯಶಸ್ವಿಯಾಯಿತು. ಆದರೆ ಈ ಪಂದ್ಯದಲ್ಲಿ ಅನುಭವಿ ಆಟಗಾರ ಮ್ಯಾಥ್ಯೂಸ್ ದ್ವಿಶತಕ ಗಳಿಸುವ ಅದ್ಭುತ ಅವಕಾಶವನ್ನು ಕಳೆದುಕೊಂಡರು.

ಕೇವಲ ಒಂದು ರನ್‌ನಿಂದ ಮ್ಯಾಥ್ಯೂಸ್ ದ್ವಿಶತಕ ವಂಚಿತವಾದರು. 397 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂಸ್ 199 ರನ್‌ಗಳಿಸಿದಾಗ ಇನ್ನಿಂಗ್ಸ್‌ನ ಅಂತಿಮ ವಿಕೆಟ್ ರೂಪದಲ್ಲಿ ನಯೀಮ್ ಎಸೆತಕ್ಕೆ ಔಟಾಗಿ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡರು. ಇನ್ನು ಇವರಿಗೆ ಉತ್ತಮ ಸಾಥ್ ನೀಡಿದ ಚಾಂಡಿಮಲ್ 66 ರನ್‌ಗಳಿಗೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 397 ರನ್‌ಗಳಿಗೆ ಆಲೌಟ್ ಆಯಿತು.

ನನ್ನ ವೇಗದ ಬೌಲಿಂಗ್ ದಾಖಲೆಯನ್ನ ಉಮ್ರಾನ್‌ ಮಲ್ಲಿಕ್ ಮುರಿದ್ರೆ ಸಂತೋಷವಾಗಲಿದೆ: ಶೋಯೆಬ್ ಅಖ್ತರ್‌ನನ್ನ ವೇಗದ ಬೌಲಿಂಗ್ ದಾಖಲೆಯನ್ನ ಉಮ್ರಾನ್‌ ಮಲ್ಲಿಕ್ ಮುರಿದ್ರೆ ಸಂತೋಷವಾಗಲಿದೆ: ಶೋಯೆಬ್ ಅಖ್ತರ್‌

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್ ಶಾಂಟೊ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ನಯೀಮ್ ಹಸನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಶೋರಿಫುಲ್ ಇಸ್ಲಾಂ
ಬೆಂಚ್: ಯಾಸಿರ್ ಅಲಿ, ಎಬಾಡೋತ್ ಹೊಸೈನ್, ನೂರುಲ್ ಹಸನ್, ಮೊಸದ್ದೆಕ್ ಹೊಸೈನ್, ಶೋಹಿದುಲ್ ಇಸ್ಲಾಂ, ರೆಜೌರ್ ರೆಹಮಾನ್ ರಾಜಾ

Rohit Sharma ಬೇಜಾರಾಗಿದ್ದು ಇದೇ ಕಾರಣಕ್ಕೆ | Oneindia Kannada

ಶ್ರೀಲಂಕಾ ಆಡುವ ಬಳಗ: ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಲಸಿತ್ ಎಂಬುಲ್ದೆನಿಯ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ ಆಡುತ್ತಿದ್ದಾರೆ
ಬೆಂಚ್: ಪ್ರವೀಣ್ ಜಯವಿಕ್ರಮ, ಕಸುನ್ ರಜಿತಾ, ಕಾಮಿಂದು ಮೆಂಡಿಸ್, ಚಾಮಿಕಾ ಕರುಣಾರತ್ನೆ, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್

Story first published: Tuesday, May 17, 2022, 17:35 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X