ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ಶ್ರೀಲಂಕಾ 2nd ಟೆಸ್ಟ್: ಗೆಲುವಿನ ಸನಿಹದಲ್ಲಿ ಲಂಕಾ: ಸೋಲಿನಿಂತ ತಪ್ಪಿಸಿಕೊಳ್ಳುತ್ತಾ ಬಾಂಗ್ಲಾ?

Bangladesh vs Sri Lanka test series: 2nd test day 4, Dhaka, highlights

ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಹಾಗೂ ಎರಡನೇ ಪಂದ್ಯ ನಾಲ್ಕನೇ ದಿನದಾಟ ಮುಕ್ತಾಯವಾಗಿದ್ದು ಅಂತಿಮ ದಿನದಾಟ ಸಾಕಷ್ಟು ಕುತೂಹಲ ಮೂಡಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಬೃಹತ್ ಮೊತ್ತವನ್ನು ಪೇರಿಸಿದ್ದು ನಂತರ ಬೌಲಿಂಗ್‌ನಲ್ಲಿಯೂ ಮಿಂಚಿದೆ. ನಂತರ ಆತಿಥೇಯ ಬಾಂಗ್ಲಾದೇಶ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿದ್ದು ಆಘಾತ ಅನುಭವಿಸಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಪರವಾಗಿ ಇಬ್ಬರು ಆಟಗಾರರು ಮಾತ್ರವೇ ಅದ್ಭುತ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದರು. ಮುಷ್ಫಿಕರ್ ರಹೀಮ್ 175 ರನ್‌ಗಳಿಸಿ ಅಜೇಯವಾಗುಳಿದಿದ್ದರೆ ಲಿಟನ್ ದಾಸ್ 141 ರನ್‌ಗಳನ್ನು ಗಳಿಸಿದ್ದರು. ಉಳಿದಂತೆ ಟೈಜುಲ್ ಇಸ್ಲಾಮ್ ಮಾತ್ರ 15 ರನ್‌ಗಳನ್ನು ಗಳಿಸಿ ಎರಡಂಕಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ. ಉಳಿದೆಲ್ಲಾ ಆಟಗಾರರು ಒಂದಂಕಿಕೆ ವಿಕೆಟ್ ಒಪ್ಪಿಸಿದ್ದಾರೆ. ಇನ್ನು ಈ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಆರಂಭಿಕ ಇಬ್ಬರು ಆಟಗಾರರು ಸೇರಿದಂತೆ 6 ಮಂದಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ 365 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿತ್ತು ಬಾಂಗ್ಲಾದೇಶ.

RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!RCB vs LSG: ಈ ಮೂವರು ಇಲ್ಲದಿದ್ದರೆ ಲಕ್ನೋ ವಿರುದ್ಧ ಆರ್‌ಸಿಬಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಮುನ್ನುಗ್ಗುತ್ತಿರಲಿಲ್ಲ!

ಇನ್ನು ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಬಂದಿದೆ. ಏಂಜಲೋ ಮ್ಯಾಥ್ಯೂಸ್ ಹಾಗೂ ದಿನೇಶ್ ಚಾಂಡಿಮಲ್ ಶ್ರೀಲಂಕಾ ಪರವಾಗಿ ಭರ್ಜರಿ ಶತಕ ಸಿಡಿಸಿದ್ದು ಒಶಾಡಾ ಫೆರ್ನಾಂಡೋ ಹಾಗೂ ನಾಯಕ ಕರುಣರತ್ನೆ ಭರ್ಜರಿ ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 506 ರನ್‌ಗಳನ್ನು ಗಳಿಸಲು ಯಶಸ್ವಿಯಾಗಿದೆ.

ಇನ್ನು ನಂತರ ಬ್ಯಾಟಿಂಗ್‌ಗೆ ಇಳಿದ ಆತಿಥೇಯ ಬಾಂಗ್ಲಾದೇಶ ತಂಡಕ್ಕೆ ಅಸಿತ ಫೆರ್ನಾಂಡೋ ಹಾಗೂ ಕಸುನ್ ರಜಿತ ಮತ್ತೆ ಆಘಾತ ನೀಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಆತಿಥೇಯ ಬಾಂಗ್ಲಾದೇಶ ತಂಡ 34 ರನ್‌ಗಳನ್ನು ಗಳಿಸಿದ್ದು ತನ್ನ ನಾಲ್ಕು ವಿಕೆಟ್ ಕಳೆದುಕೊಂಡಿದೆ. ಅಸಿತ ಫೆರ್ನಾಂಡೋ ಎರಡು ವಿಕೆಟ್ ಕಬಳಿಸಿದ್ದರೆ ಕಸುನ್ ರಜಿತ ಒಂದು ವಿಕೆಟ್ ಪಡೆದಿದ್ದಾರೆ. ಅಂತಿಮ ದಿನದಾಟದಲ್ಲಿ ಬಾಂಗ್ಲಾದೇಶ 6 ವಿಕೆಟ್‌ಗಳನ್ನು ಉಳಿಸಿಕೊಂಡಿದ್ದು ಇನ್ನೂ 107 ರನ್‌ ಹಿನ್ನೆಡೆ ಅನುಭವಿಸುತ್ತಿದೆ. ಹೀಗಾಗಿ ಶ್ರೀಲಂಕಾ ತಂಡ ಪಂದ್ಯದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಬಾಂಗ್ಲಾದೇಶ ಆಡುವ ಬಳಗ: ತಮೀಮ್ ಇಕ್ಬಾಲ್, ಮಹಮ್ಮದುಲ್ ಹಸನ್ ಜಾಯ್, ನಜ್ಮುಲ್ ಹೊಸೈನ್ ಶಾಂಟೋ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಶಕೀಬ್ ಅಲ್ ಹಸನ್, ಮೊಸದ್ದೆಕ್ ಹೊಸೈನ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ಎಬಾಡೋತ್ ಹೊಸೈನ್
ಬೆಂಚ್: ರೆಜೌರ್ ರೆಹಮಾನ್ ರಾಜಾ, ಶೋಹಿದುಲ್ ಇಸ್ಲಾಂ, ನೂರುಲ್ ಹಸನ್, ಯಾಸಿರ್ ಅಲಿ

Virat Kohliಯನ್ನು ಮಾತನಾಡಿಸಲು ಬಂದ ಅಭಿಮಾನಿಗೆ ಆಗಿದ್ದೇನು | #cricket | Oneindia Kannada

ಶ್ರೀಲಂಕಾ ಆಡುವ ಬಳಗ: ಓಷಾದ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರವೀಣ್ ಜಯವಿಕ್ರಮ, ಅಸಿತ ಫೆರ್ನಾಂಡೋ, ಕಸುನ್ ರಜಿತಾ
ಬೆಂಚ್: ಲಸಿತ್ ಎಂಬುಲ್ದೇನಿಯ, ವಿಶ್ವ ಫೆರ್ನಾಂಡೋ, ಚಾಮಿಕಾ ಕರುಣಾರತ್ನ, ಕಮಿಂದು ಮೆಂಡಿಸ್, ಕಮಿಲ್ ಮಿಶ್ರಾ, ದಿಲ್ಶನ್ ಮಧುಶಂಕ, ಸುಮಿಂದಾ ಲಕ್ಷಣ್

Story first published: Friday, May 27, 2022, 9:44 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X