ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್‌ ಇಂಡೀಸ್ ವಿರುದ್ಧ ಕೇವಲ 43 ರನ್‌ಗೆ ಬಾಂಗ್ಲಾದೇಶ ಆಲೌಟ್

Bangladesh vs west indies 1st test match


ಆಂಟಿಗುವಾ, ಜುಲೈ 5: ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶಗಳ ನಡುವಣ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದೇಶ ಕೇವಲ 43 ರನ್‌ಗಳಿಗೆ ಆಲೌಟ್ ಆಗಿದೆ.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದುಕೊಂಡಿದೆ. ದಿನದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿ, 158 ರನ್‌ಗಳ ಮುನ್ನಡೆ ಸಾಧಿಸಿದೆ.

ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ? ಶತಕ ಸಿಡಿಸಿದ ರಾಹುಲ್ ಆ ಪರಿ ಸಂಭ್ರಮಾಚರಿಸಿದ ಗುಟ್ಟೇನು ಗೊತ್ತಾ?

ವೆಸ್ಟ್ ಇಂಡೀಸ್ ವೇಗಿ ಕೀಮರ್ ರೋಚ್ ದಾಳಿಗೆ ನಲುಗಿದ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್‌ ಹಾದಿ ಹಿಡಿದರು.

ಕಳೆದ 44 ವರ್ಷಗಳ ಟೆಸ್ಟ್ ಇತಿಹಾಸದಲ್ಲಿಯೇ ಇದು ಅತ್ಯಂತ ಕಡಿಮೆ ಮೊತ್ತವಾಗಿದೆ. 1974ರಲ್ಲಿ ಭಾರತ ತಂಡವು 42 ರನ್‌ಗಳಿಗೆ ಆಲೌಟ್ ಆಗಿತ್ತು.

ಅಲ್ಲದೆ, ಬಾಂಗ್ಲಾದೇಶ ಟೆಸ್ಟ್ ಪಂದ್ಯದಲ್ಲಿ ಗಳಿಸಿದ ಅತ್ಯಂತ ಕಡಿಮೆ ಮೊತ್ತವೂ ಇದಾಗಿದೆ. 2007ರಲ್ಲಿ ಅದು ಶ್ರೀಲಂಕಾ ವಿರುದ್ಧ 62ಕ್ಕೆ ಸರ್ವಪತನ ಕಂಡಿತ್ತು.

ರಾಜ್ಯಗಳ ಕ್ರಿಕೆಟ್ ಲೀಗ್‌ ಮೇಲೆ ನಿಯಂತ್ರಣ: ಬಿಸಿಸಿಐ ಹೊಸ ಮಾರ್ಗದರ್ಶಿರಾಜ್ಯಗಳ ಕ್ರಿಕೆಟ್ ಲೀಗ್‌ ಮೇಲೆ ನಿಯಂತ್ರಣ: ಬಿಸಿಸಿಐ ಹೊಸ ಮಾರ್ಗದರ್ಶಿ

ವೆಸ್ಟ್ ಇಂಡೀಸ್ ತಂಡವು ಎದುರಾಳಿಯನ್ನು ಆಲೌಟ್ ಮಾಡಿದ ಅತಿ ಕಡಿಮೆ ಮೊತ್ತ ಇದಾಗಿದ್ದು, ವೆಸ್ಟ್ ಇಂಡೀಸ್ ನೆಲದಲ್ಲಿಯೂ ದಾಖಲಾದ ಕಡಿಮೆ ಸ್ಕೋರ್ ಇದು. 1994ರಲ್ಲಿ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 46 ರನ್‌ಗಳಿಗೆ ಆಲೌಟ್ ಮಾಡಿತ್ತು.

ಅತಿ ಕಡಿಮೆ ಎಸೆತಗಳಲ್ಲಿ ಐದು ವಿಕೆಟ್ ಕಿತ್ತ ಸಾಧನೆಯನ್ನು ಕೀಮರ್ ರೋಚ್ ಮಾಡಿದರು. ಆಸ್ಟ್ರೇಲಿಯಾದ ಮಾಂಟಿ ನೋಬಲ್ ಇಂಗ್ಲೆಂಡ್‌ ವಿರುದ್ಧ (1902) ಮತ್ತು ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್, ಬಾಂಗ್ಲಾದೇಶದ ವಿರುದ್ಧ (2002) 12 ಎಸೆತಗಳಲ್ಲಿ ಐದು ವಿಕೆಟ್ ಕಿತ್ತಿದ್ದರು. ಅವರ ಸಾಲಿಗೆ ರೋಚ್ ಕೂಡ ಸೇರ್ಪಡೆಯಾದರು.

ಇನ್ನು 1956ರಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಜಿಮ್ ಲೇಕರ್ ಆಸ್ಟ್ರೇಲಿಯಾ ವಿರುದ್ಧ ಹಾಗೂ 2002ರಲ್ಲಿ ಪಾಕಿಸ್ತಾನದ ವಖಾರ್ ಯೂನಸ್ ಬಾಂಗ್ಲಾದೇಶದ ವಿರುದ್ಧ 13 ಎಸೆತಗಳಲ್ಲಿಯೇ ಐದು ವಿಕೆಟ್ ಕಿತ್ತಿದ್ದರು.

ಬಾಂಗ್ಲಾ ಬ್ಯಾಟ್ಸ್‌ಮನ್‌ಗಳು ಕೇವಲ 112 ಎಸೆತೆಗಳನ್ನು ಎದುರಿಸುವಷ್ಟರಲ್ಲೇ ಎಲ್ಲ ವಿಕೆಟ್ ಕಳೆದುಕೊಂಡರು. ಇದು ಜಗತ್ತಿನ ಎರಡನೆ ಅತಿ ಕಡಿಮೆ ಎಸೆತದ ಮೊದಲ ಇನ್ನಿಂಗ್ಸ್‌ ಎಂಬ ಕುಖ್ಯಾತಿಗೆ ಪಾತ್ರವಾಯಿತು. 2015 ರಲ್ಲಿ ಆಸ್ಟ್ರೇಲಿಯಾ ತಂಡವು 111 ಎಸೆತದಲ್ಲಿಯೇ ಇಂಗ್ಲೆಂಡ್ ವಿರುದ್ಧ ಆಲೌಟ್ ಆಗಿತ್ತು.

ಆರಂಭಿಕ ಲಿಟನ್ ದಾಸ್ 25 ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಸ್ಕೋರ್ ಎನಿಸಿತು. ಅವರ ಬಳಿಕ 10ನೇ ಕ್ರಮಾಂಕದ ಆಟಗಾರ ರುಬೆನ್ ಹುಸೇನ್ 6 ರನ್ ಗಳಿಸಿದ್ದೇ ಅತಿ ಹೆಚ್ಚಿನ ಮೊತ್ತವೆನಿಸಿತು.

ಬಾಂಗ್ಲಾದೇಶದ ನಾಲ್ವರು ಬ್ಯಾಟ್ಸ್‌ಮನ್‌ಗಳು ಸೊನ್ನೆ ಸುತ್ತಿದರೆ, ಇಡೀ ಇನ್ನಿಂಗ್ಸ್‌ನಲ್ಲಿ ಕೇವಲ ಮೂರು ಬೌಂಡರಿಗಳು ದಾಖಲಾದವು.



ಸಂಕ್ಷಿಪ್ತ ಸ್ಕೋರ್
ಬಾಂಗ್ಲಾದೇಶ: 43ಕ್ಕೆ ಆಲೌಟ್ (18.4 ಓವರ್‌ಗಳು) ಲಿಟನ್ ದಾಸ್ 25, ಕೀಮರ್ ರೋಚ್ 8/5, ಮಿಗುಯೆಲ್ ಕಮಿನ್ಸ್ 11/3, ಜೇಸನ್ ಹೋಲ್ಡರ್ 10/2.

ವೆಸ್ಟ್ ಇಂಡೀಸ್: 201ಕ್ಕೆ 2 (68 ಓವರ್‌ಗಳು). ಕ್ರೆಗ್ ಬ್ರಾಥ್‌ವೈಟ್ 88*, ಡೆವೊನ್ ಸ್ಮಿತ್ 58, ಕೀರನ್ ಪೊವೆಲ್ 48, ಅಬು ಜಾಯೆದ್ 55/1.

Story first published: Thursday, July 5, 2018, 15:29 [IST]
Other articles published on Jul 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X