ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್: ಲಂಕನ್ನರ ಹೆಡೆ ಮುರಿ ಕಟ್ಟಿದ ಬಾಂಗ್ಲಾ ಹುಲಿಗಳು

Bangaladesh won by 137 runs against Sri Lanka in Asia cup 2018

ದುಬೈ, ಸೆಪ್ಟೆಂಬರ್ 16: ಏಷ್ಯಾಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ ತಂಡವು 137 ರನ್‌ಗಳ ಭರ್ಜರಿ ಜಯಗಳಿಸಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಮುಶ್ಫಿಕರ್ ರಹೀಮ್ ಅವರ ಶತಕದ ನೆರವಿನಿಂದ 261 ರನ್‌ಗಳ ಮೊತ್ತವನ್ನು ಲಂಕಾದೆದುರು ಇರಿಸಿತ್ತು. ಸಾಮಾನ್ಯ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ತಂಡ 124 ರನ್‌ಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಬಾಂಗ್ಲಾದ ಮುಂದೆ ಮಂಡಿ ಊರಿತು.

ಬಾಂಗ್ಲಾದೇಶ ಬೌಲರ್‌ಗಳ ಸಂಘಟಿತ ಬೌಲಿಂಗ್ ಮುಂದೆ ಲಂಕಾದ ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಹೆಚ್ಚು ಹೊತ್ತು ಸ್ಕ್ರೀಜಿನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ತರಂಗ 16 ಎಸೆತದಲ್ಲಿ 27 ರನ್ ಭಾರಿಸಿ ಭರವಸೆ ಮೂಡಿಸಿದ್ದರಾದರೂ ಅವರ ಆಟ ಹೆಚ್ಚು ಹೊತ್ತು ನಡೆಯಲಿಲ್ಲ.

ಶ್ರೀಲಂಕಾದ ಆರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಸಹ ತಲುಪೆ ಔಟಾದರು. ಬಾಂಗ್ಲಾದ ಬೌಲರ್ ಮುಷ್ರಪೆ ಮೊರ್ತಾಜಾ , ಮುಸ್ತಪಜಾರ್ ರೆಹ್ಮಾನ್, ಮೊಯಿದ್ದೀನ್ ಹಸನ್ ತಲಾ ಎರಡು ವಿಕೆಟ್ ಪಡೆದರೆ, ಶಕೀಬ್ ಉಲ್ ಹಸನ್, ರುಬೆಲ್ ಹೊಸೇನ್, ಮೊಸಾದೆಕ್ ಹೊಸೇನ್ ತಲಾ ಒಂದು ವಿಕೆಟ್ ಪಡೆದು ಲಂಕಾದ ಬ್ಯಾಟ್ಸ್‌ಮನ್‌ಗಳು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದರು.

150 ಎಸೆತಕ್ಕೆ 144 ರನ್ ಭಾರಿಸಿದ ಮುಶ್ಫಿಕರ್ ರೆಹಮಾನ್ ಪಂದ್ಯ ಪುರುಶೋತ್ತಮ ಗೌರವಕ್ಕೆ ಭಾಜನರಾದರು. ಏಷ್ಯಾಕಪ್‌ನ ಎರಡನೇ ಪಂದ್ಯ ಪಾಕಿಸ್ತಾನ ಮತ್ತು ಕ್ರಿಕೆಟ್ ಶಿಶು ಹಾಂಕಾಂಗ್‌ ನಡುವೆ ನಡೆಯಲಿದೆ.

Story first published: Sunday, September 16, 2018, 10:24 [IST]
Other articles published on Sep 16, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X