ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಮಣಿಸಲು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸ್ಮಿತ್, ವಾರ್ನರ್ ಕೋಚಿಂಗ್?!

Banned Steve Smith helps Australia’s pace bowlers prepare for India Test series

ಸಿಡ್ನಿ, ನವೆಂಬರ್ 27: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್, ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರು ಮುಂಬರಲಿರುವ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಸ್ಮಿತ್-ವಾರ್ನರ್ ಇಬ್ಬರೂ, ಭಾರತವನ್ನು ಕಟ್ಟಿ ಹಾಕಲು ಆಸೀಸ್ ಬೌಲರ್‌ಗಳನ್ನು ತಯಾರುಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಮೈಸೂರು : ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡಮೈಸೂರು : ಮಹಾರಾಷ್ಟ್ರ ವಿರುದ್ಧದ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ

ದಕ್ಷಿಣಾ ಆಫ್ರಿಕಾದಲ್ಲಿ ಆಫ್ರಿಕಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪದಲ್ಲಿ ಪಾಲ್ಗೊಂಡು ಸ್ಮಿತ್ ಮತ್ತು ವಾರ್ನರ್ ಇಬ್ಬರೂ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಒಂದು ವರ್ಷದ ನಿಷೇಧಕ್ಕೆ ಗುರಿಯಾಗಿದ್ದರು. ಇದೇ ಪ್ರಕರಣದಲ್ಲಿ ಮತ್ತೊಬ್ಬ ಆಸೀಸ್ ಆಟಗಾರ ಕ್ಯಾಮೆರಾನ್ ಬ್ಯಾನ್‌ಕ್ರಾಫ್ಟ್‌ ಕೂಡ 9 ತಿಂಗಳ ನಿಷೇಧಕ್ಕೆ ಒಳಗಾಗಿದ್ದರು.

ಟಿ20ಐ ಶ್ರೇಯಾಂಕದಲ್ಲಿ ಕುಲದೀಪ್, ರಶೀದ್ ರಿಂದ 'ದೊಡ್ಡ ನೆಗೆತ'ಟಿ20ಐ ಶ್ರೇಯಾಂಕದಲ್ಲಿ ಕುಲದೀಪ್, ರಶೀದ್ ರಿಂದ 'ದೊಡ್ಡ ನೆಗೆತ'

ಪ್ರತಿಭಾನ್ವಿತ ಆಟಗಾರರ ಬೆಂಬಲವಿಲ್ಲದೆ ಆಸ್ಟ್ರೇಲಿಯಾ ತಂಡ ಅನಂತರ ದುರ್ಬಲ ತಂಡವಾಗಿ ಗುರುತಿಸಿಕೊಂಡಿತ್ತು. ಹೀಗಾಗಿ ಭಾರತ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಇಬ್ಬರೂ ಸ್ಫೋಟಕ ಬ್ಯಾಟ್ಸ್ಮನ್ ಗಳ ಮೇಲಿನ ನಿಷೇಧವನ್ನು ಕಡಿತಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಕೊಸರಾಟ ನಡೆಸಿತ್ತು. ಆದರೆ ಅದಕ್ಕೆ ಅವಕಾಶ ಲಭಿಸಿಲ್ಲ.

ಅಷ್ಟಕ್ಕೇ ಸುಮ್ಮನಿರದ ಸ್ಮಿತ್, ತನ್ನ ದೇಶದ ಬೌಲರ್ ಗಳಿಗೆ ಕೊಹ್ಲಿ ಬಳಗವನ್ನು ಕಟ್ಟಿಹಾಕಲು ನೆರವಾಗುವಂತ ಟಿಪ್ಸ್‌ ನೀಡಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ಆಸ್ಟ್ರೇಲಿಯಾ ತಂಡದ ಅಭ್ಯಾಸದ ವೇಳೆ ತಾನೇ ಬ್ಯಾಟ್ ಹಿಡಿಯುವ ಮೂಲಕ ತಂಡದ ಬೌಲರ್‌ಗಳ ತಯಾರಿಗೆ ನೆರವಾಗಿದ್ದಾರೆ.

ಮತ್ತೊಂದೆಡೆ ಡೇವಿಡ್ ವಾರ್ನರ್ ಕೂಡ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಬ್ಯಾಟ್ ಹಿಡಿದು ಬೌಲರ್ ಗಳ ಅಭ್ಯಾಸಕ್ಕೆ ನೆರವಾಗಿದ್ದಾರೆ. ಈ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಅಂಪೈರ್ ಆಗಿ ನಿಂತಿದ್ದರು. ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಆಗುತ್ತಿದೆ.

Story first published: Tuesday, November 27, 2018, 15:58 [IST]
Other articles published on Nov 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X