ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್ ಟೆಸ್ಟ್: ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೊಹ್ಲಿ ಮಾತು

Batsmen didn’t do enough for the bowlers - Virat Kohli

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ ಸರಣಿ ಸೋಲಿನ ಬಗ್ಗೆ ಮಾತುಗಳನ್ನಾಡಿದ್ದಾರೆ. ಸೋಲಿಗೆ ಕಾರಣರಾದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ್ದಾರೆ.

ಟೀಮ್ ಇಂಡಿಯಾ ಎರಡು ಟೆಸ್ಟ್ ಪಂದ್ಯಗಳಲ್ಲೂ ಕಳಪೆ ಬ್ಯಾಟಿಂಗ್‌ನ ಕಾರಣದಿಂದಾಗಿಯೇ ಸೋಲನ್ನು ಕಂಡಿತ್ತು. ಇದು ಅನೇಕ ಮಾಜಿ ಆಟಗಾರರು ಸೇರಿದಂತೆ ಕ್ರಿಕೆಟ್ ವಿಮರ್ಶಕರಿಂದ ಮಾಧ್ಯಮಗಳಲ್ಲಿ ಕಟು ಟೀಕೆಗೆ ಕಾರಣವಾಗಿತ್ತು.

ಈ ಮಧ್ಯೆ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಸ್ವತಃ ಕೊಹ್ಲಿ ಮಾತನಾಡಿದ್ದಾರೆ.

ಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾಗೆ ಸೋಲು: ಮತ್ತೆ ಕ್ಲೀನ್‌ಸ್ವೀಪ್ ಮುಖಭಂಗಎರಡನೇ ಟೆಸ್ಟ್‌ನಲ್ಲೂ ಟೀಮ್ ಇಂಡಿಯಾಗೆ ಸೋಲು: ಮತ್ತೆ ಕ್ಲೀನ್‌ಸ್ವೀಪ್ ಮುಖಭಂಗ

ಬೌಲರ್‌ಗಳಿಗೆ ಸಾಥ್ ಸಿಗಲಿಲ್ಲ

ಬೌಲರ್‌ಗಳಿಗೆ ಸಾಥ್ ಸಿಗಲಿಲ್ಲ

ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳಿಗೆ ಸಾಕಾಗುವಷ್ಟು ರನ್ ಪೇರಿಸಿರಲಿಲ್ಲ. ಈ ಕಾರಣದಿಂದಾಗಿ ಬೌಲರ್‌ಗಳಿಗೆ ಟೀಮ್ ಇಂಡಿಯಾ ಸೋಲುವುದನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ

ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಉತ್ತಮ ಬೌಲಿಂಗ್ ಪ್ರದರ್ಶನವನ್ನು ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕಡಿಮೆ ಮೊತ್ತದ ಬಳಿಕವೂ ಟೀಮ್ ಇಂಡಿಯಾ 7 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌ಗಳು ಅದಕ್ಕೂ ಕಳಪೆ ಪ್ರದರ್ಶನವನ್ನು ನೀಡಿದರು.

ನ್ಯೂಜಿಲೆಂಡ್ ಉತ್ತಮ ಆಟ

ನ್ಯೂಜಿಲೆಂಡ್ ಉತ್ತಮ ಆಟ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾತನಾಡುತ್ತಾ ' ತಂಡ ಮಾಡಿಕೊಂಡ ರಣತಂತ್ರವನ್ನು ಮೈದಾನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮತ್ತೊಂದು ಕಡೆ ನ್ಯೂಜಿಲೆಂಡ್ ಆಟಗಾರರು ಉತ್ತಮ ಆಟವನ್ನು ಪ್ರದರ್ಶಿಸಿದರು ಎಂಬ ಮಾತನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಸೋಲಿನ ವಿಮರ್ಶೆ

ಸೋಲಿನ ವಿಮರ್ಶೆ

ಈಗ ನಾವು ತಂಡದ ಸೋಲಿನ ವಿಮರ್ಶೆಯನ್ನು ಮಾಡಬೇಕಾಗಿದೆ. ಆಗಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕಾಗಿದೆ. ಆದರೆ ಈ ಪ್ರವಾಸದ ಸೋಲಿಗೆ ನೆಪಗಳನ್ನು ಹೇಳಲು ಬಯಸುವುದಿಲ್ಲ. ಆದರೆ ಈ ಸೋಲಿನಿಂದ ತಂಡ ಪಾಠವನ್ನು ಕಲಿತಿದೆ ಎಂಬ ಮಾತನ್ನು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಏಕದಿನದಲ್ಲಿ ಯುವ ಆಟಗಾರರ ಪ್ರದರ್ಶನಕ್ಕೆ ಪ್ರಶಂಸೆ

ಏಕದಿನದಲ್ಲಿ ಯುವ ಆಟಗಾರರ ಪ್ರದರ್ಶನಕ್ಕೆ ಪ್ರಶಂಸೆ

ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರು ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾರಂತಾ ಆಟಗಾರರ ಅನುಪಸ್ಥಿತಿ ಮತ್ತು ಸ್ವತಃ ವಿರಾಟ್ ಕೊಹ್ಲಿಯ ವೈಫಲ್ಯದ ಮಧ್ಯೆಯೂ ಉತ್ತಮ ಪ್ರದರ್ಶನ ನೀಡಿರುವುದಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.

Story first published: Monday, March 2, 2020, 18:39 [IST]
Other articles published on Mar 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X