ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡಲು ಸಮರ್ಥರಾಗಿದ್ದರೆ ತಂಡಕ್ಕೆ ಸಹಕಾರಿ: ಸುರೇಶ್ ರೈನಾ

Batsmen Should Be Able To Bowl, It Helps Team: Suresh Raina

ಭಾರತ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯನ್ನು ಅಂತ್ಯಗೊಳಿಸಿದೆ. ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದ್ದರೆ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಆದರೆ ಈ ಸರಣಿಯಲ್ಲಿ ಹೆಚ್ಚಿನ ಚರ್ಚೆಗೆ ಒಳಗಾಗಿದ್ದು ಭಾರತ ತಂಡದಲ್ಲಿ ಆರನೇ ಬೌಲರ್‌ನ ಕೊರತೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಪ್ರತಿಕ್ರಿಯಿಸಿದ್ದಾರೆ.

ತಂಡದಲ್ಲಿ ಬ್ಯಾಟ್ಸ್‌ಮನ್‌ಗಳು ಬೌಲಿಂಗ್ ಮಾಡಲು ಸಮರ್ಥರಾಗಿರಬೇಕು. ಇದರಿಂದ ತಂಡಕ್ಕೆ ಸಾಕಷ್ಟು ಸಹಾಯಕವಾಗಲಿದೆ ಎಂದು ರೈನಾ ಅಭಿಪ್ರಾಯಪಟ್ಟಿದ್ದಾರೆ. ಬ್ಯಾಟ್ಸಸಮನ್ ಓರ್ವ ಬೌಲಿಂಗ್ ಕೂಡ ಮಾಡಬಲ್ಲ ಎಂದಾದರೆ ನಾಯಕನಿಗೆ ಹೆಚ್ಚಿನ ಆಯ್ಕೆಗಳು ದೊರೆಯುತ್ತದೆ. ಅಂತಿಮವಾಗಿ ಅದರ ಲಾಭ ತಂಡಕ್ಕೆ ದೊರೆಯುತ್ತದೆ ಎಂದು ರೈನಾ ಹೇಳಿದ್ದಾರೆ.

ಭಾರತ vs ಆಸೀಸ್: ಉತ್ತಮ ನಡೆಯಿಂದ ಗಮನ ಸೆಳೆದ ವಿರಾಟ್ ಕೊಹ್ಲಿಭಾರತ vs ಆಸೀಸ್: ಉತ್ತಮ ನಡೆಯಿಂದ ಗಮನ ಸೆಳೆದ ವಿರಾಟ್ ಕೊಹ್ಲಿ

"ನಾವು ಹಳ್ಳಿಗಳಲ್ಲಿ ಆಡುತ್ತಿದ್ದಾಗ ಆ ಸಮಯದಲ್ಲಿ ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್ ಕೂಡ ಮಾಡಬೇಕಿತ್ತು. ಇಲ್ಲವಾದಲ್ಲಿ ತಂಡದಲ್ಲಿ ನಮಗೆ ಅವಕಾಶ ದೊರೆಯುತ್ತಿರಲಿಲ್ಲ. ನೀವು ಬೌಲಿಂಗ್ ಮಾಡುತ್ತೀರಿ ಎಂದಾಗದರೆ ನಾಯಕನಿಗೂ ಹೆಚ್ಚಿನ ಆಯ್ಕೆಗಳು ದೊರೆಯುತ್ತದೆ" ಎಂದು ರೈನಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಸಚಿನ್ ತೆಂಡೂಲ್ಕರ್ ಬೌಲಿಂಗ್ ಮಾಡುತ್ತಿದ್ದರು, ವೀರೇಂದ್ರ ಸೆಹ್ವಾಗ್ ಸಾಕಷ್ಟು ವಿಕೆಟ್ ಪಡೆದಿದ್ದಾರೆ. ಯುವರಾಜ್ ಸಿಂಗ್ ತಮ್ಮ ಬೌಲಿಂಗ್ ಸಾಮರ್ಥ್ಯದ ಮೂಲಕ ವಿಶ್ವಕಪ್‌ನಂತಾ ಶ್ರೇಷ್ಠ ಪ್ರಶಸ್ತಿ ಗೆಲ್ಲಲು ಕಾರಣರಾಗಿದ್ದರು" ಎಂದು ಸುರೇಸ್ ರೈನಾ ಹೇಳಿಕೆ ನೀಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆಭಾರತ vs ಆಸ್ಟ್ರೇಲಿಯಾ: ಅಭಿಮಾನಿಗಳ ಹೃದಯ ಗೆದ್ದ ಸರಣಿ ಶ್ರೇಷ್ಠ ಹಾರ್ದಿಕ್ ಪಾಂಡ್ಯ ನಡೆ

ಪ್ರತಿ ತಂಡದ ನಾಯಕನಿಗೂ ನಾಲ್ಕರಿಂದ ಐದು ಓವರ್‌ಗಳ ಬೌಲಿಂಗ್ ಮಾಡಬಲ್ಲ ಸಾಮರ್ಥ್ಯದ ಬ್ಯಾಟ್ಸ್‌ಮನ್ ಇರುವುದು ಪ್ರಮುಖವಾಗುತ್ತದೆ. ಬ್ಯಾಟ್ಸ್‌ಮನ್ ಓರ್ವ ಬೌಲಿಂಗ್ ಮಾಡುವುದು ತಂಡಕ್ಕೆ ತುಂಬಾ ಪ್ರಮುಖವಾಗುತ್ತದೆ. ಹಾಗೆಯೇ ಬೌಲರ್ ಓರ್ವ ಬ್ಯಾಟಿಂಗ್ ಮೂಲಕ ನೆರವಾಗುವುದು ಕೂಡ ತಂಡದ ಪಾಲಿಗೆ ಬಹಳ ಸಹಕಾರಿ ಎಂದು ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Story first published: Tuesday, December 8, 2020, 23:27 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X