ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಎಂಎಸ್ ಧೋನಿ, ಫಾಫ್ ಡು ಪ್ಲೆಸಿಸ್‌ ಬ್ಯಾಟಿಂಗ್ ಸಲಹೆ ನನಗೆ ಶ್ರೀಲಂಕಾದಲ್ಲಿ ಸಹಾಯ ಮಾಡಲಿದೆ'

Batting tips from MS Dhoni and Faf Du Plessis will help me in Sri Lanka Tour: Ruturaj Gaikwad

ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್ ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನ ನೀಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡಿದ್ದ ಗಾಯಕ್ವಾಡ್ ಒಳ್ಳೆಯ ಬ್ಯಾಟಿಂಗ್ ಮಾಡಿದ್ದರು.

ಟೀಮ್ ಇಂಡಿಯಾದ ಈ 3 ಅನುಭವಿ ಆಟಗಾರರಿಗೆ ಶ್ರೀಲಂಕಾ ಪ್ರವಾಸವೇ ಕೊನೆಯ ಅವಕಾಶವಾಗುತ್ತಾ?ಟೀಮ್ ಇಂಡಿಯಾದ ಈ 3 ಅನುಭವಿ ಆಟಗಾರರಿಗೆ ಶ್ರೀಲಂಕಾ ಪ್ರವಾಸವೇ ಕೊನೆಯ ಅವಕಾಶವಾಗುತ್ತಾ?

ಐಪಿಎಲ್‌ನಲ್ಲಿ ಮೂರು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡುವಾಗ ಎಂಎಸ್ ಧೋನಿ ಮತ್ತು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಳೆಯುವ ಅವಕಾಶ ಸಿಕ್ಕಿರುವುದರಿಂದ ಅವರಿಂದ ಮೌಲ್ಯಯುತ ಸಲಹೆಗಳು, ಮಾರ್ಗದರ್ಶನ ದೊರೆತಿದೆ ಎಂದು ಋತುರಾಜ್ ಗಾಯಕ್ವಾಡ್ ತಿಳಿಸಿದ್ದಾರೆ

"ಫಾಫ್ ಡು ಪ್ಲೆಸಿಸ್ ಹೀಗೆ ಹೆಚ್ಚು ಮಾತನಾಡುವುದಿಲ್ಲ. ಆದರೆ ನಾವು ಒಳ್ಳೆಯ ಶಾಟ್ ಆಡಿದರೆ ಅದಕ್ಕೆ ಪ್ರತಿಕ್ರಿಯಿಸುತ್ತಾರೆ. ಆಟದ ವೇಳೆ ಅವರು ಬಳಿ ಬಂದು ಬರೀ ಪಂಪ್ ಮಾಡ್ತಾರೆ. ಆದರೆ ಪಂದ್ಯದ ಬಳಿಕ ನನ್ನಲ್ಲಿ, ಹೇಗೆ ಆ ಶಾಟ್ ಹೊಡೆದೆ ಇತ್ಯಾದಿ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ. ಅವರೊಟ್ಟಿಗೆ ಮಧ್ಯಮ ಕ್ರಮಾಂಕದಲ್ಲಿ ಆಡೋದು ಖುಷಿಕೊಡುತ್ತೆ," ಎಂದು ಗಾಯಕ್ವಾಡ್ ಹೇಳಿದ್ದಾರೆ.

ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!

"ನಿಮ್ಮ ಜೊತೆಗೆ ಎಂಎಸ್ ಧೋನಿ, ಫಾಫ್ ಡು ಪ್ಲೆಸಿಸ್ ಅಥವಾ ಸುರೇಶ್ ರೈನಾ ಇದ್ದರೆ ನಿಮಗೆ ಹೆಚ್ಚು ಆತ್ಮವಿಶ್ವಾಸ ಬರುತ್ತದೆ, ನಿಮಗೆ ಹೆಚ್ಚು ಬೂಸ್ಟ್ ಸಿಗುತ್ತದೆ. ಮುಖ್ಯವಾಗಿ ಫಾಫ್ ಕ್ರಿಕೆಟ್‌ ಬಗ್ಗೆ ಮಾತನಾಡುತ್ತಿರುತ್ತಾರೆ. ಧೋನಿಯ ಅನುಭವಗಳೂ ಪಾಠವಾಗಿ ನಮ್ಮ ಜೊತೆಗಿವೆ. ಧೋನಿ, ಡು ಪ್ಲೆಸಿಸ್ ಬ್ಯಾಟಿಂಗ್ ಟಿಪ್ಸ್ ನನಗೆ ಶ್ರೀಲಂಕಾದಲ್ಲಿ ನೆರವಾಗಬಹುದು," ಎಂದು ಗಾಯಕ್ವಾಡ್ ವಿವರಿಸಿದ್ದಾರೆ.

Story first published: Friday, July 9, 2021, 21:19 [IST]
Other articles published on Jul 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X