ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಗ್‌ ಬ್ಯಾಶ್ ಲೀಗ್ 2021: ಟ್ರೋಫಿ ಮುಡಿಗೇರಿಸಿಕೊಂಡ ಪರ್ತ್‌ ಸ್ಕಾಚರ್ಸ್‌

Perth scorchers

ಮೆಲ್ಬರ್ನ್‌ನ ಡಾಕ್ಲೆಂಡ್ಸ್‌ ಸ್ಟೇಡಿಯಂನಲ್ಲಿ ನಡೆದ ಬಿಗ್ ಬ್ಯಾಶ್ ಲೀಗ್ 2021ರ ಟಿ20 ಫೈನಲ್‌ನಲ್ಲಿ ಸಿಡ್ನಿ ಸಿಕ್ಸರ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಪರ್ತ್ ಸ್ಕಾಚರ್ಸ್ ಚಾಂಪಿಯನ್ ಪಟ್ಟಕ್ಕೇರಿದೆ.

ಟಾಸ್‌ ಸೋತರು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಪರ್ತ್ ಸ್ಕಾಚರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ನಥಾನ್ ಲಿಯಾನ್ ಮತ್ತು ಓ ಕೀಫ್ ದಾಳಿಗೆ ಮೊದಲ ನಾಲ್ವರು ಬ್ಯಾಟ್ಸ್‌ಮನ್‌ಗಳನ್ನ ಬಹುಬೇಗ ಕಳೆದುಕೊಂಡಿದ್ದ ಪರ್ತ್ ಸ್ಕಾಚರ್ಸ್‌ಗೆ ಆಧಾರವಾಗಿದ್ದು ನಾಯಕ ಆ್ಯಸ್ಟನ್ ಟರ್ನರ್ ಮತ್ತು ಲೌರಿ ಇವಾನ್ಸ್‌.

ಟರ್ನರ್ 35 ಎಸೆತಗಳಲ್ಲಿ 54 ರನ್ ಸಿಡಿಸಿದ್ದು, ಇವರ ಇನ್ನಿಂಗ್ಸ್ 4 ಬೌಂಡರಿ ಮತ್ತು 1 ಸಿಕ್ಸರ್‌ಗಳಿತ್ತು. ಈತನಿಗೆ ಉತ್ತಮ ಸಾಥ್ ನೀಡಿದ ಲೌರಿ ಇವಾನ್ಸ್‌ 41 ಎಸೆತಗಳಲ್ಲಿ ಅಜೇಯ 76 ರನ್ ಕಲೆಹಾಕುವ ಮೂಲಕ ತಂಡದ ಮೊತ್ತವನ್ನ 150ರ ಗಡಿದಾಟಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳಿದ್ದವು.

ಅಂತಿಮವಾಗಿ ಪರ್ತ್ ಸ್ಕಾಚರ್ಸ್‌ 171 ರನ್ ಕಲೆಹಾಕಿ ಸಿಡ್ನಿ ಸಿಕ್ಸರ್‌ಗೆ 172 ರನ್‌ಗಳ ಗುರಿ ನೀಡಿತು.

172 ರನ್ ಗಳ ಕಠಿಣ ಗುರಿಯೊಂದಿಗೆ ಕಣಕ್ಕೆ ಇಳಿದ ಸಿಡ್ನಿ ಸಿಕ್ಸರ್ಸ್ ತಂಡ ಯಾವ ದಿಕ್ಕಿನಲ್ಲೂ ಗೆಲುವಿನತ್ತ ಹೆಜ್ಜೆ ಇಡಲಿಲ್ಲ. ಡೇನಿಯಲ್ ಹ್ಯೂಸ್ (42) ಹೊರತುಪಡಿಸಿದರೆ ತಂಡದ ಉಳಿದವರು ಬ್ಯಾಟ್ ಬೀಸುವುದನ್ನೇ ಮರೆತರು. ಪರ್ತ್ ಸ್ಕಾರ್ಚರ್ಸ್ ಬೌಲರ್ ಗಳಿಗೆ ಸಿಡ್ನಿ ಸಿಕ್ಸರ್ಸ್ ಸತತವಾಗಿ ವಿಕೆಟ್ ಕಳೆದುಕೊಂಡಿತು. ಎಲ್ಲಿಯೂ ಗುರಿ ಮುಟ್ಟುವ ದಿಕ್ಕಿನಲ್ಲಿ ಸಾಗಲಿಲ್ಲ.

ಆರಂಭಿಕರಾದ ಹೇಡನ್ ಕೆರ್ 2, ನಿಕೋಲಸ್ ಬರ್ಟಸ್ ಕೇವಲ 15 ರನ್ ಗಳಿಸಿದರು. ಡೇನಿಯಲ್ ಹ್ಯೂಸ್ ಒಬ್ಬರೇ 42 ರನ್ ಗಳಿಸಿ ಮಿಂಚಿದರು. ನಾಯಕ ಮೊಯಿಸಸ್ ಹೆನ್ರಿಕ್ಸ್ 7 ರನ್ ಗಳಿಸಿ ಔಟಾದರು. ಡೇನಿಯಲ್ ಕ್ರಿಶ್ಚಿಯನ್ 3, ಜಸ್ಟಿನ್ ಅವೆಂಡಾನೊ 1, ಅಬಾಟ್ 1, ವಿಕೆಟ್ ಕೀಪರ್ ಜಾಯ್ ಲಿಂಟೈನ್ ಕೇವಲ 10 ರನ್ ಗಳಿಸಿದರು. ಗುರಿ ಮುಟ್ಟಲು ವಿಫಲವಾದ ಸಿಡ್ನಿ ಸಿಕ್ಸರ್ಸ್ 16.2 ಓವರ್ ಗಳಲ್ಲಿ 92 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಪರ್ತ್ ಸ್ಕಾರ್ಚರ್ಸ್ ನಾಲ್ಕನೇ ಬಾರಿಗೆ ಬಿಗ್ ಬ್ಯಾಷ್ ಲೀಗ್ ಟ್ರೋಫಿಯನ್ನು ಗೆದ್ದು 79 ರನ್ ಗಳ ಭಾರೀ ಜಯ ಸಾಧಿಸಿತು. ಪರ್ತ್ ಬೌಲರ್ ಗಳಲ್ಲಿ ಟೈ 3, ರಿಚರ್ಡ್ ಸನ್ 2, ಟರ್ನರ್, ಪೀಟರ್, ಅಗಿರ್, ಜೇಸನ್ ತಲಾ ಒಂದು ವಿಕೆಟ್ ಪಡೆದರು.

ನಾಲ್ಕನೇ ಬಾರಿಗೆ ಟ್ರೋಫಿ ಗೆದ್ದ ಪರ್ತ್ ಸ್ಕಾಚರ್ಸ್
ಪರ್ತ್‌ ಸ್ಕಾಚರ್ಸ್ ತಂಡಕ್ಕೆ ಇದು ನಾಲ್ಕನೇ ಬಿಗ್ ಬ್ಯಾಶ್ ಟ್ರೋಫಿಯಾಗಿದೆ. ಈ ಮೊದಲು ಸೀಸನ್ 3, 4 ಮತ್ತು 6 ಅನ್ನು ಗೆದ್ದಿದೆ. ಅಂತಿಮ ಪಂದ್ಯದಲ್ಲಿ ಅಜೇಯ 76 ರನ್ ಗಳಿಸಿದ ಲ್ಯಾರಿ ಇವಾನ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿ ಬೆನ್ ಮೆಕ್‌ಡರ್ಮಾಟ್‌ಗೆ ಸಂದಿದೆ.

Sachin Tendulkarಗೆ DRS ಇದ್ದಿದ್ದರೆ ಕಥೆಯೇ ಬೇರೆ ಆಗುತ್ತಿತ್ತು | Oneindia Kannada

ಲೀಗ್ ಹಂತದಲ್ಲಿ ಪರ್ತ್ ಸ್ಕಾಚರ್ಸ್ 40 ಪಾಯಿಂಟ್ಸ್‌ನೊಂದಿಗೆ ಟೇಬಲ್ ಟಾಪರ್ ಆಗಿ ಗುರುತಿಸಿಕೊಂಡಿತ್ತು. ಆಡಿದ 14 ಪಂದ್ಯಗಳಲ್ಲಿ 11 ಪಂದ್ಯ ಗೆದ್ದಿತ್ತು. ಇನ್ನು ರನ್ನರ್ ಅಪ್ ತಂಡ ಸಿಡ್ನಿ ಸಿಕ್ಸರ್‌ ಎರಡನೇ ಸ್ಥಾನ ಪಡೆದು ನಾಕೌಟ್ ಹಂತ ಪ್ರವೇಶಿಸಿತು. ಸಿಡ್ನಿ ಸಿಕ್ಸರ್ ಆಡಿದ 14 ಪಂದ್ಯಗಳಲ್ಲಿ 9 ಪಂದ್ಯದ ಗೆಲುವಿನೊಂದಿಗೆ 35 ಅಂಕ ಸಂಪಾದಿಸಿ ನೆಟ್‌ ರನ್‌ ಆಧಾರದಲ್ಲಿ ಎರಡನೇ ಸ್ಥಾನದಲ್ಲಿತ್ತು. ಏಕೆಂದರೆ ಸಿಡ್ನಿ ಥಂಡರ್ ಕೂಡ 35 ಅಂಕ ಗಳಿಸಿತ್ತು.

Story first published: Friday, January 28, 2022, 22:48 [IST]
Other articles published on Jan 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X