ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2020ರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಮುಖ್ಯಾಂಶಗಳು

BCCI 89th AGM on December 24: Highlights and Major Decisons Taken by BCCI

ಭಾರತೀಯ ಕ್ರಿಕೆಟ್ ಮಂಡಳಿಯ 89ನೇ ವಾರ್ಷಿಕ ಸಾಮಾನ್ಯ ಸಭೆ ಅಹ್ಮದಾಬಾದ್‌ನಲ್ಲಿ ನಡೆದಿದ್ದು ಸಾಕಷ್ಟು ಮುಖ್ಯ ವಿಚಾರಗಳು ಚರ್ಚೆಯಾಗಿದೆ. ಬಿಸಿಸಿಐನ ಆಡಳಿತ ಮಂಡಳಿಯ ಈ ಸಭೆಯನ್ನು ಕೆಲ ಪ್ರಮುಖ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಲಾಗಿದೆ. ಇದರಲ್ಲಿ 2022ರ ಐಪಿಎಲ್‌ಗೆ ಎರಡು ಹೊಸ ತಂಡಗಳ ಸೇರ್ಪಡೆ ಪ್ರಮುಖವಾದ ನಿರ್ಧಾರವಾಗಿದೆ. ಇದು 2020ರಲ್ಲಿ ಬಿಸಿಸಿಐ ಐಪಿಎಲ್ ಇತಿಹಾಸದಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಂತಾಗಿದೆ. ಹಾಗಾದರೆ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಮುಖ್ಯಾಂಶಗಳನ್ನು ನೋಡೋಣ

*2022ರ ಐಪಿಎಲ್ ಆವೃತ್ತಿಗೆ ಎರಡು ಹೊಸ ಐಪಿಎಲ್ ತಂಡಗಳ ಸೇರ್ಪಡೆ.
*ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸುವ ವಿಚಾರದ ಬಗ್ಗೆಯೂ ಬಿಸಿಸಿಐ ತನ್ನ ಇಂದಿನ ಸಭೆಯಲ್ಲಿ ಚರ್ಚೆಯನ್ನು ನಡೆಸಿದೆ. ಈ ವಿಚಾರದಲ್ಲಿ ಬೆಂಬಲವನ್ನು ನಿಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ವಿವಚಾರವಾಗಿ ಒಂದಷ್ಟು ಪ್ರಶ್ನೆಗಳನ್ನು ಐಸಿಸಿ ಮುಂದಿಡಲಿದೆ.

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2022ರಿಂದ 10 ತಂಡಗಳ ಐಪಿಎಲ್‌ಗೆ ಒಪ್ಪಿಗೆ
*ಪುರಷರ ಹಾಗೂ ಮಹಿಳೆಯ ಎಲ್ಲಾ ಕ್ರಿಕೆಟ್ ಪಂದ್ಯಾವಳಿಗಳನ್ನು ನಡೆಸುವ ಕುರಿತು ಚರ್ಚಿಸಲಾಗಿದೆ.
*ವಯೋಮಾನ ಆಧಾರಿತ ಕ್ರಿಕೆಟ್ ಪಂದ್ಯವಾಳಿಗಳು ನಡೆಯದಿದ್ದರೆ ಬಿಸಿಸಿಐ ಅದಕ್ಕೆ ಪರಿಹಾರವನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ.
*ಮಹಿಳಾ ಟೆಸ್ಟ್ ಕ್ರಿಕೆಟ್ ಆಯೋಜನೆಯ ಬಗ್ಗೆ ಅಪೆಕ್ಸ್ ಕೌನ್ಸಿಲ್ ನಿರ್ಧಾರವನ್ನು ತೆಗೆದುಕೊಳ್ಳಲಿದೆ. 2021ರಿಂದಲೇ ಈ ಟೆಸ್ಟ್ ಪಂದ್ಯಗಳು ಆರಂಭವಾಗು ಸಾಧ್ಯತೆಯಿದೆ.
*ದೇಶೀಯ ಮಹಿಳಾ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವ ಬಗ್ಗೆಯೂ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಮುಕ್ತಾಯದ ನಂತರ ಇದು ಆರಂಭವಾಗಲಿದೆ.
*2020ರಲ್ಲಿ ಕೊರೊನಾ ವೈರಸ್‌ನ ಕಾರಣದಿಂದಾಗಿ ಸಾಕಷ್ಟು ಸರಣಿಗಳು ನಡೆದಿಲ್ಲ. ಹೀಗಾಗಿ ನಡೆಯದಿರುವ ಕ್ರಿಕೆಟ್ ಟೂರ್ನಿಗಳಿಗೆ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಹಾಗೂ ಪುರುಷ ಕ್ರಿಎಕಟ್ ಆಟಗಾರರಿಗೆ ಸಮಾನವಾಗಿ ಪರಿಹಾರ ಧನವನ್ನು ನೀಡಲು ಬಿಸಿಸಿಐ ತೀರ್ಮಾನವನ್ನು ತೆಗೆದುಕೊಂಡಿದೆ.
*ಆಯ್ಕೆ ಸಮಿತಿಯ ಸಭೆ ಇನ್ನು ಕೂಡ ನಡೆಯುತ್ತಿದೆ. ಈ ಬಗ್ಗೆ ಇನ್ನಷ್ಟೇ ನಿರ್ಧಾರವನ್ನು ತೆಗೆದುಕೊಳ್ಳಳಾಗುತ್ತದೆ.

Story first published: Thursday, December 24, 2020, 18:42 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X