ವಯಸ್ಸು ಮತ್ತು ವಿಳಾಸ ವಂಚನೆ ತಡೆಗೆ ಬಿಸಿಸಿಐ ಮತ್ತಷ್ಟು ಕಠಿಣ ಕ್ರಮ

ವಯಸ್ಸಿನ ವಂಚನೆ ಮಾಡಿ ತಂಡವನ್ನು ಸೇರಿಕೊಳ್ಳುವುದನ್ನು ಬಿಸಿಸಿಐ ಮತ್ತಷ್ಟು ಗಂಭೀರವಾಗಿ ಪರಿಗಣಿಸಿದೆ. ಇದಕ್ಕಾಗಿ ಮತ್ತಷ್ಟು ಕಠಿಣ ನಿಲುವನ್ನು ತೆಗೆದುಕೊಳ್ಳಲು ಬಿಸಿಸಿಐ ನಿರ್ಧರಿಸಿದ್ದು ನೈಜ ವಯಸ್ಸು ಪತ್ತೆಹಚ್ಚಲು ವೈಜ್ಞಾನಿಕ ನಿರ್ಧಾರವನ್ನು ಕ್ರಮಕ್ಕೆ ಮುಂದಾಗಿದೆ, ಮಾತ್ರವಲ್ಲ ಶಿಕ್ಷೆಯ ಪ್ರಮಾಣದಲ್ಲೂ ಹೆಚ್ಚಳ ಮಾಡಿದೆ.

ಸೀಮಿತ ವಯೋಮಾನದ ಕ್ರಿಕೆಟ್‌ನಲ್ಲಿ ವಯಸ್ಸು ಮತ್ತು ನಿವಾಸದ ವಂಚನೆಯನ್ನು ತಪ್ಪಿಸಲು ಬಿಸಿಸಿಐ ಹೆಚ್ಚುವರಿ ಕ್ರಮಗಳನ್ನು ಅಳವಡಿಸಿಕೊಂಡಿದ್ದು, ಇದು 2020-21ರ ಕ್ರೀಡಾ ಋತುವಿನಿಂದ ಎಲ್ಲಾ ವಯೋಮಾನದ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಎಲ್ಲ ಕ್ರಿಕೆಟಿಗರಿಗೆ ಅನ್ವಯವಾಗಲಿದೆ.

ಐಪಿಎಲ್ 2020: ಆರಂಭ, ಅಂತ್ಯ, ಸಮಯ, ಕ್ರೀಡಾಂಗಣ, ಪ್ರಾಯೋಜಕತ್ವ ಎಲ್ಲದಕ್ಕೂ ಸ್ಪಷ್ಟ ಉತ್ತರ

ಅದಕ್ಕೂ ಮುನ್ನ ಹೀಗೆ ವಯಸ್ಸು ಹಾಗೂ ನಿವಾಸದ ವಂಚನೆಯನ್ನು ಮಾಡಿದ ಆಟಗಾರರಿಗೆ ಒಂದು ಅವಕಾಶವನ್ನು ನೀಡಲಾಗಿದ್ದು ಈ ರೀತಿ ಮಾಡಿದ ಆಟಗಾರರು ತಾವಾಗಿಯೇ ಮುಂದೆ ಬಂದು ತಮ್ಮ ಹುಟ್ಟಿದ ದಿನಾಂಕದ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು ಅವಕಾಶವನ್ನು ನೀಡಿದೆ.

ಇದರ ಹೊರತಾಗಿಯೂ ನಕಲಿ ದಾಖಲಾತಿ ನಿಡಿರುವುದು ತಿಳಿದು ಬಂದರೆ ಅಂತಾ ಆಟಗಾರರನ್ನು ಎರಡುವರ್ಷಗಳ ಕಾಲ ನಿಷೇಧಕ್ಕೆ ಒಳಪಡಲಿದ್ದಾರೆ. ನಿಷೇಧ ಪೂಐರೈಸಿ ಬಂದ ಬಳಿಕ ಅಂತಾ ಆಟಗಾರರನ್ನು ವಯೋಮಾನಕ್ಕನುಗುಣವಾಗಿರುವ ವಿಭಾಗದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡದಿರಲು ನಿರ್ಧರಿಸಲಾಗಿದೆ.

ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಗಳಿಸಿದ ಮೊದಲ ಸಂಪಾದನೆ ಎಷ್ಟು? ಅದನ್ನು ಶರ್ಮಾ ಏನ್ಮಾಡಿದ್ರು?

ಎಲ್ಲಾ ವರ್ಗಗಳ ಕ್ರಿಕೆಟಿಗರು ಹಿರಿಯ ಕ್ರಿಕೆಟ್ ವಿಭಾಗದ ಪುರುಷರು ಹಾಗೂ ಮಹಿಳಾ ಕ್ರಿಕೆಟ್ ಆಟಗಾರರು ಕೂಡ ನಕಲಿ ದಾಖಲಾತಿ ನೀಡಿರುವುದು ಕಂಡು ಬಂದರೆ 2ವರ್ಷಗಳ ನಿಷೇಧಕ್ಕೆ ಒಳಗಾಗಿಲಿದ್ದಾರೆ.ಆದರೆ ತಾವಾಗಿಯೇ ಒಪ್ಪಿಕೊಳ್ಳುವ ಆಟಗಾರರಿಗೆ ಈ ನಿಶೇಧ ಅನ್ವಯಿಸುವುದಿಲ್ಲ ಎಂದು ಬಿಸಿಸಿಐ ಮೂಲಗಳು ಮಾಹತಿ ನೀಡಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 3, 2020, 15:13 [IST]
Other articles published on Aug 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X