ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ 2022ರಿಂದ 10 ತಂಡಗಳ ಐಪಿಎಲ್‌ಗೆ ಒಪ್ಪಿಗೆ

BCCI AGM approves 10 Teams in IPL from 2022 season

ಅಹ್ಮದಾಬಾದ್‌ನಲ್ಲಿ ನಡೆಯುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹತ್ವದ ತೀರ್ಮಾನವೊಂದನ್ನು ತೆಗೆದುಕೊಳ್ಳಲಾಗಿದೆ. 2022ರಿಂದ ಐಪಿಎಲ್‌ಗೆ 2 ಹೊಸ ತಂಡಗಳನ್ನು ಸೇರಿಸಿಕೊಳ್ಳಲು ಒಪ್ಪಿಗೆಯನ್ನು ಪಡೆದುಕೊಳ್ಳಲಾಗಿದೆ.

ಐಪಿಎಲ್‌ನ 13 ವರ್ಷಗಳ ಇತಿಹಾಸದಲ್ಲಿ 10 ತಂಡಗಳು ಪಾಲ್ಗೊಂಡಿರುವ ಐಪಿಎಲ್ ಟೂರ್ನಿ ನಡೆದಿಲ್ಲ. ಹೀಗಾಗಿ 2022ರ ಐಪಿಎಲ್ ಮತ್ತಷ್ಟು ರೋಚಕವಾಗಿರಲಿದೆ. ಆದರೆ ಐಪಿಎಲ್‌ನಲ್ಲಿ ಈ ಹಿಂದೆ 9 ತಂಡಗಳು ಭಾಗಿಯಾಗಿದ್ದವು. 2011, 2012 ಹಾಗೂ 2013ರಲ್ಲಿ 9 ಐಪಿಎಲ್ ತಂಡಗಳು ಹಣಾಹಣಿಯನ್ನು ನಡೆಸಿದ್ದವು.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ಆಸ್ಟ್ರೇಲಿಯಾ ಪ್ಲೇಯಿಂಗ್ XI ಪ್ರಕಟ

ಈ ಹಿಂದೆ 2021ರ ಆವೃತ್ತಿಯಲ್ಲಿ 10 ತಂಡಗಳ ಐಪಿಎಲ್ ನಡೆಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಮುಂದಿನ ಐಪಿಎಲ್ ಆರಂಭಕ್ಕೆ ಸಮಯಾವಕಾಶ ಕಡಿಮೆ ಇರುವುದರಿಮದ ಹಾಗೂ ಈ ಅವಧಿಯಲ್ಲಿ ಮೆಗಾ ಆಕ್ಷನ್ ನಡೆಸುವ ಸಾಧ್ಯತೆಯೂ ಇಲ್ಲವಾಗಿರುವ ಕಾರಣ ಇದನ್ನು 2022ರಿಂದ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ.

"ಈ ಬಾರಿ ಇದಕ್ಕೆ ಅನುಮೋದನೆಯನ್ನು ಮಾತ್ರವೇ ಪಡೆದುಕೊಳ್ಳುವುದು ನ್ಯಾಯಯುತವಾಗಿದ್ದು 2022 ರಲ್ಲಿ 94 ಪಂದ್ಯಗಳ ದೊಡ್ಡ ಟೂರ್ನಿಯನ್ನು ನಡೆಸಲಾಗುತ್ತದೆ" ಎಂದು ಬಿಸಿಸಿಐನ ಅಧಿಕಾರಿಯಬ್ಬರು ಎಜಿಎಂ ನಿರ್ಧಾರದ ಬಗ್ಗೆ ವಿವರಣೆಯನ್ನು ನೀಡಿದ್ದಾರೆ.

ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್ಟೆಸ್ಟ್ ಕ್ರಿಕೆಟ್ ಪುನರಾರಂಭಿಸಲು ಮೆಲ್ಬರ್ನ್‌ಗೆ ಬಂದ ಕೆಎಲ್ ರಾಹುಲ್

ಇನ್ನು ಇದೇ ಸಂದರ್ಭದಲ್ಲಿ ಬಿಸಿಸಿಐ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಅನ್ನು ಸೇರ್ಪಡೆಗೊಳಿಸಲು ಉತ್ಸುಕತೆಯನ್ನು ವ್ಯಕ್ತಪಡಿಸಿದೆ. ಈ ವಿಚಾರದತ್ತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಇನ್ನಷ್ಟೇ ಗಮನಹರಿಸಬೇಕಿದೆ. ಬಿಸಿಸಿಐನ ಈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆಯೂ ಚರ್ಚೆಗಳು ನಡೆದವು.

Story first published: Thursday, December 24, 2020, 17:27 [IST]
Other articles published on Dec 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X