ಬಿಸಿಸಿಐ ವಾರ್ಷಿಕ ಸಾಮಾನ್ಯಸಭೆಗೆ ದಿನಾಂಕ ನಿಗದಿ: ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ 89ನೇ ವಾರ್ಷಿಕ ಸಾಮಾನ್ಯ ಸಭೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿದೆ. ಡಿಸೆಂಬರ್ 24ರಂದು ಈ ಸಭೆ ನಡೆಯಲಿದ್ದು ಸಭೆ ನಡೆಯಲಿರುವ ಸ್ಥಳವನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದ್ದು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿಕೊಂಡಿದೆ.

ಈ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಎರಡು ಮುಖ್ಯ ವಿಚಾರಗಳು ಚರ್ಚೆಯಾಗಲಿದೆ ಎಂದು ಬಿಸಿಸಿಐ ತಿಳಿಸಿದೆ. ಐಪಿಎಲ್‌ಗೆ ಸೇರ್ಪಡೆಗೊಳ್ಳುವ ಎರಡು ಹೊಸ ತಂಡಗಳ ವಿಚಾರ ಹಾಗೂ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳಿಸುವ ವಿಚಾರ ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಲಿರುವ ಮಹತ್ವದ ವಿಚಾರಗಳಾಗಿದೆ.

ಒಡಿಐನಲ್ಲಿ ಸಾರ್ವಕಾಲಿಕ ಟಾಪ್ 5 ಬೌಲರ್‌ಗಳ ಹೆಸರಿಸಿದ ಗ್ಲೆನ್ ಮೆಗ್ರಾತ್

ಈ ಸಭೆಯ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈಮೇಲ್ ಮೂಲಕ ಮಾಹಿತಿಯನ್ನು ರವಾನಿಸಿದ್ದಾರೆ. "89ನೇ ವಾರ್ಷಿಕ ಸಾಮಾನ್ಯ ಸಭೆಗೆ ನೋಟಿಸ್‌ಅನ್ನು ಕಳುಹಿಸಲಾಗಿದೆ. ಬಿಸಿಸಿಐ ಈ ಸಭೆಯನ್ನು ಡಿಸೆಂಬರ್ ತಿಂಗಳ 24ನೇ ತಾರೀಕಿನಂದ ನಡೆಸಲಿದೆ. ಈ ಕೆಳಗಿನ ವಿಚಾರಗಳು ಅಲ್ಲಿ ಪ್ರಮುಖವಾಗಿ ಚರ್ಚೆಯಾಗಲಿದೆ".

ಈ ವಾರ್ಷಿಕ ಮಹಾಸಭೆ ಸನಡೆಯುವ ಸ್ಥಳದ ಬಗ್ಗೆ ಶೀಘ್ರದಲ್ಲೇ ಮಾಹಿತಿಯನ್ನು ನೀಡಲಾಗುತ್ತದೆ. ಸಭೆಯ ಮತ್ತಷ್ಟು ಅಜೆಂಡಾಗಳನ್ನು ಹೊಂದಿರುವ ಪ್ರತಿಗಳನ್ನು ಶೀಗ್ರದಲ್ಲೇ ಕಳುಹಿಸಲಾಗುತ್ತದೆ. ಈ ಸಭೆಗೆ ತಾಔಉ ಭಾಗಿಯಾಗಬೇಕೆಂದು ಕೋರಿಕೊಳ್ಳುತ್ತೇವೆ" ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ 23 ಅಜೆಂಡಾಗಳನ್ನು ಇದರಲ್ಲಿ ತಿಳಿಸಲಾಗಿದೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, December 3, 2020, 9:39 [IST]
Other articles published on Dec 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X