ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಗಸ್ಟ್‌ನಲ್ಲಿ ಇಂಡಿಯಾ vs ಶ್ರೀಲಂಕಾ ಕ್ರಿಕೆಟ್ ಸರಣಿಗೆ ಒಪ್ಪಿಗೆ ಸೂಚಿಸಿದ ಬಿಸಿಸಿಐ: ವರದಿ

Bcci Agrees To Indian Team Touring Sri Lanka In August

ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳಲು ಬಿಸಿಸಿಐ ಒಪ್ಪಿಗೆಯನ್ನು ಸೂಚಿಸಿದೆ ಎಂದು ವರದಿಯಾಗಿದೆ. ಹೀಗಾಗಿ ಸಂಪೂರ್ಣವಾಗಿ ಸ್ತಬ್ಧವಾಗಿರುವ ಕ್ರಿಕೆಟ್ ಆಗಸ್ಟ್‌ನಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಶ್ರೀಲಂಕಾ ಏಕದಿನ ಹಾಗೂ ಟಿ20 ಸರಣಿಯನ್ನು ಆಯೋಜನೆ ಮಾಡಲಿದೆ.

ಬಿಸಿಸಿಐ ಈ ಪ್ರಸ್ತಾಪಕ್ಕೆ ಒಪ್ಪಿಗೆಯನ್ನು ಸೂಚಿಸಿರುವ ಕಾರಣ ಈಗ ಎರಡೂ ದೇಶಗಳ ಸರ್ಕಾರಗಳು ಇದಕ್ಕೆ ಅನುಮತಿಯನ್ನು ನೀಡಬೇಕಿದೆ. ಕೊರೊನಾ ವೈರಸ್‌ನ ಕಾರಣದಿಂದಾಗಿ ಶ್ರೀಲಂಕಾದಲ್ಲೂ ದ್ವಿಪಕ್ಷೀಯ ಸರಣಿ ಆಯೋಜನೆಗೆ ನಿರ್ಭಂದಿಸಲಾಗಿದೆ. ಹಾಗಾಗಿ ಸರ್ಕಾರ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕಿದೆ.

ವೀಕ್ಷಕರ ಸಮ್ಮುಖದಲ್ಲೇ ಕ್ರಿಕೆಟ್?

ವೀಕ್ಷಕರ ಸಮ್ಮುಖದಲ್ಲೇ ಕ್ರಿಕೆಟ್?

ಈ ಸರಣಿಯ ಆಯೋಜನೆಗೆ ಶ್ರೀಲಂಕಾ ಸರ್ಕಾರ ಅನುಮತಿಯನ್ನು ನೀಡಿದ ನಂತರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸರಣಿಯ ವೇಳಾಪಟ್ಟಿ ಮತ್ತು ಇತರ ಕಾರ್ಯಗಳ ಕುರಿತಾಗಿ ಸಿದ್ಧತೆಯನ್ನು ನಡೆಸಲಿದೆ. ಸಾಮಾಜಿಕ ಅಂತರದೊಂದಿಗೆ ವೀಕ್ಷರ ಸಮ್ಮುಖದಲ್ಲೇ ಪಂದ್ಯಗಳ ಆಯೋಜನೆಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಉತ್ಸುಕವಾಗಿದೆ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಎಷ್ಟರ ಅವಕಾಶ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿ

ಮೂರು ಪಂದ್ಯಗಳ ಏಕದಿನ ಸರಣಿ

ಶ್ರೀಲಂಕಾದಲ್ಲಿ ನಡೆಯಲಿರುವ ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳ ಆಯೋಜನೆಗೆ ಯೋಜನೆ ರೂಪಿಸಲಾಗಿದೆ. ಇದರ ಜೊತೆಗೆ ಟಿ20 ಪಂದ್ಯಗಳು ಕೂಡ ನಡೆಯಲಿದ್ದು ಎಷ್ಟು ಪಂದ್ಯಗಳ ಸರಣಿ ಎಂಬುದನ್ನು ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ.

ಕೊರೊನಾ ಬಳಿಕ ಕ್ರಿಕೆಟ್ ಸರಣಿ

ಕೊರೊನಾ ಬಳಿಕ ಕ್ರಿಕೆಟ್ ಸರಣಿ

ಕೊರೊನಾ ವೈರಸ್‌ನ ಕಾರಣದಿಂದಾಗಿ ಕಳೆದ ಮಾರ್ಚ್ ಬಳಿಕ ಯಾವುದೇ ಕ್ರಿಕೆಟ್ ಟೂರ್ನಿಗಳು ನಡೆದಿಲ್ಲ. ಈಗ ಮತ್ತೆ ನಿಧಾನಕ್ಕೆ ಸರಣಿ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿದೆ. ಕೊರೊನಾ ವೈರಸ್ ಬಳಿಕ ಮೊದಲ ಸರಣಿಗಾಗಿ ವೆಸ್ಟ್ ಇಂಡೀಸ್ ಇಂಗ್ಲೆಂಡ್‌ಗೆ ಕಾಲಿಟ್ಟಿದೆ. ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿಂಡೀಸ್ ಪಾಲ್ಗೊಳ್ಳಲಿದೆ. ಎರಡೂ ಸರ್ಕಾರಗಳ ಒಪ್ಪಿಗೆ ದೊರೆತರೆ ಭಾರತ ಹಾಗೂ ಶ್ರೀಲಂಕಾಗೂ ಕೊರೊನಾ ವೈರಸ್ ಬಳಿಕ ಮೊದಲ ಸರಣಿ ಇದಾಗಿರಲಿದೆ.

ಏಷ್ಯಾಕಪ್ ಆತಿಥ್ಯವೂ ಲಂಕಾಗೆ ಸಾಧ್ಯತೆ

ಏಷ್ಯಾಕಪ್ ಆತಿಥ್ಯವೂ ಲಂಕಾಗೆ ಸಾಧ್ಯತೆ

ಈ ಮಧ್ಯೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಏಷ್ಯಾ ಕಪ್ ಆಯೋಜನೆಯನ್ನೂ ತಾನೇ ವಹಿಸಿಕೊಳ್ಳುವ ಸಾಧ್ಯತೆಯಿದೆ. ಪಾಕಿಸ್ತಾನದಲ್ಲಿ ಏಷ್ಯಾಕ್ ಆಯೋಜನೆಗೆ ತೀರ್ಮಾನಿಸಕಾಗಿತ್ತು. ಆದರೆ ಪಾಕಿಸ್ತಾನಕ್ಕೆ ಭಾರತ ತೆರಳುವುದಿಲ್ಲ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಏಷ್ಯಾಕಪ್ ಆಯೋಜನೆಗೆ ಪಿಸಿಬಿ ಕೂಡ ಸಮ್ಮತಿಸಿದೆ ಎನ್ನಲಾಗುತ್ತಿದೆ.

Story first published: Thursday, June 11, 2020, 10:00 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X