ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಹಿಸುದ್ದಿ; ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ 100% ಆಸನ ಭರ್ತಿಗೆ BCCI ಅನುಮತಿ!

BCCI Allows Full Capacity In Stadiums For India vs South Africa T20 Series

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿಪಕ್ಷೀಯ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಭಾರತೀಯ ಕ್ರೀಡಾಂಗಣಗಳಲ್ಲಿ ಪೂರ್ಣ ಸಾಮರ್ಥ್ಯದ ಆಸನ ಭರ್ತಿಗೆ ಬಿಸಿಸಿಐ ಅನುಮತಿಸಿದೆ ಎಂದು ವರದಿಯಾಗಿದೆ.

ಇದು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಉತ್ತಮ ಸುದ್ದಿಯಾಗಿದ್ದು, ಬಿಸಿಸಿಐ ಜೂನ್ 9 ರಂದು ಪ್ರಾರಂಭವಾಗುವ ಭಾರತ ಮತ್ತಯ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಗಾಗಿ ಕ್ರೀಡಾಂಗಣಗಳಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಅನುಮತಿಸಿದೆ.

"ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಅಂತಾರಾಷ್ಟ್ರೀಯ ಸರಣಿಗಾಗಿ ಕ್ರೀಡಾಂಗಣಗಳಲ್ಲಿ ಪೂರ್ಣ ಸಾಮರ್ಥ್ಯವನ್ನು ಬಿಸಿಸಿಐ ಅನುಮತಿಸಲಿದೆ," ಎಂದು ಬಿಸಿಸಿಐ ಮೂಲಗಳು ಸುದ್ದಿ ಸಂಸ್ಥೆ ANIಗೆ ತಿಳಿಸಿವೆ.

BCCI Allows Full Capacity In Stadiums For India vs South Africa T20 Series

ಬಿಸಿಸಿಐ ಈಗಾಗಲೇ ಐಪಿಎಲ್‌ನ ಪ್ಲೇ-ಆಫ್‌ ಪಂದ್ಯಗಳಿಗೆ ಸ್ಟೇಡಿಯಂನ ಪೂರ್ಣ ಸಾಮರ್ಥ್ಯದ ಪ್ರೇಕ್ಷಕರನ್ನು ಘೋಷಿಸಿದೆ. ದೇಶದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಿಲ್ಲದ ಕಾರಣ ಕೋವಿಡ್ ಮಾರ್ಗಸೂಚಿಗಳು ಸಡಿಲಗೊಂಡಿವೆ. ಇದರ ಪರಿಣಾಮವಾಗಿ, ಮುಂಬರುವ ಕ್ರಿಕೆಟ್ ಸರಣಿಗಾಗಿ ಬಿಸಿಸಿಐ ಸ್ಥಳಗಳನ್ನು ಪೂರ್ಣ ಸಾಮರ್ಥ್ಯಕ್ಕೆ ಹೋಗಲು ಅನುಮತಿಸಬಹುದಾಗಿದೆ.

ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಯನ್ನು ನವದೆಹಲಿ, ಕಟಕ್, ವಿಶಾಖಪಟ್ಟಣಂ, ರಾಜ್‌ಕೋಟ್ ಮತ್ತು ಬೆಂಗಳೂರು ಸೇರಿದಂತೆ ಐದು ವಿಭಿನ್ನ ಸ್ಥಳಗಳಲ್ಲಿ ಆಡಲಿದೆ. ಜೂನ್ 9 ರಂದು ಸರಣಿ ಆರಂಭವಾಗಲಿದ್ದು, ಕೊನೆಯ ಪಂದ್ಯ ಜೂನ್ 19 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

IPL 2022ರ ಸಮಾರೋಪ ಸಮಾರಂಭದ ದಿನಾಂಕ, ಸಮಯ, ಸ್ಥಳ; ವಿಶೇಷ ಆಹ್ವಾನಿತರ ಮಾಹಿತಿIPL 2022ರ ಸಮಾರೋಪ ಸಮಾರಂಭದ ದಿನಾಂಕ, ಸಮಯ, ಸ್ಥಳ; ವಿಶೇಷ ಆಹ್ವಾನಿತರ ಮಾಹಿತಿ

ದಕ್ಷಿಣ ಆಫ್ರಿಕಾ ಇತ್ತೀಚೆಗೆ ಭಾರತ ವಿರುದ್ಧ ಆಡಲಿರುವ ಟಿ20 ಸರಣಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಸೀಮಿತ ಓವರ್‌ಗಳ ನಾಯಕ ಟೆಂಬಾ ಬವುಮಾ ತಂಡವನ್ನು ವಿಜಯದತ್ತ ಮುನ್ನಡೆಸಲು ಎದುರು ನೋಡುತ್ತಿದ್ದಾರೆ. ಇದೇ ವರ್ಷ ನಡೆಯಲಿರುವ ವಿಶ್ವಕಪ್ ಟೂರ್ನಿಗೂ ಮುನ್ನ ಪ್ರಮುಖ ಪ್ರವಾಸವಾಗಿದೆ.

2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡ ನಂತರ ದಕ್ಷಿಣ ಆಫ್ರಿಕಾಗೆ ಇದು ಮೊದಲ ಟಿ20 ಪಂದ್ಯಾವಳಿಯಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಮುಂಬರುವ 2022ರ ICC ಟಿ20 ವಿಶ್ವಕಪ್‌ನ ಸೂಪರ್ 12 ಹಂತದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ಭಾರತವನ್ನು ಕೂಡ ಗುಂಪಿನಲ್ಲಿ ಸೇರಿಸಲಾಗಿದೆ.

BCCI Allows Full Capacity In Stadiums For India vs South Africa T20 Series
ರೋಹಿತ್ ಶರ್ಮಾ ನೀಡಿದ ಈ ಹೇಳಿಕೆಯಿಂದ ರೊಚ್ಚಿಗೆದ್ದ RCB ಅಭಿಮಾನಿಗಳು | Oneindia Kannada

ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಟಿ20 ತಂಡ
ಟೆಂಬಾ ಬವುಮಾ (ನಾಯಕ, ಇಂಪೀರಿಯಲ್ ಲಯನ್ಸ್), ಕ್ವಿಂಟನ್ ಡಿ ಕಾಕ್ (ಮೊಮೆಂಟಮ್ ಮಲ್ಟಿಪ್ಲೈ ಟೈಟಾನ್ಸ್), ರೀಜಾ ಹೆಂಡ್ರಿಕ್ಸ್ (ಇಂಪೀರಿಯಲ್ ಲಯನ್ಸ್), ಹೆನ್ರಿಚ್ ಕ್ಲಾಸೆನ್ (ಮೊಮೆಂಟಮ್ ಮಲ್ಟಿಪ್ಲೈ ಟೈಟಾನ್ಸ್), ಕೇಶವ್ ಮಹಾರಾಜ್ (ಹಾಲಿವುಡ್ಬೆಟ್ಸ್ ಡಾಲ್ಫಿನ್ಸ್), ಆಡೆನ್ ಮಾರ್ಕ್ರಾಮ್ ( ಮೊಮೆಂಟಮ್ ಮಲ್ಟಿಪ್ಲೈ ಟೈಟಾನ್ಸ್), ಡೇವಿಡ್ ಮಿಲ್ಲರ್ (ಹಾಲಿವುಡ್‌ಬೆಟ್ಸ್ ಡಾಲ್ಫಿನ್ಸ್), ಲುಂಗಿ ಎನ್‌ಗಿಡಿ (ಮೊಮೆಂಟಮ್ ಮಲ್ಟಿಪ್ಲೈ ಟೈಟಾನ್ಸ್), ಅನ್ರಿಚ್ ನಾರ್ಟ್ಜೆ (ಜಿಬೆಟ್ಸ್ ವಾರಿಯರ್ಸ್), ವೇಯ್ನ್ ಪಾರ್ನೆಲ್ (ಸಿಕ್ಸ್ ಗನ್ ಗ್ರಿಲ್ ವೆಸ್ಟರ್ನ್ ಪ್ರಾವಿನ್ಸ್), ಡ್ವೈನ್ ಪ್ರಿಟೋರಿಯಸ್ (ನಾರ್ತ್ ವೆಸ್ಟ್ ಡ್ರ್ಯಾಗನ್ಸ್), ಕಗಿಸೊ ರಬಾಡ(ಇಂಪಿರಿಯಲ್ ಲ್ಬಡಾ), ತಬ್ರೈಜ್ ಶಮ್ಸಿ (ಮೊಮೆಂಟಮ್ ಮಲ್ಟಿಪ್ಲೈ ಟೈಟಾನ್ಸ್), ಟ್ರಿಸ್ಟಾನ್ ಸ್ಟಬ್ಸ್ (ಜಿಬೆಟ್ಸ್ ವಾರಿಯರ್ಸ್), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (ಇಂಪೀರಿಯಲ್ ಲಯನ್ಸ್), ಮಾರ್ಕೊ ಜಾನ್ಸೆನ್ (ಜಿಬೆಟ್ಸ್ ವಾರಿಯರ್ಸ್).

Story first published: Friday, May 20, 2022, 9:36 [IST]
Other articles published on May 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X