ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಮಿಕ್ರೋನ್ ವೈರಸ್ ಭೀತಿ: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಒಂಭತ್ತು ದಿನ ಮುಂದೂಡಿಕೆ

Team india south africa tour

ಟೀಂ ಇಂಡಿಯಾ ಸದ್ಯ ನ್ಯೂಜಿಲೆಂಡ್ ವಿರುದ್ಧ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನಾಡುತ್ತಿದ್ದು, ವಾಂಖೆಡೆ ಮೈದಾನದಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಈಗಾಗಲೇ ಕಿವೀಸ್ ತಂಡವನ್ನ 62ರನ್‌ಗಳಿಗೆ ಆಲೌಟ್ ಮಾಡಿರುವ ಭಾರತ, ಪಂದ್ಯ ಗೆಲುವಿನತ್ತ ಹೆಜ್ಜೆ ಇಟ್ಟಿದೆ.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತ ಹರಿಣಗಳ ನಾಡು ದಕ್ಷಿಣ ಆಫ್ರಿಕಾಗೆ ಹಾರಬೇಕಿತ್ತು. ಆದ್ರೆ ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೋವಿಡ್-19 ರೂಪಾಂತರ ಒಮಿಕ್ರೋನ್ ವೈರಸ್ ಇಡೀ ವಿಶ್ವವನ್ನೇ ಮತ್ತೊಮ್ಮೆ ಆತಂಕಕ್ಕೆ ದೂಡಿದ್ದು, ಭಾರತ ಪ್ರವಾಸದ ಮೇಲೂ ಕರಿಛಾಯೆ ಬೀರಿದೆ.

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ 9 ದಿನ ಮುಂದೂಡಿಕೆ

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ 9 ದಿನ ಮುಂದೂಡಿಕೆ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವು ಈಗ ಪರಿಷ್ಕೃತ ದಿನಾಂಕಗಳೊಂದಿಗೆ ಪ್ರಾರಂಭವಾಗುತ್ತದೆ, ಮೊದಲ ಟೆಸ್ಟ್ ಡಿಸೆಂಬರ್ 26 ರಂದು ಪ್ರಾರಂಭವಾಗುತ್ತದೆ. ಈ ಮೊದಲು ವೇಳಾಪಟ್ಟಿಯ ಪ್ರಕಾರ ಮೂರು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ 9 ದಿನಗಳ ಮೊದಲು (ಡಿಸೆಂಬರ್ 17) ಪ್ರಾರಂಭವಾಗಬೇಕಿತ್ತು.

ಭಾರತವು ಮೂಲತಃ ನಿಗದಿತ ಸಮಯಕ್ಕಿಂತ ಒಂದು ವಾರದ ನಂತರ ದಕ್ಷಿಣ ಆಫ್ರಿಕಾಗೆ ತೆರಳಿದೆ. ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನೊಂದಿಗೆ ಸರಣಿ ಪ್ರಾರಂಭವಾಗುತ್ತದೆ, ಜನವರಿಯಲ್ಲಿ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಾಗುತ್ತದೆ.

ಬಿಸಿಸಿಐ ಎಜಿಎಂ ಸಭೆಯಲ್ಲಿ ಮಹತ್ವದ ತೀರ್ಮಾನ

ಬಿಸಿಸಿಐ ಎಜಿಎಂ ಸಭೆಯಲ್ಲಿ ಮಹತ್ವದ ತೀರ್ಮಾನ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಕೊಲ್ಕತ್ತಾದಲ್ಲಿ ನಡೆದ ತಮ್ಮ ವಾರ್ಷಿಕ ಸಾಮಾನ್ಯ ಸಭೆಯ ನಂತರ ದಕ್ಷಿಣ ಆಫ್ರಿಕಾ ವಿರುದ್ಧದ ಟೀಮ್ ಇಂಡಿಯಾ ಟೆಸ್ಟ್‌ ಸರಣಿಯನ್ನ ಆರಂಭವನ್ನು ದೃಢಪಡಿಸಿತು.

ಈ ಮೊದಲು ಸರಣಿಯ ಮೊದಲ ಎರಡು ಟೆಸ್ಟ್‌ಗಳನ್ನು ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದಲ್ಲಿ ನಿಗದಿಪಡಿಸಲಾಗಿತ್ತು. ಆದ್ರೆ ಈ ವೆನ್ಯೂಗಳನ್ನ ಮತ್ತೆ ಪರಿಷ್ಕರಿಸಲು ತೀರ್ಮಾನಿಸಿದ್ದು, ಮುಂದಿನ 48 ಗಂಟೆಗಳಲ್ಲಿ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ಹೊಸ ರೂಪಾಂತರದ ಭಯ: ಭಾರತ 'A' ಕ್ರಿಕೆಟ್ ಸರಣಿ ಮುಂದುವರಿಕೆಗೆ ಮುಂದಾದ ಬಿಸಿಸಿಐ!

ಟಿ20 ಸರಣಿ ದಿನಾಂಕವೂ ಮುಂದೂಡಿಕೆ

ಟಿ20 ಸರಣಿ ದಿನಾಂಕವೂ ಮುಂದೂಡಿಕೆ

ಭಾರತ ತಂಡ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ. ಆದ್ರೆ ಈ ಮೊಲು ತೀರ್ಮಾನಿಸಿದ್ದ ಟಿ20 ಸರಣಿಯನ್ನ ಮತ್ತೊಂದು ಸಮಯದಲ್ಲಿ ಆಡಲಾಗುವುದು ಎಂದು ಅವರು ಬಹಿರಂಗಪಡಿಸಿದರು.

"ಭಾರತ ತಂಡವು ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗೆ ಪ್ರಯಾಣಿಸಲಿದೆ ಎಂದು ಬಿಸಿಸಿಐ ಕ್ರಿಕೆಟ್ ಸೌತ್ ಆಫ್ರಿಕಾಗೆ ದೃಢಪಡಿಸಿದೆ. ಉಳಿದ ನಾಲ್ಕು ಟಿ20ಗಳನ್ನು ನಂತರದ ದಿನಾಂಕದಲ್ಲಿ ಆಡಲಾಗುತ್ತದೆ, "ಶಾ ಅವರು ಎಎನ್‌ಐ ಗೆ ತಿಳಿಸಿದ್ದಾರೆ.

ಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾ

ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada
ಟೀಂ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ ಇನ್ಮುಂದೆ ಐದು ದಿನಗಳ ಟೆಸ್ಟ್ ಪಂದ್ಯ!

ಟೀಂ ಇಂಡಿಯಾ ಮಹಿಳಾ ಕ್ರಿಕೆಟಿಗರಿಗೆ ಇನ್ಮುಂದೆ ಐದು ದಿನಗಳ ಟೆಸ್ಟ್ ಪಂದ್ಯ!

ಬಿಸಿಸಿಐ ಶನಿವಾರ ತನ್ನ 90 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಹಿಳಾ ಕ್ರಿಕೆಟ್ ತಂಡಕ್ಕೆ ಐದು ದಿನಗಳ ಟೆಸ್ಟ್ ಮಾದರಿಯನ್ನು ಅನುಮೋದಿಸಿದೆ. ಪ್ರಸ್ತುತ ಮಹಿಳಾ ತಂಡವು ನಾಲ್ಕು ದಿನಗಳ ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಆಡುತ್ತಿದೆ, ಆದ್ರೀಗ ಇದು ಮಹಿಳಾ ಆಟಗಾರರಿಗೆ ತಮ್ಮನ್ನು ಹಳೆಯ ಸ್ವರೂಪದ ಕ್ರಿಕೆಟ್‌ನಲ್ಲಿ ಅಪ್‌ಗ್ರೇಡ್ ಮಾಡಲು ಸಾಧ್ಯವಾಗಿದೆ.

ಈ ವರ್ಷದ ಆರಂಭದಲ್ಲಿ, ಭಾರತ ಮಹಿಳಾ ತಂಡವು ಏಳು ವರ್ಷಗಳ ನಂತರ ಜೂನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ನಂತರ ಅವರು ಆಸ್ಟ್ರೇಲಿಯನ್ನರ ವಿರುದ್ಧ ಮತ್ತೊಂದು ಟೆಸ್ಟ್ ಆಡಿದರು.

Story first published: Sunday, December 5, 2021, 13:07 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X