ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಮೆನ್ಸ್ ಟಿ20 ಚಾಲೆಂಜ್‌: ಶೀರ್ಷಿಕೆ ಪ್ರಾಯೋಜಕತ್ವ ತೆಕ್ಕೆಗೆ ಹಾಕಿಕೊಂಡ ಜಿಯೋ

BCCI announce Jio as Title Sponsor for Women’s T20 Challenge 2020

ವಿಮೆನ್ಸ್ ಟಿ20 ಚಾಲೆಂಜರ್ಸ್‌ಗೆ ಬಿಸಿಸಿಐ ಇದೇ ಮೊದಲ ಬಾರಿಗೆ ಟೈಟಲ್ ಪ್ರಾಯೋಜಕರನ್ನು ಆಯ್ಕೆ ಮಾಡಿಕೊಂಡಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆಯಲ್ಲಿ ಖಚಿತ ಮಾಹಿತಿ ನೀಡಿರುವ ಬಿಸಿಸಿಐ ಇದನ್ನು ಐತಿಹಾಸಿಕ ಪಾಲುದಾರಿಕೆ ಎಂದು ಬಣ್ಣಿಸಿಕೊಂಡಿದೆ.

ರಿಲಯನ್ಸ್ ಕಂಪನಿಯ ಅಡಿಯಲ್ಲಿ ಬರುವ ಭಾರತೀಯ ದೂರಸಂಪರ್ಕ ಕಂಪನಿಯಾಗಿರುವ ಜಿಯೋ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ವಿಚಾರವನ್ನು ಬಿಸಿಸಿಐ ಭಾನುವಾರ ಬಹಿರಂಗಪಡಿಸಿದೆ. ಆರು ತಂಡಗಳ ನಡುವೆ ಈ ವಿಮೆನ್ಸ್ ಟಿ20 ಟೂರ್ನಿ ನಡೆಯಲಿದ್ದು 3 ತಂಡಗಳ ನಡುವೆ ಕಾದಾಟ ನಡೆಯಲಿದೆ. ನವೆಂಬರ್ 4-9ರವರೆಗೆ ಈ ಪಂದ್ಯಾವಳಿ ನಡೆಯಲಿದೆ.

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: MPL ಜೊತೆ ಒಪ್ಪಂದ ಮಾಡಿಕೊಂಡ ಬಿಸಿಸಿಐಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕರು: MPL ಜೊತೆ ಒಪ್ಪಂದ ಮಾಡಿಕೊಂಡ ಬಿಸಿಸಿಐ

30 ಭಾರತೀಯ ಆಟಗಾರ್ತಿಯರ ತಂಡ ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಕ್ಟೋಬರ್ 23ರಂದು ಯುಎಇಗೆ ಬಂದಿಳಿದಿತ್ತು. 3ನೇ ವಿಮೆನ್ಸ್ ಟಿ20 ಚಾಲೆಂಜ್‌ನ ಫೈನಲ್ ಪಂದ್ಯ ನವೆಂರ್ 9ರಂದು ಶಾರ್ಜಾ ಕ್ರೀಡಾಂಗಣದಲ್ಲಿ ನಡೆಯಲಿದೆ.

"ಮಹಿಳಾ ಕ್ರಿಕೆಟ್‌ನ ಯಶಸ್ಸಿನತ್ತ ನಾವು ಚಿತ್ತವನ್ನು ಹರಿಸಿದ್ದೇವೆ. ಮಹಿಳಾ ಕ್ರಿಕೆಟ್‌ನ ಪ್ರತಿಭೆಗಳಿಗೆ ಉತ್ತಮ ಹಾದಿಯನ್ನು ರೂಪಿಸಲು ಹಾಗೂ ಬೆಂಬಲವನ್ನು ನೀಡಲು ನಾವು ಬಯಸುತ್ತೇವೆ. ಮಹಿಳಾ ಕ್ರಿಕೆಟಿಗರಿಗಾಗಿ ಪ್ರತ್ಯೇಕ ಐಪಿಎಲ್ ಆಯೋಜಿಸುವುದು ನಮ್ಮ ಆದ್ಯತೆಯಾಗಿದೆ. ಜಿಯೋ ಮಹಿಳಾ ಕ್ರಿಕೆಟ್‌ಗೆ ಬಲಿಷ್ಠ ಪಾಲುದಾರರಾಗಲಿದ್ದಾರೆ ಎಂದು ಬಯಸುತ್ತೇನೆ" ಎಂದು ಬಿಸಿಸಿಐನ ಸೆಕ್ರೇಟರಿ ಜಯ್ ಶಾ ಹೇಳಿಕೆಯನ್ನು ನೀಡಿದ್ದಾರೆ.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ: ಪ್ಲೇಆಫ್‌ಗೆ ಕೊನೆಯ ಅವಕಾಶ!ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಆರ್‌ಸಿಬಿ, ಡೆಲ್ಲಿ: ಪ್ಲೇಆಫ್‌ಗೆ ಕೊನೆಯ ಅವಕಾಶ!

ಇನ್ನು ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೂಡ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದು "ಬಿಸಿಸಿಐ ಕ್ರಿಕೆಟ್‌ನ ಎಲ್ಲಾ ವಿಭಾಗಗಳ ಬೆಳವಣಿಗೆಯನ್ನು ಬಯಸುತ್ತದೆ. ಈಗ ನಡೆದಿರುವ ಒಪ್ಪಂದದ ಕಾರಣದಿಂದಾಗಿ ಇದು ಹೆಚ್ಚಿನ ಕ್ರಿಕೆಟ್ ಆಟಗಾರ್ತಿಯರಿಗೆ ಸ್ಪೂರ್ತಿ ನೀಡಬಲ್ಲದಾಗಿದೆ. ಯುವ ಆಟಗಾರ್ತಿಯರ ಹೆತ್ತವರಿಗೂ ಇದು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಲಿದೆ ಎಂದಿದ್ದಾರೆ.

Story first published: Monday, November 2, 2020, 20:29 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X