ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Asia Cup 2022: ಏಷ್ಯಾಕಪ್ ಟೂರ್ನಿಗೆ 15 ಆಟಗಾರರ ಭಾರತ ತಂಡ ಪ್ರಕಟಿಸಿದ ಬಿಸಿಸಿಐ; ಬುಮ್ರಾ ಔಟ್!

BCCI announced 15-man Team India squad for Asia Cup 2022

ಇದೇ ತಿಂಗಳ ಅಂತಿಮ ವಾರದಂದು ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಈ ಟೂರ್ನಿಗೆ ಇಂದು ( ಆಗಸ್ಟ್ 8 ) ತಂಡಗಳನ್ನು ಪ್ರಕಟಿಸಲು ಕೊನೆಯ ದಿನವಾದ್ದರಿಂದ ಬಿಸಿಸಿಐ ಹದಿನೈದು ಆಟಗಾರರ ಭಾರತ ತಂಡವನ್ನು ಪ್ರಕಟಿಸಿದೆ.

ಏಷ್ಯಾಕಪ್ ಆಟಗಾರರ ಆಯ್ಕೆ ಸಭೆ: ಭಾರತ ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ; ಈ ಐವರಲ್ಲಿ ಯಾರಿಗೆ ಅವಕಾಶ?ಏಷ್ಯಾಕಪ್ ಆಟಗಾರರ ಆಯ್ಕೆ ಸಭೆ: ಭಾರತ ತಂಡದಲ್ಲಿ ಈ 13 ಆಟಗಾರರಿಗೆ ಸ್ಥಾನ; ಈ ಐವರಲ್ಲಿ ಯಾರಿಗೆ ಅವಕಾಶ?

ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಜಯ ಸಾಧಿಸಿದ ನಂತರ ಸದ್ಯ ಯುಎಸ್‍ನಲ್ಲಿಯೇ ಭಾರತ ತಂಡ ಉಳಿದುಕೊಂಡಿರುವ ಕಾರಣದಿಂದಾಗಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜತೆಗೆ ಬಿಸಿಸಿಐನ ಆಯ್ಕೆ ಸಮಿತಿ ಆನ್ ಲೈನ್ ಮೂಲಕ ಸಭೆಯನ್ನು ನಡೆಸಿ ಯಾವ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸಿದೆ.

IND vs WI: ಮುಂದುವರೆದ ಸೋಲಿಲ್ಲದ ಸರದಾರ ರೋಹಿತ್ ಪಾರುಪತ್ಯ; ಮತ್ತೊಂದು ಸರಣಿ ಗೆದ್ದ ಭಾರತIND vs WI: ಮುಂದುವರೆದ ಸೋಲಿಲ್ಲದ ಸರದಾರ ರೋಹಿತ್ ಪಾರುಪತ್ಯ; ಮತ್ತೊಂದು ಸರಣಿ ಗೆದ್ದ ಭಾರತ

ರೋಹಿತ್ ಶರ್ಮಾ ನಾಯಕತ್ವದ ಈ ತಂಡಕ್ಕೆ ಕೆಎಲ್ ರಾಹುಲ್ ಉಪನಾಯಕನಾಗಿದ್ದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ ಈ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಲವರು ನಿರೀಕ್ಷಿಸಿದಂತೆ ದಿನೇಶ್ ಕಾರ್ತಿಕ್ ಜತೆಗೆ ಭುವನೇಶ್ವರ್ ಕುಮಾರ್ ಮತ್ತು ಯಜುವೇಂದ್ರ ಚಾಹಲ್ ಕೂಡ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ

ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಗಾಯದ ಸಮಸ್ಯೆಗೆ ಒಳಗಾದ ಬುಮ್ರಾ

ಗಾಯದ ಸಮಸ್ಯೆಗೆ ಒಳಗಾದ ಬುಮ್ರಾ

ಭಾರತ ತಂಡದ ಪ್ರಮುಖ ಬೌಲರ್‌ಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಇಬ್ಬರೂ ಸಹ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ಏಷ್ಯಾಕಪ್ ಟೂರ್ನಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಹಾಗೂ ಈ ಇಬ್ಬರೂ ಸಹ ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಹೆಚ್ಚುವರಿ ಆಟಗಾರರು

ಹೆಚ್ಚುವರಿ ಆಟಗಾರರು

ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಹೆಚ್ಚುವರಿ ಆಟಗಾರರಾಗಿ ದೀಪಕ್ ಚಹರ್, ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.

ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್

ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್

ಕಳೆದ ಹಲವಾರು ಸರಣಿಗಳನ್ನು ಕೈ ತಪ್ಪಿಸಿಕೊಂಡಿದ್ದ ಕೆಎಲ್ ರಾಹುಲ್ ಸಾಲುಸಾಲಾಗಿ ಗಾಯದ ಸಮಸ್ಯೆ ಹಾಗೂ ಅನಾರೋಗ್ಯದ ಸಮಸ್ಯೆಗಳಿಂದಾಗಿ ಕಣಕ್ಕಿಳಿಯದೆೇ ಕೆಲ ತಿಂಗಳುಗಳ ಕಾಲ ಕ್ರಿಕೆಟ್‍ನಿಂದ ದೂರ ಸರಿದು ಏಷ್ಯಾಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಮೂಡಿಸಿದ್ದರು. ಆದರೆ ಇದೀಗ ಬಿಸಿಸಿಐ ಕೆಎಲ್ ರಾಹುಲ್ ಅವರಿಗೆ ಮಣೆ ಹಾಕಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್ ರೋಹಿತ್ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಇನ್ನು ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಗೆ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಪ್ರಶ್ನೆಗೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಉತ್ತರಿಸಿದ್ದು ವಿರಾಟ್ ಕೊಹ್ಲಿಯನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಿದೆ.

ಅಶ್ವಿನ್ ಮತ್ತು ಅವೇಶ್ ಖಾನ್ ಅಚ್ಚರಿಯ ಆಯ್ಕೆ

ಅಶ್ವಿನ್ ಮತ್ತು ಅವೇಶ್ ಖಾನ್ ಅಚ್ಚರಿಯ ಆಯ್ಕೆ

ಇನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಬೌಲರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ಆಯ್ಕೆಯಾಗಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ರವಿಚಂದ್ರನ್ ಅಶ್ವಿನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡದೇ ಇದ್ದರೂ ಸ್ಥಾನ ನೀಡಲಾಗಿದ್ದರೆ, ಇತ್ತೀಚಿನ ದಿನಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ದುಬಾರಿಯಾಗಿ ಬೌಲಿಂಗ್ ಮಾಡಿದ ಅವೇಶ್ ಖಾನ್ ಅವರಿಗೆ ಸ್ಥಾನ ನೀಡಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ.

Rohit Sharma ಅನುಪಸ್ಥಿತಿಯಲ್ಲಿ ಭಾರತ ತಂಡಕ್ಕೆ ಹೊಸ ನಾಯಕ | *Cricket | OneIndia Kannada
ದಿನೇಶ್ ಕಾರ್ತಿಕ್ ಆಯ್ಕೆ

ದಿನೇಶ್ ಕಾರ್ತಿಕ್ ಆಯ್ಕೆ

ಇನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಸೇರ್ಪಡೆಗೊಳಿಸಿಕೊಂಡಿರುವ ವಿಷಯ ಸದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿನಲ್ಲಿ ಸಂತಸ ತಂದಿದೆ. ಸಿಕ್ಕ ಅವಕಾಶವನ್ನು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅಚ್ಚುಕಟ್ಟಾಗಿ ಉಪಯೋಗಿಸಿಕೊಂಡ ದಿನೇಶ್ ಕಾರ್ತಿಕ್ ನಂತರ ಭಾರತ ತಂಡ ಸೇರಿದ್ದು ಮಾತ್ರವಲ್ಲದೇ ಇದೀಗ ಏಷ್ಯಾಕಪ್ ಟೂರ್ನಿಗೂ ಕೂಡ ಆಯ್ಕೆಯಾಗಿ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.

Story first published: Monday, August 8, 2022, 22:06 [IST]
Other articles published on Aug 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X