ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

BCCI Announced Rs 5 Crore Prize For The Indian Womens Team After Won U-19 Womens T20 World Cup

ಭಾನುವಾರ, ಜನವರಿ 29ರಂದು ದಕ್ಷಿಣ ಆಫ್ರಿಕಾದ ಪೊಟ್ಚೆಫ್‌ಸ್ಟ್ರೂಮ್‌ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಅಂಡರ್-19 ಮಹಿಳಾ ಟಿ20 ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಶಫಾಲಿ ವರ್ಮಾ ನಾಯಕತ್ವದ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 7 ವಿಕೆಟ್‌ಗಳ ಐತಿಹಾಸಿಕ ಗೆಲುವು ದಾಖಲಿಸಿತು.

ಎದುರಾಳಿ ಇಂಗ್ಲೆಂಡ್ ಮಹಿಳಾ ತಂಡ ನೀಡಿದ್ದ 69 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ಮಹಿಳಾ ತಂಡವು, 14 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ ಗೆಲುವಿನ ಗುರಿ ತಲುಪಿತು.

U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರುU-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹರ್ಷ ವ್ಯಕ್ತಪಡಿಸಿದ್ದಾರೆ. ಭಾರತ ತಂಡ ಮತ್ತು ಸಹಾಯಕ ಸಿಬ್ಬಂದಿಗೆ 5 ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿದರು.

ಭಾರತೀಯ ಬೌಲರ್‌ಗಳು ಫೈನಲ್ ಪಂದ್ಯದಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಇಂಗ್ಲೆಂಡ್ ಬ್ಯಾಟಿಂಗ್ ಲೈನ್‌ಅಪ್ ಅನ್ನು ಆರಂಭದಿಂದಲೇ ಕಟ್ಟಿಹಾಕಿದರು. ಟಿಟಾಸ್ ಸಾಧು, ಅರ್ಚನಾ ದೇವಿ ಮತ್ತು ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿ 17.1 ಓವರ್‌ಗಳಲ್ಲಿ 68 ರನ್‌ಗಳಿಗೆ ಆಲೌಟ್ ಆಗುವಂತೆ ಪ್ರದರ್ಶನ ನೀಡಿದರು.

BCCI Announced Rs 5 Crore Prize For The Indian Womens Team After Won U-19 Womens T20 World Cup

69 ರನ್‌ಗಳ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಭಾರತ ತಂಡ ಇನ್ನೂ ಆರು ಓವರ್‌ಗಳು ಬಾಕಿ ಇರುವಂತೆಯೇ ಏಳು ವಿಕೆಟ್‌ಗಳಿಂದ ಗೆದ್ದು ಭಾನುವಾರದಂದು ಚೊಚ್ಚಲ ಅಂಡರ್-19 ಮಹಿಳಾ ವಿಶ್ವಕಪ್ ಚಾಂಪಿಯನ್ ಆಗಿ ಕಿರೀಟವನ್ನು ಅಲಂಕರಿಸಿತು.

IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆIND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ

ಭಾರತ ವನಿತೆಯರ ಅದ್ಭುತ ವಿಜಯದ ನಂತರ ಭಾರತ ತಂಡಕ್ಕೆ ಶುಭಾಶಯಗಳು ಟ್ವಿಟ್ಟರ್‌ನಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಭಿನಂದಿಸಿದ್ದಾರೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಏರಿಳಿತದಲ್ಲಿದೆ ಮತ್ತು ವಿಶ್ವಕಪ್ ವಿಜಯವು ಮಹಿಳಾ ಕ್ರಿಕೆಟ್‌ನ ಸ್ಥಾನವನ್ನು ಮುಂದಿನ ಹಂತಗಳಿಗೆ ತೆಗೆದುಕೊಂಡು ಹೋಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ಐದು ಕೋಟಿ ರೂಪಾಯಿ ಬಹುಮಾನ ಘೋಷಿಸಲು ಸಂತೋಷವಾಗುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದರು.

BCCI Announced Rs 5 Crore Prize For The Indian Womens Team After Won U-19 Womens T20 World Cup


ಇತ್ತೀಚಿನ ದಿನಗಳಲ್ಲಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಫೈನಲ್‌ನಂತಹ ಪ್ರಮುಖ ಪಂದ್ಯಾವಳಿಗಳಲ್ಲಿ ಹಿರಿಯರ ತಂಡವು ಫೈನಲ್‌ಗೆ ತಲುಪಿ ಪ್ರಶಸ್ತಿ ಗೆಲ್ಲದೆ ವಾಪಸ್ಸಾಗಿತ್ತು. ಇದೀಗ ಭಾರತ ತಂಡ ಮಹಿಳಾ ಕ್ರಿಕೆಟ್‌ನಲ್ಲಿ ಪ್ರಮುಖ ಐಸಿಸಿ ಟ್ರೋಫಿಯನ್ನು ಗೆದ್ದಿರುವುದು ಇದೇ ಮೊದಲು. ಹಲವು ಸಂದರ್ಭಗಳಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 4 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದ ಭಾರತದ ಟಿಟಾಸ್ ಸಾಧು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಇಂಗ್ಲೆಂಡ್‌ನ ಗ್ರೇಸ್ ಸ್ಕ್ರಿವೆನ್ಸ್ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದರು.

Story first published: Monday, January 30, 2023, 3:15 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X