ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ, ದ. ಆಫ್ರಿಕಾ ಟಿ20 ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ: ಟಿ20 ವಿಶ್ವಕಪ್‌ಗೆ ಮುನ್ನ ಸರಣಿ

BCCI announced schedule of australia and South africa series before t20 world cup

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬುಧವಾರ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಈ ಎರಡು ಬಲಿಷ್ಠ ತಂಡಗಳ ವಿರುದ್ಧ ಭಾರತ ತವರಿನಲ್ಲಿ ಟಿ20 ಸರಣಿಯನ್ನು ಆಡಲಿದ್ದು ಬಳಿಕ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗಲಿದೆ.

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೂಲಕ ತವರಿನ ಸರಣಿಯನ್ನು ಆರಂಭಿಸಲಿದೆ. ಈ ಸರಣಿ ಸೆಪ್ಟೆಂಬರ್ 20-25ರ ಮಧ್ಯೆ ನಡೆಯಲಿದೆ. ಅದಾದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೂಡ ಭಾರತ ತಂಡ ಸೆಣೆಸಾಡಲಿದೆ. ಸೆಪ್ಟೆಂಬರ್ 28-ಅಕ್ಟೋಬರ್ 4ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದ್ದು 11ರ ಅವಧಿಯಲ್ಲಿ ಏಕದಿನ ಸರಣಿಯನ್ನಾಡಲಿದೆ. ಏಕದಿನ ಸರಣಿಗೆ ವುಶ್ವಕಪ್‌ನಲ್ಲಿ ಭಾಗವಹಿಸದ ಆಟಗಾರರು ಭಾಗಿಯಾಗುವ ಸಾಧ್ಯತೆಯಿದೆ.

IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?

ಆಸಿಸ್ ಸರಣಿಗೆ ಆತಿಥ್ಯ

ಆಸಿಸ್ ಸರಣಿಗೆ ಆತಿಥ್ಯ

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮೊಹಾಲಿಯಲ್ಲಿ ಆಡುವ ಮೂಲಕ ಆರಂಭವಾಗಲಿದೆ. ನಾಗ್ಪುರದಲ್ಲಿ ಎರಡನೇ ಪಂದ್ಯ ಆಯೋಜನೆಯಾಗಲಿದ್ದು ಹೈದರಾಬಾದ್ ಮೂರನೇ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಸೆಪ್ಟೆಂಬರ್ 20, 23 ಹಾಗೂ 2ರಂದು ಕ್ರಮವಾಗಿ ಈ ಪಂದ್ಯಗಳು ಆಯೋಜನೆಯಾಗಲಿದೆ.

ದಕ್ಷಿಣ ಆಫ್ರಿಕಾ ಸರಣಿಯ ಮಾಹಿತಿ

ದಕ್ಷಿಣ ಆಫ್ರಿಕಾ ಸರಣಿಯ ಮಾಹಿತಿ

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ತಿರುವನಂತಪುರಂನಲ್ಲಿ ಆಡುವ ಮೂಲಕ ಪ್ರಾರಂಭವಾಗಲಿದೆ. ಎರಡನೇ ಪಂದ್ಯ ಅಕ್ಟೋಬರ್ 2ರಂದು ನಡೆಯಲಿದ್ದು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಈ ಪಂದ್ಯ ಆಯೋಜಿಸಲಾಗುತ್ತಿದೆ. ಮೂರನೇ ಟಿ20 ಪಂದ್ಯ ಇಂದೋರ್‌ನಲ್ಲಿ ನಡೆಯಲಿದೆ. ಏಕದಿನ ಸರಣಿಯ ಮೊದಲ ಪಂದ್ಯ ರಾಂಚಿಯಲ್ಲಿ ನಡೆದರೆ ಎರಡು ಹಾಗೂ ಮೂರನೇ ಪಂದ್ಯಗಳು ದೆಹಲಿಯಲ್ಲಿಯೇ ಆಯೋಜನೆಯಾಗಲಿದೆ.

ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಪ್ರಸ್ತುತ ಭಾರತ ಕ್ರಿಕೆಟ್ ತಂಡ ಕೆರಿಬಿಯನ್ ನಾಡಿನಲ್ಲಿದ್ದು ವೆಸ್ಟ್ ಇಂಡೀಸ್ ತಂಡದ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಡುತ್ತಿದೆ. ಈ ಸರಣಿಯಲ್ಲಿ ಈಗಾಗಲೇ ಮುನ್ನಡೆ ಸಾಧಿಸಿದ್ದು ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ. ಈ ಸರಣಿಯ ಬಳಿಕಶಿಖರ್ ಧವನ್ ನೇತೃತ್ವದ ಭಾರತ ತಂಡ ಜಿಂಬಾಬ್ವೆಗೆ ಪ್ರವಾಸ ಕೈಗೊಳ್ಳಲಿದ್ದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ಅದಾದ ಬಳಿಕ ಭಾರತ ತಂಡ ಯುಎಇಗೆ ತೆರಳಲಿದ್ದು ಏಷ್ಯಾಕಪ್‌ನಲ್ಲಿ ಭಾಗವಹಿಸಲಿದೆ.

Story first published: Thursday, August 4, 2022, 9:37 [IST]
Other articles published on Aug 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X