ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇತಿಹಾಸ ಬರೆದ ಭಾರತ ತಂಡಕ್ಕೆ ಭಾರೀ ಮೊತ್ತದ ನಗದು ಪುರಸ್ಕಾರ

IND VS AUS : ಇತಿಹಾಸ ಬರೆದ ಭಾರತ ತಂಡಕ್ಕೆ ಭಾರೀ ಮೊತ್ತದ ನಗದು ಪುರಸ್ಕಾರ | Oneindia Kannada
BCCI announces huge cash rewards for history making India squad

ನವದೆಹಲಿ, ಜನವರಿ 8: ಸುಮಾರು 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯರ ವಿರುದ್ಧ ಟೆಸ್ಟ್ ಸರಣಿ ಜಯಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಸಿಸಿಐ ದೇಸಿ ತಂಡಕ್ಕೆ ದೊಡ್ಡ ಮೊತ್ತದ ನಗದು ಪುರಸ್ಕಾರ ಘೋಷಿಸಿ ಪ್ರೋತ್ಸಾಹ ಸೂಚಿಸಿದೆ.

'ಐಪಿಎಲ್‌ 2019' ಗೊಂದಲಕ್ಕೆ ತೆರೆ, ಅದ್ದೂರಿ ಕ್ರಿಕೆಟ್ ಹಬ್ಬ ಭಾರತದಲ್ಲೆ'ಐಪಿಎಲ್‌ 2019' ಗೊಂದಲಕ್ಕೆ ತೆರೆ, ಅದ್ದೂರಿ ಕ್ರಿಕೆಟ್ ಹಬ್ಬ ಭಾರತದಲ್ಲೆ

ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಜಸ್‌ಪ್ರೀತ್ ಬೂಮ್ರಾ ಅದ್ಭುತ ಆಟ ಆಸೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖವೆನಿಸಿತ್ತು. 2-1 ಸರಣಿ ಜಯದೊಂದಿಗೆ ಭಾರತ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಜಯಿಸಿತ್ತು.

ಟೆಸ್ಟ್ ಸರಣಿಗಾಗಿ ಪ್ರಕಟಿತ ತಂಡದಲ್ಲಿ ಆಡುವ 11 ಆಟಗಾರರಲ್ಲಿ ಹೆಸರಿಸಿದ್ದವರಿಗೆ ಪ್ರತಿಯೊಬ್ಬರಂತೆ ಪ್ರತೀ ಪಂದ್ಯಕ್ಕೆ 15 ಲಕ್ಷ ರೂ., ಮೀಸಲು ಆಟಗಾರರಿಗೆ 7.5 ಲಕ್ಷ ರೂ. ನಗದನ್ನು ಬಿಸಿಸಿಐ ಘೋಷಿಸಿದೆ. ಜೊತೆಗೆ ತರಬೇತುದಾರರು 25 ಲಕ್ಷ ರೂ. ಪಡೆಯಲಿದ್ದಾರೆ. ಸಪೋರ್ಟ್ ಸ್ಟಾಫ್‌ಗೂ ಕೂಡ ವೃತ್ತಪರ ಶುಲ್ಕ ದೊರೆಯಲಿದೆ.

ಶ್ರೀಲಂಕಾ ವಿರುದ್ಧ ಟೇಲರ್ ಆರ್ಭಟ, ಸಚಿನ್-ಕೊಹ್ಲಿ ದಾಖಲೆ ಧೂಳೀಪಟ!ಶ್ರೀಲಂಕಾ ವಿರುದ್ಧ ಟೇಲರ್ ಆರ್ಭಟ, ಸಚಿನ್-ಕೊಹ್ಲಿ ದಾಖಲೆ ಧೂಳೀಪಟ!

ಐತಿಹಾಸಿಕ ಟೆಸ್ಟ್ ಸರಣಿ ಜಯದಿಂದ ಭಾರತ, ಅಪರೂಪದ ಸಾಧನೆ ತೋರಿದ ಏಷ್ಯಾದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ನಮ್ಮದು ವಿಶ್ವದಲ್ಲೇ ನಂ.1 ತಂಡವೆಂಬುದನ್ನು ಟೀಮ್ ಇಂಡಿಯಾ ಲೋಕಕ್ಕೆ ಮತ್ತೊಮ್ಮೆ ಕೂಗಿ ಹೇಳಿತ್ತು.

Story first published: Tuesday, January 8, 2019, 18:12 [IST]
Other articles published on Jan 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X