ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವೆಸ್ಟ್ ಇಂಡೀಸ್‌ ವಿರುದ್ಧದ ಓಡಿಐ ಸರಣಿಗೆ ಟೀಂ ಇಂಡಿಯಾ ಆಯ್ಕೆ: ರೋಹಿತ್ ಶರ್ಮಾ ನಾಯಕತ್ವ

India vs west indies ODI

ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆಗೊಂಡಿದ್ದು, 18 ಸದಸ್ಯರನ್ನೊಳಗೊಂಡ ತಂಡವನ್ನ ಆಯ್ಕೆ ಸಮಿತಿ ಪ್ರಕಟಿಸಿದೆ.

ಮಂಡಿರಜ್ಜು ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಮಿಸ್ ಮಾಡಿಕೊಂಡಿದ್ದ ಟೀಂ ಇಂಡಿಯಾ ಲಿಮಿಟೆಡ್ ಓವರ್ ಕ್ಯಾಪ್ಟನ್ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಿದ್ದು, ಭಾರತ ತಂಡವನ್ನ ಮುನ್ನಡೆಸಲಿದ್ದಾರೆ.

ಬೆಂಗಳೂರಿನ ಎನ್‌ಸಿಎ ಅಕಾಡೆಮಿಯಲ್ಲಿ ಇಂದು ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಗೆ ಒಳಗಾದರು. ಈ ಟೆಸ್ಟ್ ಗಳಲ್ಲಿ ಮಿಂಚಿದ ರೋಹಿತ್ ಫಿಟ್ನೆಸ್‌ ಸಾಬೀತು ಪಡಿಸಿದರು. ನಿಗದಿತ ಸಮಯದಲ್ಲಿ ನೀಡಿದ್ದ ಫಿಟ್ನೆಸ್ ಪರೀಕ್ಷೆಗಳನ್ನ ರೋಹಿತ್‌ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ರೋಹಿತ್ ಶರ್ಮಾಗೆ ಫಿಟ್ನೆಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡಿರುವುದರಿಂದ ಹಿಟ್‌ಮ್ಯಾನ್ ತವರಿನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ ಫೆಬ್ರವರಿ 6ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾ 18 ಸದಸ್ಯರ ಹೆಸರು ಈ ಕೆಳಗಿನಂತಿದೆ.

ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌

ಟೀಂ ಇಂಡಿಯಾ ಏಕದಿನ ಫಾರ್ಮೆಟ್‌ನ ಸ್ಕ್ವಾಡ್‌

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದೀಪಕ್ ಚಹಾರ್, ಶಾರ್ದೂಲ್ ಠಾಕೂರ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ , ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್

ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!

ಕುಲ್‌ದೀಪ್ ಯಾದವ್ ಕಂಬ್ಯಾಕ್, ಬಿಷ್ಣೋಯಿಗೆ ಚೊಚ್ಚಲ ಚಾನ್ಸ್‌

ಕುಲ್‌ದೀಪ್ ಯಾದವ್ ಕಂಬ್ಯಾಕ್, ಬಿಷ್ಣೋಯಿಗೆ ಚೊಚ್ಚಲ ಚಾನ್ಸ್‌

ಹಿರಿಯ ವ್ರಿಸ್ಟ್‌ ಸ್ಪಿನ್ನರ್ ಆಗಿರುವ ಕುಲ್‌ದೀಪ್ ಯಾದವ್ ಕಳೆದ ವರ್ಷ ಸೆಪ್ಟಂಬರ್‌ನಂದು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದಾರೆ. ಬಹಳ ಸಮಯದ ಬಳಿಕ ಭಾರತ ಏಕದಿನ ತಂಡದಲ್ಲಿ ಕುಲ್‌ದೀಪ್ ಯಾದವ್ ಸ್ಥಾನ ಪಡೆದಿದ್ದಾರೆ.

ಕುಲ್‌ದೀಪ್ ಯಾದವ್ ಜೊತೆಗೆ ಯುವ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿಗೆ ಟೀಂ ಇಂಡಿಯಾದಲ್ಲಿ ಮೊದಲ ಬಾರಿಗೆ ಅವಕಾಶ ನೀಡಿದ್ದು, ಏಕದಿನ ಮತ್ತು ಟಿ20 ಸರಣಿ ಎರಡಕ್ಕೂ ಆಯ್ಕೆಯಾಗಿದ್ದಾರೆ. ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್‌ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ರವೀಂದ್ರ ಜಡೇಜಾ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಎರಡು ಸರಣಿಗೂ ಆಯ್ಕೆಗೊಂಡಿಲ್ಲ.

ಭಾರತ-ವೆಸ್ಟ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ

ಭಾರತ-ವೆಸ್ಟ ಇಂಡೀಸ್ ಏಕದಿನ ಸರಣಿ ವೇಳಾಪಟ್ಟಿ

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ:
1ನೇ ODI, ಫೆಬ್ರವರಿ 6, ಭಾನುವಾರ, ಅಹಮದಾಬಾದ್ (1PM)
2ನೇ ODI, ಫೆಬ್ರವರಿ 9, ಬುಧವಾರ, ಅಹಮದಾಬಾದ್ (1PM)
3ನೇ ODI, ಫೆಬ್ರವರಿ 11, ಶುಕ್ರವಾರ, ಅಹಮದಾಬಾದ್ (1PM)

Story first published: Wednesday, January 26, 2022, 23:00 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X