ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಹಿಳಾ ಟಿ20 ಚಾಲೆಂಜ್ 2022: ಮೂರು ತಂಡಗಳ ಸ್ಕ್ವಾಡ್‌ ಪ್ರಕಟಿಸಿದ ಬಿಸಿಸಿಐ

Womens T20 Challenge 2022

2022ರ ಆವೃತ್ತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿಯ ತಂಡಗಳನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಕಟಿಸಿದೆ. ಐಪಿಎಲ್ 2022ರ ಪ್ಲೇ ಆಫ್ ಪಂದ್ಯಗಳ ನಡುವೆ ಆಯೋಜಿಸಲಾಗುವ ಟೂರ್ನಮೆಂಟ್‌ನಲ್ಲಿ ಕಳೆದ ಬಾರಿಯಂತೆ ಮೂರು ತಂಡಗಳು ಭಾಗಿಯಾಗುತ್ತಿವೆ.

ಸೂಪರ್‌ನೋವಾಸ್‌ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿ ಆಯ್ಕೆಯಾಗಿದ್ದು, ಟ್ರೈಲ್‌ಬ್ಲೇಜರ್ಸ್‌ ತಂಡವನ್ನ ಸ್ಮೃತಿ ಮಂದಾನ ಮುನ್ನಡೆಸುತ್ತಿದ್ದಾರೆ. ವೆಲಾಸಿಟಿ ತಂಡದ ನಾಯಕತ್ವವನ್ನ ದೀಪ್ತಿ ಶರ್ಮಾ ವಹಿಸಲಾಗಿದೆ.

ಕಳೆದ ಸೀಸನ್‌ನಂತೆ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದ್ದು, ಫೈನಲ್‌ ಪಂದ್ಯವು ಇದರಲ್ಲಿ ಒಳಗೊಂಡಿದೆ. ಮೊದಲ ಪಂದ್ಯ 23 ಮೇ ಸಂಜೆ 7.30ಕ್ಕೆ ಪುಣೆಯಲ್ಲಿ ನಡೆಯಲಿದೆ. ಎರಡನೇ ಪಂದ್ಯವು ಮೇ 24ರಂದು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ. ಇದಾದ ಬಳಿಕ ಒಂದು ದಿನಗಳ ವಿರಾಮ ನೀಡಲಾಗಿದ್ದು, ಮೂರನೇ ಪಂದ್ಯವು ಮೇ 26ರಂದು ನಡೆಯಲಿದೆ. ಫೈನಲ್ ಪಂದ್ಯವು ಮೇ 28ರಂದು ಆಯೋಜಿಸಲಾಗಿದೆ.

ಮೇ 23ರಂದು ಕಳೆದ ಬಾರಿಯ(2020) ಟ್ರೈಲ್‌ಬ್ಲೇಜರ್ಸ್‌ ಮತ್ತು ಸೂಪರ್‌ನೊವಾಸ್ ನಡುವಿನ ಫೈನಲ್ ಪಂದ್ಯದಿಂದ ಆರಂಭಗೊಳ್ಳಲಿದೆ.

ಬಿಸಿಸಿಐ ಮೊದಲ ಬಾರಿಗೆ ಈ ಪಂದ್ಯಾವಳಿಯನ್ನು 2018 ರಲ್ಲಿ ಆಯೋಜಿಸಿದಾಗ ಕೇವಲ ಎರಡು ತಂಡಗಳು ಭಾಗವಹಿಸಿದ್ದು, ಒಂದು ಪಂದ್ಯದೊಂದಿಗೆ ಪ್ರಾರಂಭಿಸಿತು. 2019 ರಲ್ಲಿ, ಬಿಸಿಸಿಐ ಮತ್ತೊಂದು ಹೊಸ ತಂಡವನ್ನು ಪರಿಚಯಿಸಿತು, ಅಲ್ಲಿ ಪ್ರತಿ ತಂಡವು ಇನ್ನೊಂದನ್ನು ಒಮ್ಮೆ ಆಡಿತು ಮತ್ತು ಅಗ್ರ ಎರಡು ತಂಡಗಳು ಫೈನಲ್‌ಗೆ ಮುನ್ನಡೆದವು.

ಸೂಪರ್‌ನೋವಾಸ್‌ ಸ್ಕ್ವಾಡ್‌

ಸೂಪರ್‌ನೋವಾಸ್‌ ಸ್ಕ್ವಾಡ್‌

ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ತಾನಿಯಾ ಭಾಟಿಯಾ(ಉಪನಾಯಕಿ), ಅಲನಾ ಕಿಂಗ್, ಆಯುಷ್ ಸೋನಿ, ಚಂದು ವಿ., ಡಿಯಾಂಡ್ರಾ ಡಾಟಿನ್, ಹಾರ್ಲಿನ್ ಡಿಯೋಲ್, ಮೇಘನಾ ಸಿಂಗ್, ಮೊನಿಕಾ ಪಟೇಲ್, ಮುಸ್ಕಾನ್ ಮಲ್ಲಿಕ್, ಪೂಜಾ ವಸ್ತ್ರಾಕರ್, ಪ್ರಿಯಾ ಪುನಿಯಾ, ರಾಶಿ ಕನೋಜಿಯ, ಸೋಫಿ ಎಕ್ಲೆಸ್ಟೋನ್, ಸುನೆ ಲೂಸ್, ಮಾನ್ಸಿ ಜೋಶಿ

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಹಾಗೂ ಪಂಜಾಬ್ ಸೆಣೆಸಾಟ: ಯಾರು ಗೆದ್ದರೂ ಆರ್‌ಸಿಬಿಗೆ ಹಿನ್ನಡೆ!

ಟ್ರೈಲ್‌ಬ್ಲೇಜರ್ಸ್‌ ಸ್ಕ್ವಾಡ್‌

ಟ್ರೈಲ್‌ಬ್ಲೇಜರ್ಸ್‌ ಸ್ಕ್ವಾಡ್‌

ಸ್ಮೃತಿ ಮಂದಾನ (ನಾಯಕಿ), ಪೂನಂ ಯಾದವ್ (ಉಪನಾಯಕಿ), ಅರುಂದತಿ ರೆಡ್ಡಿ, ಹೇಲಿ ಮ್ಯಾಥ್ಯೂಸ್, ಜೆಮಿಮಾ ರೋಡ್ರಿಗಸ್, ಪ್ರಿಯಾಂಕ ಪ್ರಿಯಾದರ್ಶಿನಿ, ರಾಜೇಶ್ವರಿ ಗಾಯಕ್ವಾಡ್‌, ರೇಣುಕಾ ಸಿಂಗ್, ರಿಚಾ ಘೋಷ್, ಎಸ್‌, ಮೇಘನಾ, ಸೈಕಾ ಇಶಾಕ್, ಸಲ್ಮಾ ಖತುನ್, ಶರ್ಮಿನ್ ಅಕ್ತರ್, ಸೋಫಿಯಾ ಬ್ರೌನ್, ಸುಜಾತ ಮಲ್ಲಿಕ್, ಎಸ್‌.ಬಿ. ಪೋಖರ್‌ಕರ್‌

PBKS vs DC: ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಸಾಧ್ಯತೆ ಇರುವ ಮೂವರು ಆಟಗಾರರು

ವೆಲಾಸಿಟಿ ಸ್ಕ್ವಾಡ್‌

ವೆಲಾಸಿಟಿ ಸ್ಕ್ವಾಡ್‌

ದೀಪ್ತಿ ಶರ್ಮಾ (ನಾಯಕಿ), ಸ್ನೃಹ ರಾಣಾ (ಉಪನಾಯಕಿ), ಶಫಾಲಿ ವರ್ಮಾ, ಅಯಬೊಂಗ ಖಾಕಾ, ಕೆ.ಪಿ. ನವಗಿರೆ, ಕ್ಯಾಥರಿನ್ ಕ್ರಾಸ್, ಕೀರ್ತಿ ಜೇಮ್ಸ್‌, ಲಾರಾ ವೊಲ್ವಾರ್ಡ್ಟ್, ಮಾಯಾ ಸೋನಾವಾನೆ, ನಟ್ಠಕಾನ್ ಚಾಂತಮ್, ರಾಧಾ ಯಾದವ್, ಆರ್ತಿ ಕೇದರ್, ಶಿವಾಲಿ ಶಿಂಧೆ, ಸಿಮ್ರಾನ್ ಬಹದ್ದೂರ್, ಯಾಸ್ತಿಕಾ ಭಾಟಿಯಾ, ಪ್ರಣವಿ ಚಂದ್ರ

ಅಶ್ವಿನ್ ಔಟ್ ಅಂತ ಹೋದ ಮೇಲೆ ವಾಪಸ್ ಕರೆದಿದ್ದೇಕೆ | Oneindia Kannada
ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಟೂರ್ನಿಗೆ ಗೈರು

ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಟೂರ್ನಿಗೆ ಗೈರು

ಭಾರತದ ಹಿರಿಯ ಕ್ರಿಕೆಟಿಗರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಸ್ವಿಂಗ್ ಬೌಲರ್ ಶಿಖಾ ಪಾಂಡೆ ಅವರು ಮಹಿಳಾ ಟಿ20 ಚಾಲೆಂಜ್‌ನ ಮುಂಬರುವ ಆವೃತ್ತಿಗೆ ಬಿಸಿಸಿಐ ಪ್ರಕಟಿಸಿದ ತಂಡಗಳಲ್ಲಿ ಕಾಣಿಸಿಕೊಂಡಿಲ್ಲ. 2020 ರ ಕೊನೆಯ ಆವೃತ್ತಿಯ ಟೂರ್ನಮೆಂಟ್‌ನಲ್ಲಿ ವೆಲಾಸಿಟಿ ತಂಡಕ್ಕೆ ಮಿಥಾಲಿ ರಾಜ್ ನಾಯಕತ್ವ ವಹಿಸಿದ್ದರು. ಆದ್ರೆ ಈ ಬಾರಿ ದೀಪ್ತಿ ಶರ್ಮಾ ತಂಡವನ್ನ ಮುನ್ನಡೆಸಲಿದ್ದಾರೆ.

Story first published: Monday, May 16, 2022, 15:40 [IST]
Other articles published on May 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X