ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏನಿದು ವಿವಾದ: ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿಯ ಈ ಸಮರ್ಥನೆ ಸರಿಯೇ?

BCCI Chief Sourav Ganguly Said Nothing Wrong In Giving Useful Tips To Young Players

ಬಿಸಿಸಿಐ ಅಧ್ಯಕ್ಷರಾಗಿ ಒಂದು ತಂಡವನ್ನು ಸಮರ್ಥಿಸಿಕೊಳ್ಳುವುದು ಸರಿಯೇ, ಇದು ಸ್ವಹಿತಾಶಕ್ತಿ ಅಲ್ಲವೇ ಎನ್ನುವ ಪ್ರಶ್ನೆಗೆ ಸೌರವ್ ಗಂಗೂಲಿ ಉತ್ತರಿಸುತ್ತಾ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

"ಯುವ ಆಟಗಾರರಿಗೆ ಸಲಹೆ ಕೊಡುವುದರಲ್ಲಿ ತಪ್ಪೇನಿದೆ. ನಾನು ಮಾರ್ಗದರ್ಶನ ನೀಡಲು ಮುಕ್ತನಾಗಿದ್ದೇನೆ"ಎಂದು ಗಂಗೂಲಿ ಹೇಳಿದ್ದಾರೆ. "ತಂಡದಲ್ಲಿ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಂಥವರನ್ನು ಪಡೆದಿರುವುದು ನಮ್ಮ ಅದೃಷ್ಟ"ಎಂದು ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಐಯ್ಯರ್ ಹೇಳಿದ್ದರು.

ಗಂಗೂಲಿ ಬಗ್ಗೆ ಕಾಮೆಂಟ್ ಮಾಡಿ ವಿವಾದ ಸೃಷ್ಠಿಸಿದ ಡೆಲ್ಲಿ ನಾಯಕ ಶ್ರೇಯಸ್ಗಂಗೂಲಿ ಬಗ್ಗೆ ಕಾಮೆಂಟ್ ಮಾಡಿ ವಿವಾದ ಸೃಷ್ಠಿಸಿದ ಡೆಲ್ಲಿ ನಾಯಕ ಶ್ರೇಯಸ್

ಶ್ರೇಯಸ್ ಅವರ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿರುವ ಸೌರವ್ ಗಂಗೂಲಿ, "ನಾನು ಐನೂರಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ನನ್ನ ಅನುಭವಕ್ಕೆ ತಕ್ಕಂತೆ ಸಲಹೆ ನೀಡುತ್ತೇನೆ"ಎಂದು ಹೇಳಿದ್ದಾರೆ.

"ಈಗ ನಾನು ಬಿಸಿಸಿಐನ ಅಧ್ಯಕ್ಷನಾಗಿರಬಹುದು. ಕಳೆದ ಬಾರಿ ಶ್ರೇಯಸ್ ಐಯ್ಯರ್ ಗೆ ಸಲಹೆ ನೀಡಿದ್ದೆ. ಅದನ್ನು ಅವರು ಮೆರೆತಿಲ್ಲ. ನನ್ನ ಅನುಭವವನ್ನು ಶ್ರೇಯಸ್ ಅಥವಾ ಕೊಹ್ಲಿಗೂ ನೀಡುವುದರಲ್ಲಿ ತಪ್ಪೇನಿದೆ'ಎಂದು ಗಂಗೂಲಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.

ಇದೇ ಕಾರಣಕ್ಕೆ ಐಪಿಎಲ್ ಶ್ರೇಷ್ಠ ಕ್ರಿಕೆಟ್ ಲೀಗ್: ಸೌರವ್ ಗಂಗೂಲಿಇದೇ ಕಾರಣಕ್ಕೆ ಐಪಿಎಲ್ ಶ್ರೇಷ್ಠ ಕ್ರಿಕೆಟ್ ಲೀಗ್: ಸೌರವ್ ಗಂಗೂಲಿ

ಐಪಿಎಲ್ ದ್ವಿತೀಯ ಪಂದ್ಯದ ನಂತರ, ಪತ್ರಿಕಾಗೋಷ್ಠಿಯಲ್ಲಿ ಶ್ರೇಯಸ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. "'ತಂಡದಲ್ಲಿ ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ ಅವರಂಥವರನ್ನು ಪಡೆದಿರುವುದು ನಮ್ಮ ಅದೃಷ್ಟ. ಗಂಗೂಲಿ ಕೂಡ ನಮಗೆ ನೆರವು ನೀಡುತ್ತಿದ್ದಾರೆ"ಎಂದು ಶ್ರೇಯಸ್ ಹೇಳಿದ್ದರು.

ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರು ಯಾವುದೇ ತಂಡಕ್ಕೆ ವೈಯಕ್ತಿಕವಾಗಿ ಬೆಂಬಲಿಸುವಂತಿಲ್ಲ. ಮಾರ್ಗದರ್ಶನ ನೀಡುವಂತಿಲ್ಲ. ಯಾಕೆಂದರೆ ಬಿಸಿಸಿಐಯಲ್ಲಿದ್ದು ಬೇರೆ ಒಂದು ತಂಡಕ್ಕ ಬೆಂಬಲ ನೀಡಿದರೆ ಅಂದು ಹಿತಾಸಕ್ತಿ ಸಂಘರ್ಷವಾಗುತ್ತದೆ ಎಂಬ ಮಾತುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

Story first published: Tuesday, September 29, 2020, 16:18 [IST]
Other articles published on Sep 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X