ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

BCCI Constitution: ತುರ್ತು ವಿಚಾರಣೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಬಿಸಿಸಿಐ

BCCI Constitution Amendment: BCCI Moves Supreme Court Seeking Urgent Hearing

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂವಿಧಾನದ ಆರು ನಿಯಮಗಳನ್ನು ತಿದ್ದುಪಡಿ ಮಾಡುವ ಅನುಮೋದನೆಯ ಮನವಿಯ ತುರ್ತು ವಿಚಾರಣೆಯನ್ನು ಕೋರಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಇದೀಗ ಮುಂದಿನ ವಾರದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಮತ್ತು ಬಿಸಿಸಿಐ ಕಾರ್ಯದರ್ಶಿಯಾಗಿ ಜಯ್ ಶಾ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 2022ರಲ್ಲಿ ಮುಕ್ತಾಯಗೊಳ್ಳಲಿದೆ.

IND vs ENG: ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿIND vs ENG: ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

2019ರಲ್ಲಿ ಬಿಸಿಸಿಐನ ಸಾಮಾನ್ಯ ಸಭೆ ಡಿಸೆಂಬರ್ 1, 2019ರಂದು ಎಜಿಎಂನಲ್ಲಿ ಆರು ತಿದ್ದುಪಡಿಗಳನ್ನು ಪ್ರಸ್ತಾಪಿಸಿತ್ತು. ಸಂವಿಧಾನದ ನಿಯಮ 6ರಲ್ಲಿ ಒಂದು, ಬಿಸಿಸಿಐ ಮತ್ತು ರಾಜ್ಯ ಮಂಡಳಿಯ ಪದಾಧಿಕಾರಿಗಳು ಸತತ 6 ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರ ವಹಿಸಿಕೊಳ್ಳುವುದನ್ನು ನಿರ್ಬಂಧಿಸಿದೆ.

ಕಡ್ಡಾಯವಾಗಿ 3 ವರ್ಷಗಳ ಕೂಲಿಂಗ್ ಆಫ್ ಅವಧಿ

ಕಡ್ಡಾಯವಾಗಿ 3 ವರ್ಷಗಳ ಕೂಲಿಂಗ್ ಆಫ್ ಅವಧಿ

ಪ್ರಸ್ತುತ ನಿಯಮಗಳ ಪ್ರಕಾರ, ಬಿಸಿಸಿಐ ಅಥವಾ ರಾಜ್ಯ ಕ್ರಿಕೆಟ್ ಸಂಸ್ಥೆ ಅಥವಾ ಯಾವುದೇ ಸಂಯೋಜನೆಯಲ್ಲಿ ಪದಾಧಿಕಾರಿಯಾಗಿರುವ ಯಾವುದೇ ವ್ಯಕ್ತಿ, ಗರಿಷ್ಠ ಆರು ವರ್ಷಗಳ ಅಧಿಕಾರಾವಧಿಯ ನಂತರ ಕಡ್ಡಾಯವಾಗಿ 3 ವರ್ಷಗಳ 'ಕೂಲಿಂಗ್ ಆಫ್ ಅವಧಿ'ಗೆ ಒಳಗಾಗಬೇಕಾಗುತ್ತದೆ. ಈ ಅವಧಿಯಲ್ಲಿ ಅವರು ರಾಜ್ಯ ಸಂಸ್ಥೆ ಅಥವಾ ಬಿಸಿಸಿಐನಲ್ಲಿ ಹುದ್ದೆಯನ್ನು ಹೊಂದುವಂತಿಲ್ಲ. ಇದು ಬಿಸಿಸಿಐನ ಪ್ರಸ್ತುತ ಪದಾಧಿಕಾರಿಗಳು ಮುಂದಿನ ಮೂರು ವರ್ಷಗಳವರೆಗೆ ಬಿಸಿಸಿಐ ಅಥವಾ ಯಾವುದೇ ರಾಜ್ಯ ಮಂಡಳಿಯಲ್ಲಿ ಯಾವುದೇ ಹುದ್ದೆಗಳನ್ನು ಹೊಂದದಂತೆ ಪರಿಣಾಮಕಾರಿಯಾಗಿ ನಿರ್ಬಂಧಿಸುತ್ತದೆ.

ಬಿಸಿಸಿಐ ಅಧ್ಯಕ್ಷರಾಗಿ ನೇಮಕಗೊಳ್ಳುವ ಮೊದಲು ಸೌರವ್ ಗಂಗೂಲಿ ಅವರು 2014ರಿಂದ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ)ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆದರೆ ಬಿಸಿಸಿಐ ಕಾರ್ಯದರ್ಸಿಯಾಗಿರುವ ಜಯ್ ಶಾ ಅವರು 2013ರಿಂದ ಗುಜರಾತ್ ಕ್ರಿಕೆಟ್ ಸಂಸ್ಥೆಯಲ್ಲಿ ಪದಾಧಿಕಾರಿಯಾಗಿದ್ದರು. ಪ್ರಸ್ತುತ ಅವರ ಅಧಿಕಾರಾವಧಿಯು ತಾಂತ್ರಿಕವಾಗಿ 'ವಿಸ್ತರಣೆ' ಅಡಿಯಲ್ಲಿದೆ. ನಿಯಮಗಳ ತಿದ್ದುಪಡಿಯ ಮನವಿಯನ್ನು ಸುಪ್ರೀಂ ಕೋರ್ಟ್ ಆಲಿಸಿಲ್ಲ ಅಥವಾ ಅವರನ್ನು ಅಧಿಕಾರದಿಂದ ತೆಗೆದುಹಾಕುವ ಬಗ್ಗೆ ಯಾವುದೇ ಆದೇಶವನ್ನು ನೀಡಿಲ್ಲ.

ನಿಬಂಧನೆಯನ್ನು ತಿದ್ದುಪಡಿ ಮಾಡುವುದು ಅಗತ್ಯ

ನಿಬಂಧನೆಯನ್ನು ತಿದ್ದುಪಡಿ ಮಾಡುವುದು ಅಗತ್ಯ

ಬಿಸಿಸಿಐ ಪದಾಧಿಕಾರಿಗಳಿಗೆ ರಾಜ್ಯ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಅಲಂಕರಿಸಲು ಅವಕಾಶ ಕಲ್ಪಿಸುವ ತಿದ್ದುಪಡಿಯನ್ನು ಎಜಿಎಂ ಪ್ರಸ್ತಾಪಿಸಿದೆ. ಜೊತೆಗೆ ಪ್ರಸ್ತಾವಿತ ತಿದ್ದುಪಡಿಯು ರಾಜ್ಯ ಸಂಸ್ಥೆಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ಈ ಆರು ವರ್ಷಗಳ ಅಧಿಕಾರಾವಧಿಯ ನಿಯಮವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.

ಅಪೆಕ್ಸ್ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಅರ್ಜಿಯು "ನಿಯಮ 6.4ರಲ್ಲಿ ಒಳಗೊಂಡಿರುವ ನಿಬಂಧನೆಯು ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಗೆ ಅನ್ವಯಿಸುತ್ತದೆ ಮತ್ತು ಅನರ್ಹತೆ ಪ್ರಾರಂಭವಾಗುವ ಮೊದಲು ಈಗಾಗಲೇ ಚುನಾಯಿತರಾದ ಚುನಾಯಿತ ವ್ಯಕ್ತಿಯ ಮುಂದುವರಿಕೆಗೆ ಅನ್ವಯಿಸುವುದಿಲ್ಲ. ಸಾಮಾನ್ಯ ಮಂಡಳಿಯು 3 ವರ್ಷಗಳ ನಂತರ ಹೊಸ ಚುನಾವಣೆಯಲ್ಲಿ ಬಿಸಿಸಿಐ ರಾಜ್ಯ ಅಸೋಸಿಯೇಷನ್‌ನಲ್ಲಿರುವ ವ್ಯಕ್ತಿಗಳು ಗಳಿಸಿದ ಅನುಭವದಿಂದ ವಂಚಿತವಾಗದಂತೆ ನೋಡಿಕೊಳ್ಳಲು ಈ ನಿಬಂಧನೆಯನ್ನು ತಿದ್ದುಪಡಿ ಮಾಡುವುದು ಅಗತ್ಯ ಎಂದು ಭಾವಿಸಿದೆ.

ಕ್ರಿಕೆಟ್ ಮತ್ತು ಕ್ರಿಕೆಟೇತರ ವೃತ್ತಿಪರರಿಗೆ ಹಸ್ತಾಂತರಿಸಲಾದ ವಿಷಯ

ಕ್ರಿಕೆಟ್ ಮತ್ತು ಕ್ರಿಕೆಟೇತರ ವೃತ್ತಿಪರರಿಗೆ ಹಸ್ತಾಂತರಿಸಲಾದ ವಿಷಯ

ಇತರ ಪ್ರಸ್ತಾವಿತ ತಿದ್ದುಪಡಿಗಳು ಬಿಸಿಸಿಐನ ದಿನನಿತ್ಯದ ಕಾರ್ಯಚಟುವಟಿಕೆಗಳ ಮೇಲೆ ಬಿಸಿಸಿಐ ಪದಾಧಿಕಾರಿಗಳ 'ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ'ಕ್ಕೆ ಅವಕಾಶ ನೀಡುತ್ತವೆ. ಪ್ರಸ್ತುತ ನಿಯಮಗಳ ಅಡಿಯಲ್ಲಿ ಇದನ್ನು ಕ್ರಿಕೆಟ್ ಮತ್ತು ಕ್ರಿಕೆಟೇತರ ವೃತ್ತಿಪರರಿಗೆ ಹಸ್ತಾಂತರಿಸಲಾದ ವಿಷಯಗಳಾಗಿವೆ.

2018ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ಅಡಿಯಲ್ಲಿ ಬಿಸಿಸಿಐನ ಸಂವಿಧಾನವನ್ನು ರಚಿಸಲಾಗಿದೆ. ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ, 'ರಾಜಕೀಯ ಪ್ರಭಾವವನ್ನು ತೆಗೆದುಹಾಕಲು ಮತ್ತು ವೃತ್ತಿಪರ ಕ್ರೀಡಾ ವ್ಯಕ್ತಿಗಳು ಕ್ರೀಡಾ ಸಂಸ್ಥೆಯ ಮೇಲೆ ನಿಯಂತ್ರಣವನ್ನು ಹೊಂದಲು' ಅವಕಾಶ ಮಾಡಿಕೊಡಲಾಗುತ್ತದೆ.

ನಿಯಮಗಳಲ್ಲಿನ ಯಾವುದೇ ಬದಲಾವಣೆಗಳು ಅಥವಾ ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಅನುಮೋದಿಸಬೇಕು. ಏಕೆಂದರೆ ನ್ಯಾಯಾಲಯವು ಸಮಸ್ಯೆಯನ್ನು ಇನ್ನೂ ಮೇಲ್ವಿಚಾರಣೆ ಮಾಡುತ್ತಿದೆ. ತಿದ್ದುಪಡಿಗಳ ಅನುಮೋದನೆಗಾಗಿ ಅರ್ಜಿಯನ್ನು ಮೂಲತಃ ಏಪ್ರಿಲ್ 2020ರಲ್ಲಿ ಸ್ಥಳಾಂತರಿಸಲಾಯಿತು. ಆದರೆ ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಬಿಸಿಸಿಐ ಕೋರಿದ ಮುಂದೂಡಿಕೆಯಿಂದಾಗಿ ಈ ವಿಷಯದ ಬಗ್ಗೆ ಯಾವುದೇ ವಿಚಾರಣೆ ನಡೆಯಲಿಲ್ಲ. ಈ ಮಧ್ಯೆ ಪ್ರಕರಣದಲ್ಲಿ ನೇಮಕಗೊಂಡಿದ್ದ ಅಮಿಕಸ್ ಕ್ಯೂರಿ ಪಿಎಸ್ ನರಸಿಂಹ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲಾಗಿದೆ.

ವಕೀಲ ಪಿಎಸ್ ಪಟ್ವಾಲಿಯಾ ಅವರು ಶೀಘ್ರ ವಿಚಾರಣೆ ಕೋರಿದರು

ವಕೀಲ ಪಿಎಸ್ ಪಟ್ವಾಲಿಯಾ ಅವರು ಶೀಘ್ರ ವಿಚಾರಣೆ ಕೋರಿದರು

ಶುಕ್ರವಾರದಂದು ಸಿಜೆಐ ನೇತೃತ್ವದ ಪೀಠದ ಮುಂದೆ ಹಿರಿಯ ವಕೀಲ ಪಿಎಸ್ ಪಟ್ವಾಲಿಯಾ ಅವರು ಶೀಘ್ರ ವಿಚಾರಣೆಯನ್ನು ಕೋರಿದರು. ಸುಪ್ರೀಂ ಕೋರ್ಟ್ ವೆಬ್‌ಸೈಟ್ ಪ್ರಕಾರ, ತಾತ್ಕಾಲಿಕ ವಿಚಾರಣೆಯ ದಿನಾಂಕ ಸೆಪ್ಟೆಂಬರ್ 6 ಆಗಿದೆ.

ವಿಷಯವನ್ನು ಪ್ರಸ್ತಾಪಿಸುವಾಗ, "ಈ ಸಮಸ್ಯೆಯು 2 ವರ್ಷಗಳಿಂದ ಬಾಕಿ ಉಳಿದಿದೆ ಮತ್ತು ತಿದ್ದುಪಡಿಗಳ ಅನುಮೋದನೆ ಅಗತ್ಯವಿರುವುದರಿಂದ ತುರ್ತು ಪರಿಗಣನೆಯ ಅಗತ್ಯವಿದೆ," ಎಂದು ಪಟ್ವಾಲಿಯಾ ಉಲ್ಲೇಖಿಸಿದರು. ಆಗ ಮುಖ್ಯ ನ್ಯಾಯಮೂರ್ತಿಗಳು, "ಮುಂದಿನ ವಾರ ವಿಚಾರಣೆಗೆ ಬರಬಹುದೇ ನೋಡೋಣ" ಎಂದು ಹೇಳಿದ್ದಾರೆ.

Story first published: Friday, July 15, 2022, 16:56 [IST]
Other articles published on Jul 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X