ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಮತ್ತೊಂದು ಹೊಸ ತಂಡ ಸೇರ್ಪಡೆಗೆ ಬಿಸಿಸಿಐ ಚಿಂತನೆ!

BCCI mulls nine-team IPL instead of 10 for now | Oneindia kannada
BCCI contemplating nine-team IPL instead of 10 for now

ಬೆಂಗಳೂರು, ನವೆಂಬರ್ 21: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2020ರ ನಂತರದ ಆವೃತ್ತಿಗಳಲ್ಲಿ ಇನ್ನೆರಡು ಹೊಸ ತಂಡಗಳು ಮೈದಾನಕ್ಕಿಳಿಯಲಿವೆ ಎಂಬ ಮಾತುಗಳು ಕ್ರಿಕೆಟ್‌ ವಲಯದಲ್ಲಿ ಕೇಳಿಬಂದಿತ್ತು. ಆದರೆ ಈಗಿನ ಮಾಹಿತಿಯಂತೆ ಬಿಸಿಸಿಐಯು ಭವಿಷ್ಯದಲ್ಲಿ 10 ತಂಡಗಳ ಬದಲಿಗೆ 9 ತಂಡಗಳನ್ನು ಸ್ಪರ್ಧೆಗಿಳಿಸುವತ್ತ ಯೋಚಿಸುತ್ತಿದೆ ಎನ್ನಲಾಗುತ್ತಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ವೇಳಾಪಟ್ಟಿಸೈಯದ್ ಮುಷ್ತಾಕ್ ಅಲಿ ಟ್ರೋಫಿ ಸೂಪರ್ ಲೀಗ್ ವೇಳಾಪಟ್ಟಿ

ಈಗ ಐಪಿಎಲ್‌ನಲ್ಲಿ ಒಟ್ಟು 8 ತಂಡಗಳಿಬವೆ. 2020ರ ನಂತರ ಇನ್ನೆರಡು ತಂಡಗಳು ಅಂದರೆ ಒಟ್ಟು 10 ತಂಡಗಳು ಕಾಣಿಸಲಿವೆ ಎನ್ನಲಾಗಿತ್ತು. ಆದರೆ ಪಂದ್ಯಗಳನ್ನು ಆಯೋಜಿಸುವಾಗಿನ ಸವಾಲನ್ನು ಮನಗಂಡಿರುವ ಬಿಸಿಸಿಐ, 10ರ ಬದಲು 9 ತಂಡಗಳಿಗೆ ಅವಕಾಶ ನೀಡುವತ್ತ ಯೋಚಿಸುತ್ತಿದೆ.

ಟೆಸ್ಟ್‌ಗೆ ವೀಕ್ಷಕರನ್ನು ಸೆಳೆಯಲು ರಾಹುಲ್ ದ್ರಾವಿಲ್ ಅಮೂಲ್ಯ ಸಲಹೆಟೆಸ್ಟ್‌ಗೆ ವೀಕ್ಷಕರನ್ನು ಸೆಳೆಯಲು ರಾಹುಲ್ ದ್ರಾವಿಲ್ ಅಮೂಲ್ಯ ಸಲಹೆ

ಅಂತೂ ಐಪಿಎಲ್ ಭವಿಷ್ಯದಲ್ಲಿ ಇನ್ನೊಂದು ಫ್ರಾಂಚೈಸಿ ಕಾಣಿಸಿಕೊಳ್ಳಲಿದೆ. ಆ ಹೊಸ ಫ್ರಾಂಚೈಸಿ ಯಾವುದಿರಬಹುದು ಎಂಬ ಉಳಿವೀಯುವ ಮಾಹಿತಿ ಇಲ್ಲಿದೆ.

ಸದ್ಯಕ್ಕೆ 9 ತಂಡಗಳು

ಸದ್ಯಕ್ಕೆ 9 ತಂಡಗಳು

ಇನ್ನೆರಡು ತಂಡಗಳನ್ನು ಹೆಚ್ಚಿಸಿದರೆ, ಅಂದರೆ ಐಪಿಎಲ್‌ನಲ್ಲಿ ಒಟ್ಟು 10 ತಂಡಗಳಾದರೆ ಸೀಸನ್ ಒಂದರಲ್ಲಿ 90ಕ್ಕೂ ಹೆಚ್ಚು ಪಂದ್ಯಗಳನ್ನು ಆಯೋಜಿಸಬೇಕಾದ ಇಕ್ಕಟಿಗೆ ಬಿಸಿಸಿಐ ಸಿಲುಕಲಿದೆ. ಅಲ್ಲದೆ ಐಸಿಸಿಯ ಫ್ಯೂಚರ್ ಟೂರ್ಸ್ ಪ್ರೋಗ್ರಾಮ್ (ಎಫ್‌ಟಿಪಿ) ಕೂಡ 9 ತಂಡಗಳಿಗೆ ಅನುಮತಿ ನೀಡುವುದನ್ನು ನಿರೀಕ್ಷಿಸಲಾಗಿದೆ.

10 ತಂಡಗಳೂ ಬರಲಿವೆ

10 ತಂಡಗಳೂ ಬರಲಿವೆ

ಒಟ್ಟು 9 ತಂಡಗಳಾದರೆ ಸುಮಾರು 76 ಪಂದ್ಯಗಳು, ಅಂದರೆ ಈಗಿರುವುದಕ್ಕಿಂತ ಕೊಂಚ ಹೆಚ್ಚು ಪಂದ್ಯಗಳನ್ನು ಮುಂಬರಲಿರುವ ಐಪಿಎಲ್ ಸೀಸನ್‌ಗಳಲ್ಲಿ ವೀಕ್ಷಿಸಲು ಅವಕಾಶವಿದೆ. ಅಂದರೆ 2020ರಿಂದ 2022ರ ವರೆಗಂತೂ ಐಪಿಎಲ್‌ನಲ್ಲಿ 9 ತಂಡಗಳಿದ್ದು, 2023ರ ನಂತರ 10 ತಂಗಳನ್ನು ಬಿಸಿಸಿಐ ಪರಿಚಯಿಸುವ ಸಾಧ್ಯತೆಯಿದೆ.

2000 ಕೋ.ರೂ. ಬೆಲೆ!

2000 ಕೋ.ರೂ. ಬೆಲೆ!

ಹೊಸದಾಗಿ ಆರಂಭವಾಗುವ ಫ್ರಾಂಚೈಸಿಯ ಮೂಲಬೆಲೆ ಸುಮಾರು 2000 ಕೋ.ರೂ.ಗಳನ್ನು ನಿಗದಿಪಡಿಸುವತ್ತ ಬಿಸಿಸಿಐ ಆಲೋಚಿಸುತ್ತಿದೆ. ಆದರೆ ಸದ್ಯಕ್ಕೆ ಈ ದೊಡ್ಡ ಮಟ್ಟಿನ ಬಂಡವಾಳ ಹೂಡಿಕೆಗೆ ಒಂದಕ್ಕಿಂತ ಹೆಚ್ಚು ತಾಣಗಳು ಆಸಕ್ತಿ ತಾಳಬಹುದೇ ಎಂಬ ಬಗ್ಗೆ ಇನ್ನೂ ಬಿಸಿಸಿಐ ಖಚಿತಪಡಿಸಿಲ್ಲ.

ಗುಜರಾತ್‌ನಲ್ಲಿ ಬೃಹತ್ ಸ್ಟೇಡಿಯಂ

ಗುಜರಾತ್‌ನಲ್ಲಿ ಬೃಹತ್ ಸ್ಟೇಡಿಯಂ

ಗುಜರಾತ್‌ನ ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂ ಇದೇ ವರ್ಷ ಮಾರ್ಚ್‌ನಿಂದ ಕ್ರಿಕೆಟ್‌ಗೆ ಪಂದ್ಯಗಳಿಗೆ ಲಭ್ಯವಾಗಲಿದೆ. 1.1 ಲಕ್ಷ ಸಾಮರ್ಥ್ಯವಿರುವ ಈ ಬೃಹತ್ ತಾಣ ವಿಶ್ವದಲ್ಲೇ ಅತೀ ದೊಡ್ಡ ಸ್ಟೇಡಿಯಂ ಅಗಿ ಗುರುತಿಸಿಕೊಳ್ಳಲಿದೆ. ಹೀಗಾಗಿ ಇದೇ ತಾಣಕ್ಕೆ ಸಂಬಂಧಿಸಿ ಒಂದು ಹೊಸ ಫ್ರಾಂಚೈಸಿ ಶುರುವಾಗುವ ನಿರೀಕ್ಷೆ ಮೂಡಿಸಿದೆ.

Story first published: Thursday, November 21, 2019, 16:11 [IST]
Other articles published on Nov 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X