ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆರಂಭೋತ್ಸವದ ಹಣವನ್ನು ಭಾರತೀಯ ಸೇನೆಗೆ ನೀಡಿದ ಬಿಸಿಸಿಐ

BCCI donates IPL 2019 opening ceremony funds to CRPF and Armed Forces

ನವದೆಹಲಿ, ಮಾರ್ಚ್ 23: ಐಪಿಎಲ್ 2019ರ ಆರಂಭೋತ್ಸವಕ್ಕೆ ಖರ್ಚಾಗಲಿದ್ದ 20 ಕೋ.ರೂ. ಹಣವನ್ನು ಬಿಸಿಸಿಐ, ಭಾರತೀಯ ಸಶಸ್ತ್ರ ಪಡೆ ಮತ್ತು ಸಿಆರ್‌ಪಿಎಫ್‌ಗೆ ನೀಡಿದೆ. ಶನಿವಾರ (ಮಾರ್ಚ್ 23) ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಬಿಸಿಸಿಐ ನಿಧಿಯನ್ನು ಭಾರತೀಯ ಸೇನೆಗೆ ನೀಡಿತು.

Azlan Shah Cup: ಬಲಿಷ್ಠ ಜಪಾನ್ ಮಣಿಸಿದ ಭಾರತದ ಹಾಕಿ ಪುರುಷರುAzlan Shah Cup: ಬಲಿಷ್ಠ ಜಪಾನ್ ಮಣಿಸಿದ ಭಾರತದ ಹಾಕಿ ಪುರುಷರು

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಎಂಬಲ್ಲಿ ನಡೆದಿದ್ದ ಉಗ್ರರ ದಾಳಿಯಲ್ಲಿ ಭಾರತೀಯ ಸುಮಾರು 40 ಸಿಆರ್‌ಪಿಎಫ್‌ ಯೋಧರು ಮೃತರಾಗಿದ್ದರು. ಹೀಗಾಗಿ ಐಪಿಎಲ್ ಆರಂಭೋತ್ಸವವನ್ನು ನಡೆಸಬಾರದು ಎಂದು ಬಿಸಿಸಿಐಯ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ (ಸಿಒಎ) ನಿರ್ಧರಿಸಿತ್ತು. ಆ ಹಣವನ್ನು ಸೇನೆಗೆ ಬಳಸೋದು ಸಿಒಎ ಯೋಜನೆಯಾಗಿತ್ತು.

'ಮೊದಲೇ ನಿರ್ಧರಿಸಿದಂತೆ ಹಣದಲ್ಲಿ 11 ಕೋ.ರೂ.ವನ್ನು ಭಾರತೀಯ ಸೇನೆ, 7 ಕೋ.ರೂ. ಸಿಆರ್‌ಪಿಎಫ್‌ ಮತ್ತು ತಲಾ 1 ಕೋ.ರೂ.ವನ್ನು ನೇವಿ (ನೌಕಾಪಡೆ) ಮತ್ತು ಏರ್ ಫೋರ್ಸ್ (ವಾಯುಪಡೆ)ಗೆ ನೀಡುತ್ತಿದ್ದೇವೆ' ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.

Story first published: Saturday, March 23, 2019, 22:41 [IST]
Other articles published on Mar 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X