ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಾಧ್ಯಮದಿಂದ ಅಂತರ ಕಾಯ್ದುಕೊಳ್ಳಿ, ಇಲ್ಲವೇ ಅಮಾನತಾಗಿ: ಬಿಸಿಸಿಐ ಎಚ್ಚರಿಕೆ

Bcci Gags Employees From Talking To Media

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ತನ್ನ ಉದ್ಯೋಗಿಗಳಿಗೆ ಕಠಿಣ ಎಚ್ಚರಿಕೆಯ ಮೇಲ್ ಸಂದೇಶ ಒಂದನ್ನು ಕಳುಹಿಸಿದೆ. ಈ ಮೇಲ್‌ನಲ್ಲಿ ಮಾಧ್ಯಮಗಳೊಂದಿಗೆ ಅಂತರ ಕಾಯ್ದುಕೊಳ್ಳಲು ಸ್ಪಷ್ಟವಾಗಿ ಬಿಸಿಸಿಐ ತನ್ನ ಉದ್ಯೋಗಿಗಳಿಗೆ ಸೂಚನೆಯನ್ನು ನೀಡಿದೆ.

ಯಾವುದೇ ಮಹತ್ವದ ನಿರ್ಧಾರ ಅಥವಾ ಚರ್ಚೆಗಳ ಬಗ್ಗೆ ಗೌಪ್ಯತೆಗಳನ್ನು ಕಾಪಾಡಿಕೊಳ್ಳಲು ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ. ಬಿಸಿಸಿಐನಲ್ಲಿ ಆದ ಚರ್ಚೆಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ರವಾನೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಬಿಸಿಸಿಐ ಕ್ರಮವನ್ನು ಕೈಗೊಳ್ಳಲು ಮುಂದಾಗುತ್ತಿದೆ.

'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್'ಭಾರತ ವಿಶ್ವ ಚಾಂಪಿಯನ್ ಆಗೋಲ್ಲ': ಗಂಭೀರ ಕಾರಣ ಹೇಳಿದ ಗಂಭೀರ್

ಬಿಸಿಸಿಐ ಉಪಾಧ್ಯಕ್ಷ ಜಯ್ ಶಾ ಅವರ ಕಛೇರಿಯಿಂದ ಈ ಬಗ್ಗೆ ಮೇಲ್ ಸಂದೇಶವನ್ನು ರವಾನಿಸಿದ್ದಾರೆ. ಮುಂಬೈ ಮುಖ್ಯ ಕಛೇರಿ ಹಾಗೂ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ನೂರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಮೇಲ್ ಮೂಲಕ ವಾರ್ನಿಂಗ್ ರವಾನಿಸಲಾಗಿದೆ.

ಮುಂದಿನ ದಿನಗಳಲ್ಲಿ ಮಾಧ್ಯಮಗಳಿಗೆ ಯಾವುದೇ ಮಾಹಿತಿಯನ್ನು ನೀಡುವುದಾದರೂ ಸಂಬಂಧಿಸಿದ ಅಧಿಕಾರಿಗಳ ಪೂರ್ವಾನುಮತಿ ಕಡ್ಡಾಯ, ಅನುಮತಿ ಇಲ್ಲದೆ ಮಾಧ್ಯಮದ ಮುಂದೆ ಹಾಜರಾದಲ್ಲಿ ಅಂತಹ ಉದ್ಯೋಗಿ ಅಮಾನತಿಗೆ ಗುರಿಯಾಗಲಿದ್ದಾರೆ ಎಂಬ ಎಚ್ಚರಿಕೆಯ ಸಂದೇಶ ಈ ಮೇಲ್‌ನಲ್ಲಿ ಇದೆ. ತಪ್ಪಿದಲ್ಲಿ ಕಠಿಣ ಕ್ರಮ ಅಥವಾ ಅಮಾನತಿನ ಶಿಕ್ಷೆಯ ಬಗ್ಗೆ ಎಚ್ಚರಿಕೆ ಈ ಸಂದೇಶದಲ್ಲಿದೆ.

'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!'ಕೊಹ್ಲಿಯಲ್ಲಿ ಅಹಂ ಇದೆ': ವಿರಾಟ್ ಔಟ್‌ಗೆ ಐಡಿಯಾಗಳ ಕೊಟ್ಟ ಮುಷ್ತಾಕ್!

ಬಿಸಿಸಿಐ ನಡೆಸುತ್ತಿದ್ದ ಕೆಲ ಗೌಪ್ಯ ಮೀಟಿಂಗ್‌ಗಳ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ದೊರೆಯುತ್ತಿತ್ತು. ಮಾಹಿತಿಗಳನ್ನು ಮಾಧ್ಯಮಗಳಿಗೆ ಬಿಸಿಸಿಐ ಅಧಿಕಾರಿಗಳೇ ನೀಡುತ್ತಿದ್ದಾರೆ ಎಂಬ ಕಾರಣದಿಂದಾಗಿ ಬಿಸಿಸಿಐ ಉಪಾಧ್ಯಕ್ಷ ಜಯ್ ಶಾ ಈ ಬಗ್ಗೆ ಕ್ರಮ ಕೈಗೊಳ್ಳಲು ಈ ಕ್ರಮ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

Story first published: Monday, June 15, 2020, 9:57 [IST]
Other articles published on Jun 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X