ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ವಿದೇಶಿ ಬೋರ್ಡ್‌ಗಳ ಜೊತೆ ಬಿಸಿಸಿಐ ನಿರಂತರ ಸಂಪರ್ಕ

Bcci In Touch With Other Boards On The Coronavirus Updates

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಪಿಎಲ್ ಸದ್ಯ ಮುಂದೂಡಿಕೆಯಾಗಿದೆ. ಈ ಮಧ್ಯೆ ಏಪ್ರಿಲ್ 14ರ ವರೆಗೆ ಇಡೀ ಭಾರತವೇ ಲಾಕ್‌ಡೌನ್ ಆಗಿದ್ದು ಐಪಿಎಲ್ ನಡೆಯುವುದೇ ಅನುಮಾನವೆನಿಸಿದೆ. ಐಪಿಎಲ್ ಕುರಿತಾಗಿ ಎಲ್ಲಾ ಚಟುವಟಿಕೆಗಳೂ ಸ್ಥಬ್ಧವಾಗಿದೆ.

ಈ ಮಧ್ಯೆ ಬಿಸಿಸಿಐ ಮೂಲಕಗಳಿಂದಲೇ ಮತ್ತೊಂದು ಕುತೂಹಲಕಾರಿ ಬೆಳವಣಿಗೆ ಆಂತರಿಕವಾಗಿ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಐಪಿಎಲ್ ಬಗ್ಗೆ ಬಿಸಿಸಿಐ ಕೈಕಟ್ಟಿಕುಳಿತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ವಿದೇಶಿ ಕ್ರಿಕೆಟ್ ಮಂಡಳಿಗಳ ಜೊತೆಗೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿ ಇದೆ ಎಂದು ಮಾಹಿತಿ ಹೊರಬಿದ್ದಿದೆ.

ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

ಬಿಸಿಸಿಐ ಐಪಿಎಲ್ ಆಯೋಜಿಸುವ ಬಗ್ಗೆ ಇನ್ನು ಒಂದು ಅವಕಾಶವನ್ನು ಹೊಂದಿದೆ. ಅದು ವಿಶ್ವಕಪ್‌ಅನ್ನು ಐಸಿಸಿ ಮುಂದೂಡಿದರೆ ಆ ಸಂದರ್ಭದಲ್ಲಿ ಐಪಿಎಲ್ ನಡೆಸುವುದು. ಇದೇ ಹಿನ್ನೆಲೆಯಲ್ಲಿ ಬಿಸಿಸಿಐ ವಿದೇಶಿ ಮಂಡಳಿಗಳ ಜೊತೆಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗ್ತಿದೆ.

ಐಪಿಎಲ್ ನಡೆಯಬೇಕಾದರೆ ವಿದೇಶಿ ಆಟಗಾರರು ಬಹಳ ಮಹತ್ವ. ವಿದೇಶಿ ಆಟಗಾರರಿಲ್ಲದೆ ಈ ಟೂರ್ನಿ ಇಷ್ಟೊಂದು ರೋಚಕತೆಯನ್ನು ಗಳಿಸಿಕೊಳ್ಳು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಒಂದು ವೇಲೆ ಐಪಿಎಲ್ ನಡೆಸುವ ಅವಕಾಶ ದೊರೆತಲ್ಲಿ ವಿದೇಶಿ ಆಟಗಾರರನ್ನು ಐಪಿಎಲ್ ನಲ್ಲಿ ಪಾಲ್ಗೊಳ್ಳುವಂತೆ ಮಾಡಲು ಬಿಸಿಸಿಐ ಈ ಕಾರ್ಯತಂತ್ರವನ್ನು ನಡೆಸುತ್ತಿದೆ.

ಪ್ರಧಾನಿ ಮೋದಿ ನಡೆಯ ಪರ್ಫೆಕ್ಟ್ ಭವಿಷ್ಯ ನುಡಿಯುತ್ತಿರುವ ಕ್ರಿಕೆಟ್ ಆಟಗಾರಪ್ರಧಾನಿ ಮೋದಿ ನಡೆಯ ಪರ್ಫೆಕ್ಟ್ ಭವಿಷ್ಯ ನುಡಿಯುತ್ತಿರುವ ಕ್ರಿಕೆಟ್ ಆಟಗಾರ

ಕ್ರಿಕೆಟ್ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗಳ ಜೊತೆಗೆ ಬಿಸಿಸಿಐ ನಿರಂತರ ವಾಗಿ ಸಂಪರ್ಕದಲ್ಲಿದೆ. ಮತ್ತು ಕೊರೊನಾ ವೈರಸ್ ವಿಚಾರವಾಗಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಈ ಮಂಡಳಿಗಳ ಜೊತೆಗೆ ಬಿಸಿಸಿಐ ಸಂಪರ್ಕದಲ್ಲಿದ್ದು ಮಾಹಿತಿಗಳ ವಿನಿಮಯ ನಡೆಯುತ್ತಿದೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ದೊರೆತಿದೆ.

Story first published: Sunday, April 5, 2020, 12:41 [IST]
Other articles published on Apr 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X