ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!

ಭಾರತ ತಂಡಕ್ಕೆ ಎಚ್ಚರಿಕೆ ಕೊಟ್ಟ ಪಾಕಿಸ್ತಾನ..? | Oneindia Kannada
BCCI informs Indian High Commission in Antigua about hoax terror threat

ಆ್ಯಂಟಿಗುವಾ, ಆಗಸ್ಟ್ 19: ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ಭಯೋತ್ಪಾದನಾ ದಾಳಿಯ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿರುವುದರಿಂದ ಬಿಸಿಸಿಐಯು ಈ ಬಗ್ಗೆ ಆ್ಯಂಟಿಗುವಾ ಸರ್ಕಾರಕ್ಕೆ ಮಾಹಿತಿ ರವಾನಿಸಿದೆ. ಭದ್ರತೆ ಒದಗಿಸಲು ಕೇಳಿಕೊಂಡಿದೆ.

ಸ್ಮಿತ್‌ಗೆ ಪೆಟ್ಟು ನೀಡಿ ನಗುತ್ತಿದ್ದ ಆರ್ಚರ್‌ಗೆ ಬೌನ್ಸರ್‌ ಎಸೆದ ಅಖ್ತರ್‌!ಸ್ಮಿತ್‌ಗೆ ಪೆಟ್ಟು ನೀಡಿ ನಗುತ್ತಿದ್ದ ಆರ್ಚರ್‌ಗೆ ಬೌನ್ಸರ್‌ ಎಸೆದ ಅಖ್ತರ್‌!

ಭಾನುವಾರ (ಆಗಸ್ಟ್ 18) ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಭಾರತೀಯ ಆಟಗಾರರಿಗೆ ಭಯೋತ್ಪಾದನಾ ದಾಳಿಯ ಬೆದರಿಕೆಯಿರುವ ವಿಚಾರವನ್ನು ಖಾತರಿಪಡಿಸಿತ್ತು. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌(ಪಿಸಿಬಿ)ಗೆ ಈ ಕುರಿಯು ಮೊದಲು ಮಾಹಿತಿ ಲಭಿಸಿತ್ತು ಎನ್ನಲಾಗಿದೆ.

ವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವ

ಪ್ರವಾಸ ಸರಣಿಯಲ್ಲಿ ಬಿಡುವಿನ ವೇಳೆ ದೇಸಿ ತಂಡದ ಆಟಗಾರ ಮೋಜು-ಮಸ್ತಿಯಲ್ಲಿ ಕಳೆಯುತ್ತಿದ್ದರು. ಭದ್ರತಾ ಬೆದರಿಕೆಯ ಬಳಿಕ ಆಟಗಾರರ ಮೋಜಿಗೆ ಬ್ರೇಕ್ ಬಿದ್ದಿದೆ.

ಅನಾಮಧೇಯರಿಂದ ಮೇಲ್

ಅನಾಮಧೇಯರಿಂದ ಮೇಲ್

ಪಿಸಿಬಿ ಅಧಿಕೃತ ಇಮೇಲ್ ಖಾತೆಗೆ ಅನಾಮಧೇಯರಿಂದ ಒಂದು ಇ-ಮೇಲ್ ಬಂದಿತ್ತು. ಇದರಲ್ಲಿ ಸದ್ಯ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಬಳಗದ ಮೇಲೆ ಭಯೋತ್ಪಾದನಾ ದಾಳಿಯಾಗಲಿದೆ ಎಂದು ತಿಳಿಸಲಾಗಿತ್ತು. ಪಿಸಿಬಿ ಕೂಡಲೇ ಆ ಇ-ಮೇಲ್‌ ಅನ್ನು ಐಸಿಸಿ ಮತ್ತು ಬಿಸಿಸಿಐಗೆ ಫಾರ್ವರ್ಡ್ ಮಾಡಿತ್ತು ಎಂದು ತಿಳಿದುಬಂದಿದೆ.

ಸಂಘಟನೆಯ ಸುಳಿವಿಲ್ಲ

ಸಂಘಟನೆಯ ಸುಳಿವಿಲ್ಲ

ಪಿಸಿಬಿಗೆ ಬಂದಿದ್ದ ಮೇಲ್‌ನಲ್ಲಿ ಬೆದರಿಕೆಯೊಡ್ಡಿದ್ದು ಯಾವ ಸಂಘಟನೆ ಎಂದು ನಿಖರವಾಗಿ ಹೇಳಲಾಗಿಲ್ಲ. ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, 'ನಾವು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಮತ್ತು ಅದು ವಂಚನೆಯ ಇ-ಮೇಲ್ ಎಂದು ತಿಳಿದುಬಂದಿದೆ,' ಎಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಹಾಗಂತ ಆಟಗಾರರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಟಿ20, ಏಕದಿನ ಸರಣಿ ಗೆಲುವು

ಟಿ20, ಏಕದಿನ ಸರಣಿ ಗೆಲುವು

ವೆಸ್ಟ್ ಇಂಡೀಸ್ ಪ್ರವಾಸದ ಟಿ20, ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ, ಇನ್ನು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸದ್ಯ 3 ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಆಗಸ್ಟ್ 22ರಂದು ಮೊದಲ ಟೆಸ್ಟ್ ಪಂದ್ಯ ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

ಪೂಜಾರ ಶತಕ

ಪೂಜಾರ ಶತಕ

ಅಭ್ಯಾಸ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ ಪೂಜಾರ ಶತಕ ಬಾರಿಸಿದ್ದಾರೆ. 187 ಎಸೆತಕ್ಕೆ ಪೂಜಾರ ಭರ್ತಿ 100 ರನ್ ಗಳಿಸಿದ್ದರು. ರೋಹಿತ್ ಶರ್ಮಾ 68 ರನ್‌ನೊಂದಿಗೆ ಭಾರತ 297 ರನ್ ಮಾಡಿತ್ತು. ಇನ್ನಿಂಗ್ಸ್ ಆರಂಭಿಸಿದ್ದ ವಿಂಡೀಸ್ 181 ರನ್ ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆಡುತ್ತಿರುವ ಭಾರತ 1 ವಿಕೆಟ್ ಕಳೆದು 84 ರನ್ ಮಾಡಿದೆ. ನಾಯಕ ಅಜಿಂಕ್ಯ ರಹಾನೆ (20), ಹನುಮ ವಿಹಾರಿ (48) ಕ್ರೀಸ್‌ನಲ್ಲಿದ್ದಾರೆ.

Story first published: Monday, August 19, 2019, 11:15 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X