ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾಗೆ ಹೊಸ ಕೋಚ್‌ ತರುವ ಆಲೋಚನೆಯಲ್ಲಿ ಬಿಸಿಸಿಐ

BCCI invites application for coachs job, Shastri & Co get auto entry

ಹೊಸದಿಲ್ಲಿ, ಜುಲೈ 16: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಟೀಮ್‌ ಇಂಡಿಯಾಗೆ ನೂತನ ಕೋಚ್‌ ತರುವ ಆಲೋಚನೆಯಲ್ಲಿದ್ದು, ಮುಖ್ಯ ಕೋಚ್‌, ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಕೋಚ್‌ ಹಾಗೂ ಫೀಲ್ಡಿಂಗ್‌ ಕೋಚ್‌ ಸೇರಿದಂತೆ ವಿವಿಧ ಹುದ್ದೆಗಳಿಗೆ ಮಂಗಳವಾರ ಅರ್ಜಿ ಆಹ್ವಾನಿಸಿದೆ.

ಇದೇ ವೇಳೆ ತಂಡದ ಫಿಸಿಯೊ, ಮ್ಯಾನೇಜರ್‌ ಮತ್ತು ಸ್ಟ್ರೆಂತ್‌ ಅಂಡ್‌ ಕಂಡೀಷನಿಂಗ್‌ ಕೋಚ್‌ ಹುದ್ದೆಗಳಿಗು ಕೂಡ ಅರ್ಜಿ ಆಹ್ವಾನಿಸಿರುವ ಬಿಸಿಸಿಐ ಈಗಿರುವ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮತ್ತು ತಂಡಕ್ಕೆ ನೇಮಕಾತಿ ಪ್ರಕ್ರಿಯೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಅನುಮತಿಸಿದೆ. ಶಾಸ್ತ್ರಿ ಅಂಡ್‌ ಟೀಮ್‌ ಜೊತೆಗಿನ ಒಪ್ಪಂದ ವಿಶ್ವಕಪ್‌ನೊಂದಿಗೆ ಅಂತ್ಯಗೊಂಡರೂ ಒಂದು ತಿಂಗಳ ವರೆಗೆ ವಿಸ್ತರಿಸಲಾಗಿತ್ತು.

ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!

"ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಜುಲೈ 30, 2019ರ ಒಳಗಾಗಿ [email protected]ಗೆ ಕಳುಹಿಸಿಕೊಡತಕ್ಕದ್ದು," ಎಂದು ಬಿಸಿಸಿಐ ನೂತನ ಕೋಚ್‌ ನೇಮಕಾತಿ ಕುರಿತಾಗಿ ಅರ್ಜಿ ಆಹ್ವಾನಿಸುತ್ತಿರುವ ಸಂಗತಿಯನ್ನಯ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಈ ಮೂಲಕ ಶಾಸ್ತ್ರಿ ಮತ್ತು ಬಳಗ ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗಳನ್ನು ಮರಳಿ ಪಡೆಯಲಿವೆಯೇ? ಎಂಬ ಪ್ರಶ್ನೆಗಳು ಕಾಡುತ್ತಿದ್ದು, ನೂತನ ಕೋಚ್‌ ನೇಮಕಾತಿಯಾದರೆ ಯಾರಾಗಬಹುದು ಎಂದೆಲ್ಲಾ ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆ ಆರಂಭವಾಗದೆ. ಇನ್ನು ಕಳೆದ ಬಾರಿ ಅನಿಲ್‌ ಕುಂಬ್ಳೆ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ರವಿ ಶಾಸ್ತ್ರಿ ಅರ್ಜಿ ಸಲ್ಲಿಸಲಿ ಎನ್ನುವ ಸಲುವಾಗಿ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲಾಗಿತ್ತು.

ICC ODI Rankings: ವಿಶ್ವಕಪ್‌ ಮುಗಿದ ನಂತರ ಆದ ಬದಲಾವಣೆಗಳೇನು?ICC ODI Rankings: ವಿಶ್ವಕಪ್‌ ಮುಗಿದ ನಂತರ ಆದ ಬದಲಾವಣೆಗಳೇನು?

ಟೀಮ್‌ ಇಂಡಿಯಾದ ಕೋಚ್‌ ಹುದ್ದೆಗಾಗಿ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ಕೂಡ ಅರ್ಜಿ ಸಲ್ಲಿಸಿದ್ದರು. ಇದೀಗ ಅನಿಲ್‌ ಕುಂಬ್ಳೆ ಅವರ ಅರ್ಜಿ ಕೂಡ ಆಯ್ಕೆ ಪ್ರಕ್ರಿಯೆಯಲ್ಲಿ ನೇರವಾಗಿ ಪರಿಗಣಿಸಲಾಗುತ್ತದೆ. ಆದರೆ ಇವರೆಲ್ಲರನ್ನು ಹೊರತು ಪಡಿಸಿ ಬೇರೆ ಯಾರೆಲ್ಲಾ ಅರ್ಜಿ ಸಲ್ಲಿಸುತ್ತಾರೆ ಎಂಬ ಕುತೂಹಲ ಕೂಡ ಹೆಚ್ಚಾಗುತ್ತಿದೆ.

ವಿಶ್ವಕಪ್‌ ಫೈನಲ್‌ ಸೋಲಿನ ಬಗ್ಗೆ ಕೊನೆಗೂ ಮೌನ ಮುರಿದ ಕಿವೀಸ್‌ ಕೋಚ್‌ವಿಶ್ವಕಪ್‌ ಫೈನಲ್‌ ಸೋಲಿನ ಬಗ್ಗೆ ಕೊನೆಗೂ ಮೌನ ಮುರಿದ ಕಿವೀಸ್‌ ಕೋಚ್‌

ಭಾರತ ತಂಡ ಐಸಿಸಿ ವಿಶ್ವಕಪ್‌ ಟೂರ್ನಿಯ 12ನೇ ಆವೃತ್ತಿಯಲ್ಲಿ ಸೆಮಿಫೈನಲ್ಸ್‌ನಲ್ಲಿ ತನ್ನ ಅಭಿಯಾನ ಅಂತ್ಯಗೊಳಿಸಿತ್ತು. ಇನ್ನು ಕಳೆದ ಎರಡು ವರ್ಷಗಳಿಂದ ತಂಡದ ಬ್ಯಾಟಿಂಗ್‌ ಕ್ರಮಾಂಕದಲ್ಲಿ 4ನೇ ಕ್ರಮಾಂಕದ ಬ್ಯಾಟಿಂಗ್‌ ಗೊಂದಲ ನಿವಾರಣೆ ಯಾಗದೇ ಇರುವ ಹಿನ್ನೆಲೆಯಲ್ಲಿ ರವಿ ಶಾಸ್ತ್ರಿ ಬಳಗದಲ್ಲಿನ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಅವರ ಸ್ಥಾನಕ್ಕೆ ತೂಗುಗತ್ತಿ ನೇತಾಡುತ್ತಿದೆ. ಒಟ್ಟಾರೆ ವಿಶ್ವಕಪ್‌ನಲ್ಲಿ ಟ್ರೋಫಿ ಗೆಲ್ಲುವಲ್ಲಿ ವಿಫಲಗೊಂಡ ಭಾರತ ತಂಡದಲ್ಲಿ ಮುಂಬರುವ ದಿನಗಳಲ್ಲಿ ಹಲವು ಬದಲಾವಣೆಗಳು ಆಗುವುದಂತೂ ಖಂಡಿತ.

Story first published: Tuesday, July 16, 2019, 19:52 [IST]
Other articles published on Jul 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X