4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ನವದೆಹಲಿ, ಆಗಸ್ಟ್ 11: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವದಿಂದ ವಿವೋ ಹಿಂದೆ ಸರಿದಿರುವುದರಿಂದ ಆ ಜಾಗಕ್ಕೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಈ ವರ್ಷ ಆಗಸ್ಟ್ 18ರಿಂದ ಡಿಸೆಂಬರ್ 31ರ ವರೆಗೆ ಪ್ರಾಯೋಜಕತ್ವ ನೀಡಲು ಬಿಡ್‌ಗೆ ಆಹ್ವಾನ ನೀಡಲಾಗಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್: ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

4 ತಿಂಗಳ ಕಾಲ ಐಪಿಎಲ್ ಪ್ರಾಯೋಜಕತ್ವದ ಹಕ್ಕಿನ ಬಿಡ್‌ ಗೆಲ್ಲಲು ಆಸಕ್ತರು ಆಗಸ್ಟ್ 14ರ ಒಳಗೆ ಆರ್ಜಿ ಸಲ್ಲಿಸಬೇಕಿದೆ. ಅದಾಗಿ 4 ದಿನಗಳ ಬಳಿಕ ಬಿಸಿಸಿಐ ಬಿಡ್ ವಿಜೇತರನ್ನು ಘೋಷಿಸಲಿದೆ. ಬಿಡ್ ವಿಜೇತರು ಅತ್ಯಧಿಕ ಬಿಡ್ ಮಾಡಿದವರು ಆಗಬೇಕಿಲ್ಲ, ಅದು ಬೇರೆ ಅಂಶಗಳನ್ನೂ ಅವಲಂಭಿಸಿ ನಿರ್ಧರಿಸಲಾಗುತ್ತದೆ ಎಂದು ಬಿಸಿಸಿಐ ಹೇಳಿದೆ.

ಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯ

ವಾರ್ಷಿಕವಾಗಿ 300 ಕೋ.ರೂ.ಗಿಂತಲೂ ಅಧಿಕ ವಹಿವಾಟು ಹೊಂದಿರುವ ಕಂಪನಿಗಳು ಮಾತ್ರ ಐಪಿಎಲ್ ಪ್ರಾಯೋಜಕತ್ವದ ಬಿಡ್‌ಗೆ ಅರ್ಹರು ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ. ಬಾಬಾ ರಾಮ್‌ದೇವ್ ಅವರ ಪತಂಜಲಿ ಕಂಪನಿ ಕೂಡ ಐಪಿಎಲ್ ಪ್ರಾಯೋಜಕತ್ವದ ಬಿಡ್‌ನತ್ತ ಆಸಕ್ತಿ ತೋರಿದೆ.

2021ರ ಐಪಿಎಲ್ ಆಟಗಾರರ ಹರಾಜು ಮುಂದೂಡಲು ಸಿದ್ಧತೆ: ವರದಿ

'ಅನುಮಾನವನ್ನು ತಪ್ಪಿಸಲು, ಚರ್ಚೆಗಳು/ಮಾತುಕತೆಗಳ ಸಂದರ್ಭದಲ್ಲಿ ಹೆಚ್ಚಿನ ಶುಲ್ಕವನ್ನು ಪಾವತಿಸುವ ಇಚ್ಛೆಯನ್ನು ಸೂಚಿಸುವ ಮೂರನೇ ವ್ಯಕ್ತಿಗೆ ಹಕ್ಕುಗಳನ್ನು ನೀಡಲು ಬಿಸಿಸಿಐ ನಿರ್ಬಂಧವನ್ನು ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ,' ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, August 11, 2020, 8:43 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X