ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿಟ್ ಪ್ರಾಯೋಜಕತ್ವ, ವ್ಯಾಪಾರ ಪಾಲುದಾರಿಕೆಗೆ ಬಿಡ್ ಆಹ್ವಾನಿಸಿದ ಬಿಸಿಸಿಐ

BCCI invites bids for kit sponsor and official merchandising partner rights

ಮುಂಬೈ, ಆಗಸ್ಟ್ 3: ನೈಕ್ ಸಂಸ್ಥೆಯ ಪ್ರಾಯೋಜಕತ್ವ ಕೊನೆಗೊಳ್ಳಲಿರುವುದರಿಂದ ಕಿಟ್ ಪ್ರಾಯೋಜಕತ್ವ ಮತ್ತು ಅಧಿಕೃತ ವ್ಯಾಪಾರ ಪಾಲುದಾರಿಕೆ ಹಕ್ಕುಗಳಿಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾವು ಆಸಕ್ತರಿಂದ ಬಿಡ್ ಆಹ್ವಾನಿಸಿದೆ.

ಐಪಿಎಲ್‌ 2020: ತಡವಾಗಿ ಯುಎಇಗೆ ಪ್ರಯಾಣಿಸಲಿವೆ ತಂಡಗಳುಐಪಿಎಲ್‌ 2020: ತಡವಾಗಿ ಯುಎಇಗೆ ಪ್ರಯಾಣಿಸಲಿವೆ ತಂಡಗಳು

ಸದ್ಯ ಟೀಮ್ ಇಂಡಿಯಾದ ಪ್ರಾಯೋಜಕತ್ವದ ಹಕ್ಕುಗಳನ್ನು ಹೊಂದಿರುವ ನೈಕ್‌ನ ಒಪ್ಪಂದ ಮುಂದಿನ ತಿಂಗಳು ಕೊನೆಗೊಳ್ಳುವುದರಲ್ಲಿದೆ. ಕ್ರೀಡಾ ಉತ್ಪನ್ನಗಳ ತಯಾರಕ ದೈತ್ಯ ಸಂಸ್ಥೆ ನೈಕ್, ಬಿಸಿಸಿಐ ಜೊತೆಗೆ 4 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. 30 ಕೋಟಿಯ ರಾಯಲ್ಟಿ ಜೊತೆಗೆ 370 ಕೋ.ರೂ.ಗಳ ಒಪ್ಪಂದ ಇದಾಗಿತ್ತು.

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ಟೆಂಡರ್‌ಗೆ ನೀಡಲಾದ ಆಹ್ವಾನದಲ್ಲಿ, ವಿಜೇತ ಬಿಡ್‌ದಾರನಿಗೆ ಕಿಟ್ ಪ್ರಾಯೋಜಕ ಮತ್ತು/ಅಥವಾ ಅಧಿಕೃತ ವ್ಯಾಪಾರ ಪಾಲುದಾರಿಕೆ ಮತ್ತು ಇತರ ಸಂಬಂಧಿತ ಹಕ್ಕುಗಳನ್ನು ನೀಡಲಾಗುತ್ತದೆ ಎಂದು ಬಿಸಿಸಿಐ ನೀಡಿರುವ ಇನ್ವಿಟೇಶನ್‌ ಟು ಟೆಂಡರ್ (ಐಟಿಟಿ)ನಲ್ಲಿ ಬರೆಯಲಾಗಿದೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

'ಅರ್ಹತಾ ಅವಶ್ಯಕತೆಗಳು ಮತ್ತು ಕಾರ್ಯಕ್ಷಮತೆ ಕಟ್ಟುಪಾಡುಗಳು ಸೇರಿದಂತೆ ಬಿಡ್‌ಗಳ ಸಲ್ಲಿಕೆ ಮತ್ತು ಮೌಲ್ಯಮಾಪನವನ್ನು ನಿಯಂತ್ರಿಸುವ ನಿಯಮಗಳು ಮತ್ತು ಷರತ್ತುಗಳು ಐಟಿಟಿಯಲ್ಲಿವೆ. ಒಂದು ಲಕ್ಷ ರೂ.ಗಳ ಟೆಂಡರ್ ಶುಲ್ಕವನ್ನು ಪಾವತಿಸಿದವರಿಗೆ 2020ರ ಆಗಸ್ಟ್ 3ರಿಂದ ಐಟಿಟಿ ಲಭ್ಯವಿರುತ್ತದೆ' ಎಂದು ಬಿಸಿಸಿಐ ಪ್ರಕಟನೆ ತಿಳಿಸಿದೆ.

Story first published: Tuesday, August 4, 2020, 9:59 [IST]
Other articles published on Aug 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X