ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್ಥಿಕ ಸಂಕಷ್ಟದ ಭೀತಿಯಲ್ಲಿದೆ ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ!

BCCI is looking at a big revenue loss in case IPL does not take place says Arun Dhumal

ನವದೆಹಲಿ, ಮೇ 13: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಏನಿಲ್ಲವೆಂದರೂ ಸುಮಾರು 530 ಮಿಲಿಯನ್ ಡಾಲರ್ (39,96,89,96,000 ರೂ.) ನಷ್ಟ ಅನುಭವಿಸುವ ಸಂಭವವಿದೆ. ಕೊರೊನಾವೈರಸ್‌ನಿಂದ ಭಾರತದ ಅದ್ದೂರಿ ಕ್ರಿಕೆಟ್‌ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಂದು ವೇಳೆ ರದ್ದಾದರೆ ಭಾರತದ ಕ್ರಿಕೆಟ್‌ ಬೋರ್ಡ್‌ ಆರ್ಥಿಕ ಸಮಸ್ಯೆ ಅನುಭವಿಸಲಿದೆ.

ಆತನ ಆಟವನ್ನು ನಂಬುವುದು ಅಸಾಧ್ಯ: ವಿರಾಟ್ ಕೊಹ್ಲಿ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗನ ಮಾತುಆತನ ಆಟವನ್ನು ನಂಬುವುದು ಅಸಾಧ್ಯ: ವಿರಾಟ್ ಕೊಹ್ಲಿ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗನ ಮಾತು

ಎಲ್ಲಾ ಸರಿಯಿದ್ದಿದ್ದರೆ 13ನೇ ಆವೃತ್ತಿಯ ಐಪಿಎಲ್ ಮಾರ್ಚ್ 29ರಿಂದ ಮೇ 4ರವರೆಗೆ ನಡೆಯುವುದರಲ್ಲಿತ್ತು. ಅಷ್ಟರಲ್ಲಾಗಲೇ ಕೊರೊನಾ ಭೀತಿಗೆ ಭಾರತದಲ್ಲಿ ಲಾಕ್‌ಡೌನ್ ಜಾರಿಯಾಗಿತ್ತು. ಹೀಗಾಗಿ ಏಪ್ರಿಲ್ 15ರ ಬಳಿಕ ಐಪಿಎಲ್ ನಡೆಸುವುದಾಗಿ ಬಿಸಿಸಿಐ ಹೇಳಿತ್ತು. ಆದರೆ ಏಪ್ರಿಲ್ 15ರ ಬಳಿಕವೂ ಲಾಕ್‌ಡೌನ್ ಸಡಿಲಿಸದಿದ್ದರಿಂದ ಟೂರ್ನಿಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ತಿಲಕರತ್ನೆ ದಿಲ್ಶನ್ ಆಲ್ ಟೈಮ್ XIನಲ್ಲಿ ಆಂಗ್ಲರಿಲ್ಲ, ಒಬ್ಬನೇ ಭಾರತೀಯ!ತಿಲಕರತ್ನೆ ದಿಲ್ಶನ್ ಆಲ್ ಟೈಮ್ XIನಲ್ಲಿ ಆಂಗ್ಲರಿಲ್ಲ, ಒಬ್ಬನೇ ಭಾರತೀಯ!

'ಆದಾಯದಲ್ಲಿ ದೊಡ್ಡ ನಷ್ಟ ಅನುಭವಿಸುವತ್ತ ಬಿಸಿಸಿಐ ನೋಡುತ್ತಿದೆ. ಒಂದು ವೇಳೆ ಐಪಿಎಲ್ ನಡೆಯದಿದ್ದರೆ ನಾವು ಸುಮಾರು 530 ಮಿಲಿಯನ್ ಡಾಲರ್‌ ಅಥವಾ ಹೆಚ್ಚು ನಷ್ಟ ಉಂಟಾಗಲಿದೆ,' ಎಂದು ಬಿಸಿಸಿಐ ಖಜಾಂಚಿ ಅರುಣ್ ಧೃಮಾಲ್ ಮಾಹಿತಿ ನೀಡಿದ್ದಾರೆ.

ಸುರೇಶ್ ರೈನಾ ತಂಡಕ್ಕೆ ಮರಳಬೇಕೆಂಬ ಆಶಯ ವ್ಯಕ್ತಪಡಿಸಿದ ರೋಹಿತ್ ಶರ್ಮಾಸುರೇಶ್ ರೈನಾ ತಂಡಕ್ಕೆ ಮರಳಬೇಕೆಂಬ ಆಶಯ ವ್ಯಕ್ತಪಡಿಸಿದ ರೋಹಿತ್ ಶರ್ಮಾ

2020ರ ಐಪಿಎಲ್ ರದ್ದಾದರೆ ಇದರಿಂದ ಸ್ಟಾರ್ ಇಂಡಿಯಾಕ್ಕೆ ಸುಮಾರು 3269.50 ಕೋ.ರೂ. ನಷ್ಟವಾಗಲಿದೆ. ಭಾರತೀಯ ಕ್ರಿಕೆಟ್‌ ಪ್ರಸಾರಕ ಸ್ಟಾರ್ ಇಂಡಿಯಾವು ಐಪಿಎಲ್ ಸಲುವಾಗಿ ವಿಶ್ವದಾದ್ಯಂತ 2018ರಿಂದ 2022ರ ಅವಧಿಗೆ ಸುಮಾರು 16,347.50 ಕೋ.ರೂ ಮೌಲ್ಯದ ಹಕ್ಕುಗಳನ್ನು ಹೊಂದಿದೆ.

Story first published: Wednesday, May 13, 2020, 19:34 [IST]
Other articles published on May 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X